Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಶಿರಾಡಿ: ಚಲಿಸುತ್ತಿದ್ದ ಲಾರಿಯಲ್ಲಿ ಆಕಸ್ಮಿಕ ಬೆಂಕಿ; ಗುಂಡ್ಯ ಸಮೀಪದ ಹೆದ್ದಾರಿಯಲ್ಲಿ ಭೀಕರ ದೃಶ್ಯ

Spread the love

ಶಿರಾಡಿ : ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಮಯದಲ್ಲೇ ಲಾರಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಲಾರಿ ಸಂಪೂರ್ಣ ಹೊತ್ತಿ ಉರಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಗುಂಡ್ಯ ಸಮೀಪದ ಶಿರಾಡಿ ಎಂಬಲ್ಲಿ ಇಂದು ಮುಂಜಾನೆ ನಡೆದಿದೆ. ಮಂಗಳೂರು ಭಾಗದಿಂದ ಬೆಂಗಳೂರು ಹಾಗು ಆಂದ್ರಪ್ರದೇಶದ ಕಡೆಗೆ ಬಾಕ್ಸೈಟ್ ಸಾಗಿಸುತ್ತಿದ್ದ ಲಾರಿಯಲ್ಲಿ ಈ ಬೆಂಕಿ ಕಾಣಿಸಿಕೊಂಡಿದ್ದು, ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೆಲ ಸಮಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಬೆಂಕಿ ಕಾಣಿಸಿಕೊಂಡಂತೆ ಲಾರಿ ಚಾಲಕ ಲಾರಿಯಿಂದ ಹಾರಿ ಅಪಾಯದಿಂದ ಪಾರಾಗಿದ್ದಾನೆ. ಡಿಸೇಲ್ ಟ್ಯಾಂಕ್ ನಿಂದ ರಸ್ತೆಯ ತುಂಬಾ ಡಿಸೇಲ್ ಚೆಲ್ಲಿದ್ದು, ಆ ಡಿಸೇಲ್ ಗೆ ಬೆಂಕಿ ತಗುಲಿ ಲಾರಿಗೆ ಆವರಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ಧಾರೆ. ಡಿಸೇಲ್ ಲಾರಿಯಿಂದ ಹೇಗೆ ಲೀಕ್ ಆಯಿತು ಮತ್ತು ಬೆಂಕಿ ಹೇಗೆ ಹಚ್ಚಿಕೊಂಡಿತು ಅನ್ನೋದು ಮಾತ್ರ ನಿಗೂಢವಾಗಿದ್ದು, ಉಪ್ಪಿನಂಗಡಿ ಪೋಲೀಸರು ಪರಿಶೀಲನೆ ನಡೆಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *