Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಟೆಹರಾನ್: ಅಮೆರಿಕ ಭೀಕರ ದಾಳಿಗೆ ಪ್ರತಿಕಾರ; ಹಾರ್ಮುಝ್ ಜಲಸಂಧಿ ಮುಚ್ಚಿದ ಇರಾನ್, ಜಾಗತಿಕ ತಲ್ಲಣ!

Spread the love

ಟೆಹರಾನ್: ಇರಾನ್ ನ ಒಳಪ್ರದೇಶಗಳನ್ನು ಗುರಿ ಮಾಡಿ ಅಮೆರಿಕ ಬುಧವಾರ ಮತ್ತೆ ದಾಳಿ ನಡೆಸಿದ ಬೆನ್ನಲ್ಲೇ ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದಾಗಿ ಇರಾನ್ ಘೋಷಿಸಿದೆ. ವಾಣಿಜ್ಯ ಹಡಗುಗಳು ಮತ್ತು ತೈಲ ಟ್ಯಾಂಕರ್ ಗಳು ಸೇರಿದಂತೆ ಎಲ್ಲ ಸಂಚಾರಗಳಿಗೆ ಈ ಆಯಕಟ್ಟಿನ ಹಾಗೂ ಪ್ರಮುಖ ಜಲಮಾರ್ಗವನ್ನು ಮುಚ್ಚಲಾಗಿದೆ ಎಂದು ಇರಾನ್ ನ ಅಗ್ರ ಜಂಟಿ ಮಿಲಿಟರಿ ಕಮಾಂಡ್ ಹೇಳಿಕೆ ನೀಡಿದೆ. ಇದನ್ನು ದಾಟಲು ಪ್ರಯತ್ನಿಸುವ ಹಡಗುಗಳ ಮೇಲೆ ಗುಂಡು ಹಾರಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ ಹೊಸ ದಾಳಿಯನ್ನು ಅಮೆರಿಕ ಸೇನೆ ನಡೆಸಿದ ಬೆನ್ನಲ್ಲೇ ಈ ಘೋಷಣೆ ಹೊರಬಿದಿದ್ದಿದೆ. ಇರಾನ್‌ನಾದ್ಯಂತ ಸ್ಫೋಟಗಳು ಸಂಭವಿಸಿದ್ದು, ವಾಯು ರಕ್ಷಣಾ ಚಟುವಟಿಕೆ ತೀವ್ರಗೊಂಡಿದೆ. ಹಾರ್ಮುಝ್ ಜಲಸಂಧಿಯ ಸುತ್ತಮುತ್ತಲು ಕೂಡಾ ಇರಾನ್ ಹಾಗೂ ಅಮೆರಿಕ ಪಡೆಗಳ ನಡುವೆ ಸಂಘರ್ಷ ನಡೆಯುತ್ತಿದೆ ಎಂದು ಇರಾನ್ ನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಕಾರ್ಯಾಚರಣೆ ಆರಂಭಕ್ಕೆ ಮುನ್ನ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಸ್ಸೆತ್ ಅವರು ಇರಾನ್ ವಿರುದ್ಧ ಅಮೆರಿಕ ಸೇನೆ ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಒಂದು ರಾತ್ರಿಯಿಂದಾಚೆಗೆ ಈ ದಾಳಿ ಮುಂದುವರಿಯಲಿದೆ ಎಂಬ ಸುಳಿವು ನಿಡಿದ್ದರು.
ಫ್ಲೋರಿಡಾದ ಥಂಪಾದಲ್ಲಿರುವ ಅಮೆರಿಕದ ಸೆಂಟ್ರಲ್ ಕಮಾಂಡ್ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಹೆಗ್ರೆತ್, “ರಾತ್ರಿ ನಡೆಯುವ ಈ ದಾಳಿ ಪ್ರಬಲವಾಗಿರುತ್ತವೆ; ಇದು ಸ್ಪಷ್ಟ. ಅದು ನಾಳೆ ರಾತ್ರಿಯೂ ಸಂಭವಿಸಬಹುದು. ಅದು ಪ್ರಬಲ ಹಾಗೂ ಸ್ಪಷ್ಟವಾಗಿರುತ್ತದೆ” ಎಂದು ಹೇಳಿದರು. ಇರಾನ್ ನೆಲೆಗಳನ್ನು ಗುರಿ ಮಾಡಿ ದಾಳಿ ನಡೆಸಲಾಗುತ್ತದೆ ಹಾಗೂ ಈ ದಾಳಿ ಅಮೆರಿಕದ ಮಿಲಿಟರಿ ಗುರಿಗಳನ್ನು ಮತ್ತಷ್ಟು ಸಾಧಿಸಲು ಅನುವಾಗುತ್ತದೆ ಮತ್ತು ಅಮೆರಿಕದ ರಾಜತಾಂತ್ರಿಕ ನಿಲುವನ್ನು ಬಲಗೊಳಿಸುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *