Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೋಲ್ಕತ್ತಾ: ಟೇಕ್‌ಆಫ್‌ಗೆ ಸಿದ್ಧವಾಗಿದ್ದ ಇಂಡಿಗೋ ವಿಮಾನಕ್ಕೆ ಬಡಿದ ಭೀಕರ ಸಿಡಿಲು; ಪ್ರಯಾಣಿಕರು ಪಾರು, ಇಬ್ಬರು ಸಿಬ್ಬಂದಿಗೆ ಗಾಯ

Spread the love

ಕೋಲ್ಕತ್ತಾ: ಕೋಲ್ಕತ್ತಾದಲ್ಲಿ ಶುಕ್ರವಾರ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ವಿಮಾನ ನಿಲ್ದಾಣದಲ್ಲಿ ಅಗರ್ತಲಾಕ್ಕೆ ಹಾರಲು ಸಿದ್ಧವಾಗಿದ್ದ ಇಂಡಿಗೋ ವಿಮಾನಕ್ಕೆ ಸಿಡಿಲು ಬಡಿದಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(AAI)ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗುಡುಗು ಸಹಿತ ಭಾರೀ ಮಳೆಯ ನಡುವೆ ನಿಂತಿದ್ದ ವಿಮಾನಕ್ಕೆ ಸಿಡಿಲಿ ಬಡಿದಿದ್ದು, ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಿಡಿಲು ಬಡಿದಾಗ ಇಂಡಿಗೋ ವಿಮಾನ 6E6068(VT-IPW ಏರೋಬ್ರಿಡ್ಜ್ 56L ನಲ್ಲಿ ನಿಂತಿತ್ತು.

ಮುನ್ನೆಚ್ಚರಿಕೆ ಕ್ರಮವಾಗಿ, ವಿಮಾನಯಾನ ಸಂಸ್ಥೆಯು, ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಿತು. ನಂತರ ಅವರು ಮತ್ತೊಂದು ವಿಮಾನದಲ್ಲಿ(VT-ICD) ಪ್ರಯಾಣ ಮುಂದುವರೆಸಿದರು ಎಂದು ಅಧಿಕಾರಿ ಹೇಳಿದ್ದಾರೆ.

ಇಂಡಿಗೋ ಪ್ರಕಾರ, ಇಬ್ಬರು ಗ್ರೌಂಡ್ ಸಿಬ್ಬಂದಿಗೆ ಸ್ವಲ್ಪ “ಎಫೆಕ್ಟ್” ಆಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದಾಗ್ಯೂ, ನಂತರ ಅವರನ್ನು “ಸಾಮಾನ್ಯ” ಎಂದು ಘೋಷಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.

ಇಂದು ಬೆಳಿಗ್ಗೆಯಿಂದಲೇ ಕೋಲ್ಕತ್ತಾ ಮತ್ತು ಪಕ್ಕದ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುತ್ತಿದ್ದು, ಹಲವಾರು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ವಾಹನ ಸಂಚಾರ ಅಡಚಣೆ ಉಂಟಾಗಿದೆ.


Spread the love
Share:

administrator

Leave a Reply

Your email address will not be published. Required fields are marked *