ಕಣ್ಣೂರು: ಜಿದ್ದಾಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ; 180 ಪ್ರಯಾಣಿಕರು ಪಾರು!

ಕಣ್ಣೂರು: ಕಣ್ಣೂರು ವಿಮಾನ ನಿಲ್ದಾಣದಿಂದ ಜಿದ್ದಾಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸೆಸ್ ವಿಮಾನವು ತಾಂತ್ರಿಕ ದೋಷದ ಕಾರಣದಿಂದ ಹೊರಟ ಎರಡೇ ಗಂಟೆಗಳಲ್ಲಿ ವಾಪಸ್ ಮರಳಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, 180ಕ್ಕೂ ಹೆಚ್ಚು ಪ್ರಯಾಣಿಕರಿದ್ದ ವಿಮಾನವು ಬೆಳಿಗ್ಗೆ 7.40ಕ್ಕೆ ಕಣ್ಣೂರು ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿತ್ತು. ಆದರೆ, ಹಾರಾಟದ ಸುಮಾರು ಎರಡು ಗಂಟೆಗಳ ನಂತರ ಪೈಲಟ್ ಗಳಿಗೆ ತಾಂತ್ರಿಕ ದೋಷವೊಂದು ಕಂಡುಬಂದಿದ್ದು, ಕೂಡಲೇ ವಾಪಸ್ ಮರಳಲು ನಿರ್ಧರಿಸಿದರು.
“ವಿಮಾನವು ಕಣ್ಣೂರಿನಲ್ಲಿ ಸುರಕ್ಷಿತವಾಗಿ ಇಳಿದಿದೆ. ವಿಮಾನದಲ್ಲಿ ಉಂಟಾಗಿದ್ದ ತಾಂತ್ರಿಕ ತೊಂದರೆ ಏನು ಎಂಬುದು ಈಗಷ್ಟೇ ತನಿಖೆಯಿಂದ ತಿಳಿಯಬೇಕಿದೆ” ಎಂದು ಮೂಲಗಳು ತಿಳಿಸಿವೆ.
