Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಟೆಹರಾನ್: ಅಮೆರಿಕ ವಿರುದ್ಧ ಇರಾನ್ ಬಿಗ್ ರಿವೆಂಜ್; ಜೋರ್ಡಾನ್ ವಾಯುನೆಲೆಗಳ ಮೇಲೆ ಭೀಕರ ಕ್ಷಿಪಣಿ ದಾಳಿ!

Spread the love

ಟೆಹ್ರಾನ್: ಜೋರ್ಡಾನ್‌ನಲ್ಲಿರುವ ಅಮೆರಿಕದ ವಾಯುನೆಲೆಗಳು, ಯುದ್ಧ ವಿಮಾನಗಳು ಹಾಗೂ ಈ ಪ್ರದೇಶದಲ್ಲಿನ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC ) ಹೇಳಿದೆ ಎಂದು Aljazeera ವರದಿ ಮಾಡಿದೆ.
ಅಮೆರಿಕದ ಮಿಲಿಟರಿಯ F-35, F-15 ಮತ್ತು F-16 ಯುದ್ಧ ವಿಮಾನಗಳು, ಜೋರ್ಡಾನ್ ನ ಅಲ್-ಅಝಾಕ್ ವಾಯುನೆಲೆ ಹಾಗೂ ಅಲ್ಲಿನ ನಿಯಂತ್ರಣ ಕೇಂದ್ರದಲ್ಲಿ ಅಮೆರಿಕದ ಪಡೆಗಳು ಬಳಸುತ್ತಿರುವ ಪ್ರಮುಖ ಸೌಲಭ್ಯಗಳನ್ನು ಗುರಿಯಾಗಿಸಿ 12 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಲಾಗಿದೆ ಎಂದು IRGC ತಿಳಿಸಿದೆ.

ಇರಾನ್ ನ ಏರೋಸ್ಪೇಸ್ ಪಡೆ ಮತ್ತು ನೌಕಾಪಡೆಯು ಜಂಟಿಯಾಗಿ ಎರಡು ಹಂತಗಳಲ್ಲಿ ಕಾರ್ಯಾಚರಣೆ ನಡೆಸಿದ್ದು, ಅಮೆರಿಕದ ಪಡೆಗಳಿರುವ 18 ಪ್ರಮುಖ ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿದೆ ಎಂದು Tasnim news agency ವರದಿ ಮಾಡಿದೆ.
ಇರಾನ್ ಮೇಲಿನ ಅಮೆರಿಕದ ಇತ್ತೀಚಿನ ದಾಳಿಗಳಿಗೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು IRGC ಹೇಳಿದೆ.
ಅಮೆರಿಕದ ಕ್ರಮಗಳ ವಿರುದ್ಧ ತೀವ್ರ ಎಚ್ಚರಿಕೆ ನೀಡಿರುವ IRGC ಏರೋಸ್ಪೇಸ್ ಫೋರ್ಸ್ ಮುಖ್ಯಸ್ಥ ಮಜೀದ್ ಮೌಸಾವಿ, ‘ಪವಿತ್ರ ಹಾರ್ಮುಝ್ ಜಲಸಂಧಿಯನ್ನು ಅಸುರಕ್ಷಿತಗೊಳಿಸಲು ನೀವು ಯತ್ನಿಸುತ್ತಿದ್ದೀರಾ? ಹಾಗಿದ್ದರೆ, ಇರಾನ್ ಈ ಪ್ರದೇಶವನ್ನೇ ನಿಮಗೆ ನರಕವನ್ನಾಗಿ ಮಾಡಲಿದೆ. ಈ ಪ್ರದೇಶದಲ್ಲಿರುವ ಅಮೆರಿಕದ ಪಡೆಗಳ ಧೈರ್ಯಕ್ಕೆ ಇದು ನಮ್ಮ ಪ್ರತಿಕ್ರಿಯೆ’ ಎಂದು ಹೇಳಿದ್ದಾರೆ ಎಂದು Tasnim ವರದಿ ಮಾಡಿದೆ.


Spread the love
Share:

administrator

Leave a Reply

Your email address will not be published. Required fields are marked *