Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಾಟ್ಸಾಪ್ ಹೊಸ ವೈಶಿಷ್ಟ್ಯಕ್ಕೆ ಬ್ರೇಕ್: ಸರ್ಕಾರಿ ಸೂಚನೆ ಬಳಿಕ ಭದ್ರತಾ ಕ್ರಮಗಳತ್ತ ಮೆಟಾ ಗಮನ

Spread the love

ಹೊಸದಿಲ್ಲಿ: ವಾಟ್ಸಾಪ್ ನ ಹೊಸ ‘ಯೂಸರ್‌ನೇಮ್’ ವೈಶಿಷ್ಟ್ಯವನ್ನು ತಾತ್ಕಾಲಿಕವಾಗಿ ಜಾರಿಗೊಳಿಸದಂತೆ ಕೇಂದ್ರ ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ, ನಕಲಿ ಗುರುತಿನ ಬಳಕೆ ಮತ್ತು ವಂಚನೆ ತಡೆಯಲು ಹಲವು ಭದ್ರತಾ ಕ್ರಮಗಳನ್ನು ಜಾರಿಗೆ ತಂದಿರುವುದಾಗಿ ಮೆಟಾ ಸಂಸ್ಥೆ ತಿಳಿಸಿದೆ.
NDTV ಪ್ರಾಫಿಟ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ವಾಟ್ಸಾಪ್ ವಕ್ತಾರರು, ಸಾರ್ವಜನಿಕ ವ್ಯಕ್ತಿಗಳು, ಸರ್ಕಾರಿ ಸಂಸ್ಥೆಗಳು ಮತ್ತು ಸೆಲೆಬ್ರಿಟಿಗಳಂತಹ ಹೈ-ಪ್ರೊಫೈಲ್ ಹೆಸರುಗಳನ್ನು ಅವುಗಳ ಕಾನೂನುಬದ್ಧ ಮಾಲೀಕರು ಮಾತ್ರ ಬಳಸಬಹುದಾದ ರೀತಿಯಲ್ಲಿ ಮುಂಚಿತವಾಗಿಯೇ ಮೀಸಲಿರಿಸಲಾಗಿದೆ ಎಂದು ತಿಳಿಸಿದ್ದಾರೆ. ಇಂತಹ ಹೆಸರುಗಳಿಗೆ ಹೋಲುವ ಯೂಸರ್‌ನೇಮ್‌ಗಳನ್ನೂ ನಿರ್ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳದೆಯೇ ಇತರರೊಂದಿಗೆ ಸಂಪರ್ಕ ಸಾಧಿಸಲು ಈ ಯೂಸರ್‌ನೇಮ್ ವೈಶಿಷ್ಟ್ಯವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಮೆಟಾ ತಿಳಿಸಿದೆ. ಈ ವೈಶಿಷ್ಟ್ಯವನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದ್ದು, ಸದ್ಯ ಬಳಕೆದಾರರಿಗೆ ಯೂಸರ್‌ನೇಮ್ ಆಯ್ಕೆ ಮಾಡುವ ಅವಕಾಶ ಮಾತ್ರ ನೀಡಲಾಗಿದೆ.
ಆದರೆ, ವಾಟ್ಸಾಪ್ ಬಳಸಲು ಮೊಬೈಲ್ ಸಂಖ್ಯೆ ಕಡ್ಡಾಯವಾಗಿಯೇ ಮುಂದುವರಿಯುತ್ತದೆ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ನಕಲಿ ಗುರುತಿನ ಬಳಕೆ ಮತ್ತು ದುರುಪಯೋಗ ತಡೆಯಲು ಹಲವು ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿದೆ. ಅನುಕರಣೆ ಪ್ರಯತ್ನಗಳು ಮತ್ತು ಅನುಮಾನಾಸ್ಪದ ಚಟುವಟಿಕೆಗಳನ್ನು ಗುರುತಿಸಿ ನಿರ್ಬಂಧಿಸುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಒಂದು ಖಾತೆಯು ಎಷ್ಟು ಹೊಸ ಬಳಕೆದಾರರನ್ನು ಸಂಪರ್ಕಿಸಬಹುದು ಎಂಬುದಕ್ಕೂ ಮಿತಿ ವಿಧಿಸಲಾಗಿದೆ. ಅಲ್ಲದೆ, ಇತರರ ಯೂಸರ್‌ನೇಮ್‌ಗಳನ್ನು ಊಹಿಸುವ ಪ್ರಯತ್ನಗಳನ್ನೂ ತಡೆಯಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಯಾರಿಗಾದರೂ ಸಂದೇಶ ಕಳುಹಿಸಲು ಅವರ ನಿಖರವಾದ ಯೂಸರ್‌ನೇಮ್ ತಿಳಿದಿರಬೇಕು. ಯೂಸರ್‌ನೇಮ್ ಮೂಲಕ ಸಂಪರ್ಕ ಸಾಧಿಸುವಾಗ, ಆ ಖಾತೆಯು ಹೊಸದಾಗಿದೆಯೇ, ಈಗಾಗಲೇ ಸಂಪರ್ಕದಲ್ಲಿದೆಯೇ, ಸಾಮಾನ್ಯ ಗ್ರೂಪ್ ಗಳನ್ನು ಹೊಂದಿದೆಯೇ ಅಥವಾ ಯಾವ ದೇಶದಿಂದ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿಯನ್ನೂ ಬಳಕೆದಾರರಿಗೆ ತೋರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ಕೇಂದ್ರ ಸರ್ಕಾರವು ವಾಟ್ಸಾಪ್‌ಗೆ ನೋಟಿಸ್ ನೀಡಿ, ಮೂರು ದಿನಗಳೊಳಗೆ ಯೂಸರ್‌ನೇಮ್ ವೈಶಿಷ್ಟ್ಯದ ಕುರಿತು ವಿವರವಾದ ವಿವರಣೆ ಸಲ್ಲಿಸುವಂತೆ ಸೂಚಿಸಿತ್ತು. ಈ ವಿಷಯದ ಕುರಿತು ಸಮಾಲೋಚನೆ ಪೂರ್ಣಗೊಳ್ಳುವವರೆಗೆ ಈ ವೈಶಿಷ್ಟ್ಯವನ್ನು ಜಾರಿಗೊಳಿಸಬಾರದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಸರ್ಕಾರಿ ಇಲಾಖೆಗಳು, ಬ್ಯಾಂಕುಗಳು ಮತ್ತು ಇತರ ವಿಶ್ವಾಸಾರ್ಹ ಸಂಸ್ಥೆಗಳ ಹೆಸರಿನಲ್ಲಿ ನಕಲಿ ಗುರುತಿನ ಬಳಕೆ ಈ ಹೊಸ ವೈಶಿಷ್ಟ್ಯವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಳಕೆದಾರರ ಸುರಕ್ಷತೆ, ಹೊಣೆಗಾರಿಕೆ ಮತ್ತು ಭಾರತದ ಡಿಜಿಟಲ್ ನಿಯಮಗಳ ಅನುಸರಣೆಯ ದೃಷ್ಟಿಯಿಂದಲೂ ಈ ವೈಶಿಷ್ಟ್ಯವನ್ನು ಪರಿಶೀಲಿಸಲಾಗುತ್ತಿದೆ.
ನಕಲಿ ಗುರುತಿನ ಬಳಕೆ ಮತ್ತು ದುರುಪಯೋಗವನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಲು ಮೆಟಾ ಸಂಸ್ಥೆಗೆ ಕೇಂದ್ರ ಸರ್ಕಾರ ಸೂಚಿಸಿದೆ.

ತನ್ನ ನೋಟಿಸ್‌ನಲ್ಲಿ ಕೇಂದ್ರ ಸರ್ಕಾರವು, “ಈ ವೈಶಿಷ್ಟವು ಆನ್‌ಲೈನ್ ವಂಚನೆ, ಫಿಶಿಂಗ್, ಡಿಜಿಟಲ್ ಅರೆಸ್ಟ್ ವಂಚನೆಗಳು ಮತ್ತು ನಕಲಿ ಗುರುತಿನ ಬಳಕೆ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಇದರಿಂದ ದುರುದ್ದೇಶ ಹೊಂದಿರುವ ವ್ಯಕ್ತಿಗಳು ಸಂತ್ರಸ್ತರನ್ನು ಸುಲಭವಾಗಿ ಸಂಪರ್ಕಿಸಲು ಮತ್ತು ಸಂದೇಶ ಕಳುಹಿಸಲು ಅವಕಾಶ ಸಿಗಬಹುದು” ಎಂದು ಹೇಳಿದೆ.
“ನೈಜ ವ್ಯಕ್ತಿಗಳು ಅಥವಾ ಸಂಸ್ಥೆಗಳ ಯೂಸರ್‌ನೇಮ್‌ಗಳಿಗೆ ಹೋಲುವ ಹೆಸರುಗಳನ್ನು ಬಳಸಲು ಅವಕಾಶ ನೀಡುವುದರಿಂದ ಸಾರ್ವಜನಿಕ ಅಧಿಕಾರಿಗಳು, ಹಣಕಾಸು ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳ ಹೆಸರಿನಲ್ಲಿ ಗುರುತಿನ ವಂಚನೆ ಪ್ರಕರಣಗಳು ಹೆಚ್ಚಾಗುವ ಅಪಾಯವೂ ಇದೆ” ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಮೆಟಾ ಸಂಸ್ಥೆಯ ಪ್ರತಿಕ್ರಿಯೆಯನ್ನು ಪರಿಶೀಲಿಸಿದ ಬಳಿಕ ಮತ್ತು ಈ ವೈಶಿಷ್ಟದ ಭದ್ರತಾ ಪರಿಣಾಮಗಳ ಕುರಿತು ಹೆಚ್ಚಿನ ಸಮಾಲೋಚನೆ ನಡೆಸಿದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.


Spread the love
Share:

administrator

Leave a Reply

Your email address will not be published. Required fields are marked *