ಲಂಡನ್: ಮಕ್ಕಳ ಬಾಲ್ಯ ರಕ್ಷಣೆಗೆ ಬ್ರಿಟನ್ ಮಹಾ ಹೆಜ್ಜೆ; 16 ವರ್ಷದೊಳಗಿನವರಿಗೆ ಸೋಶಿಯಲ್ ಮೀಡಿಯಾ ಕಂಪ್ಲೀಟ್ ಬ್ಯಾನ್!

ಲಂಡನ್: 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸುವ ಮಹತ್ವದ ನಿರ್ಧಾರವನ್ನು ಬ್ರಿಟನ್ ಪ್ರಕಟಿಸಿದೆ. “ಮಕ್ಕಳಿಗೆ ಅವರ ಬಾಲ್ಯವನ್ನು ಮರಳಿ ನೀಡಲು” ಈ ಕ್ರಮ ಕೈಗೊಳ್ಳಲಾಗಿದೆ ಎಂದು ಯುನೈಟೆಡ್ ಕಿಂಗ್ಲಮ್ ಪ್ರಧಾನಿ ಕೀರ್ ಸ್ವಾರ್ಮರ್ ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಆಸ್ಟ್ರೇಲಿಯಾ ಸೈಬರ್ ದಾಳಿಯಿಂದ ಮಕ್ಕಳನ್ನು ರಕ್ಷಿಸಲು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿತ್ತು. ಬ್ರಿಟನ್ ಕೂಡಾ ಅದೇ ಮಾದರಿಯನ್ನು ಅನುಸರಿಸಿದ್ದು, ಸ್ನಾಪ್ಟಾಟ್, ಟಿಕ್ ಟಾಕ್, ಯೂಟ್ಯೂಬ್, ಇನ್ಸಾಗ್ರಾಂ, ಫೇಸ್ಟುಕ್ ಮತ್ತು ಎಕ್ಸ್ ಸೇರಿದಂತೆ ಜಾಲತಾಣಗಳನ್ನು ನಿಷೇಧಿಸಲಾಗಿದೆ. ಆದರೆ ವಾಟ್ಸಪ್ ಮತ್ತು ಸಿಗ್ನಲ್ ಆಪ್ ಗಳನ್ನು ಅವಕಾಶ ನೀಡಿದ್ದು, 2027ರಲ್ಲಿ ಈ ನಿಷೇಧ ಜಾರಿಗೆ ಬರಲಿದೆ ಎಂದು ತಿಳಿದು ಬಂದಿದೆ.

ಈ ನಿಷೇಧವು ಮಕ್ಕಳ ಆನ್ಸೆನ್ ಕಲಿಕೆ, ಸುದ್ದಿ ಆಟಗಳಿಗೆ ಅನ್ವಯಿಸುವುದಿಲ್ಲ ಮತ್ತು ಕುಟುಂಬ ಹಾಗೂ ಸ್ನೇಹಿತರ ನಡುವಿನ ಸಂಪರ್ಕದಲ್ಲಿ ಇರಬಹುದಾಗಿದೆ ಎಂದು ಸ್ವಾರ್ಮರ್ ಹೇಳಿದರು.
ಈ ನಿಷೇಧ ಅಧಿಕೃತವಾಗಿ ಜಾರಿಯಾದ ಬಳಿಕ ಎಐ ಆಧರಿತ ಚಾಟ್ಬಾಟ್ಗಳ ಸೌಲಭ್ಯ ಪಡೆಯಲು ಕನಿಷ್ಠ 18 ವರ್ಷವಾಗಿರಬೇಕು. 16 ವರ್ಷಕ್ಕಿಂತ ಕೆಳಗಿನವರು ಲೈವ್ ಸ್ಟ್ರೀಮಿಂಗ್ ಮಾಡಲು ಅವಕಾಶಗಳಿರುವುದಿಲ್ಲ ಹಾಗೂ ಗೇಮಿಂಗ್ ಪ್ಲಾಟ್ಫಾರಂ ಸೇರಿದಂತೆ ಅಪರಿಚಿತರ ಜತೆ ಸಂಪರ್ಕವನ್ನು ಸಂಪೂರ್ಣ ನಿಷೇಧಿಸಲಾಗುತ್ತದೆ ಎಂದು ಅವರು ಹೇಳಿದರು.
ಯೂಟ್ಯೂಬ್ ಸೇರಿದಂತೆ ಹಲವು ಜಾಲತಾಣ ಕಂಪನಿಗಳು ಈ ಕ್ರಮವನ್ನು ಟೀಕಿಸಿವೆ.
“ಯೂಟ್ಯೂಬ್ ಯುವಜನರಿಗೆ, ಶಿಕ್ಷಣತಜ್ಞರಿಗೆ ಮತ್ತು ಪೋಷಕರಿಗೆ ಮಾಹಿತಿಗಳನ್ನು ನೀಡುವ ಪ್ರಮುಖ ವೇದಿಕೆಯಾಗಿದೆ. ಈ ನಿಷೇಧ ಕ್ರಮದಿಂದ ಮಕ್ಕಳು ಅವುಗಳ ಸೌಲಭ್ಯದಿಂದ ವಂಚಿತರಾಗಲಿದ್ದಾರೆ” ಎಂದು ಸಂಸ್ಥೆಯ ವಕ್ತಾರರು ಹೇಳಿಕೆ ನೀಡಿದ್ದಾರೆ.