ಮೂಡುಬಿದಿರೆ: ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ!

ಮೂಡುಬಿದಿರೆ: ಗುರುವಾರದಿಂದ ನಾಪತ್ತೆಯಾಗಿದ್ದ ಅಲಂಗಾರು ಆಶ್ರಯ ಕಾಲನಿ ಸಮೀಪದ ಬಂಗೇರಬೆಟ್ಟು ನಿವಾಸಿ ಕಾರ್ತಿಕ್ ಶೆಟ್ಟಿ (34) ಎಂಬವರ ಮೃತದೇಹವು ಶನಿವಾರ ಬೆಳಗ್ಗೆ ಮನೆಯ ಸಮೀಪದ ಶೆಡ್ ಹೊರಗೆ ಪತ್ತೆಯಾಗಿದೆ.

ಕಾರ್ತಿಕ್ ಅವಿವಾಹಿತರಾಗಿದ್ದು, ಹಿಟಾಚಿ ಹಾಗೂ ಜೆಸಿಬಿ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕವಾಗಿ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಳಿಕ ನಿಖರ ಕಾರಣ ತಿಳಿದುಬರಲಿದೆ.