ಕುವೈತ್: ಅಮೆರಿಕ ದಾಳಿಗೆ ಇರಾನ್ ಪ್ರತೀಕಾರ; ಕುವೈತ್, ಬಹ್ರೇನ್ ಯುಎಸ್ ನೆಲೆಗಳ ಮೇಲೆ ಕ್ಷಿಪಣಿ ಪ್ರಹಾರ!

ಕುವೈತ್ : ಅಮೆರಿಕ ಸೇನೆಯು ಇರಾನಿನ ರೇಡಾರ್ ಸೈಟ್‌ಗಳ ಮೇಲೆ ಮಾಡಿದ ದಾಳಿಗೆ ಪ್ರತಿಯಾಗಿ ಕುವೈತ್ ಮತ್ತು ಬಹ್ಮನ್ ಅನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ದಾಳಿಯನ್ನು ನಡೆಸಿದೆ ಎಂದು Aljazeera ವರದಿ ಮಾಡಿದೆ.
ಕುವೈತ್ ಮತ್ತು ಬಕ್ರೇನ್ ನಲ್ಲಿರುವ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ತಿಳಿಸಿರುವುದಾಗಿ Tasnim news agency ವರದಿ ಮಾಡಿದೆ.
ಕುವೈತ್ ಮತ್ತು ಬಕ್ರೇನ್ ಕಡೆಗೆ ಇರಾನ್ 7 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಯುಎಸ್ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ. ಇರಾನ್ ಉಡಾವಣೆ ಮಾಡಿದ ಆರು ಕ್ಷಿಪಣಿಗಳನ್ನು ತಡೆಹಿಡಿಯಲಾಗಿದೆ ಮತ್ತು ಏಳನೆಯದು ತನ್ನ ಉದ್ದೇಶಿತ ಗುರಿಯನ್ನು ತಲುಪಲಿಲ್ಲ ಎಂದು US ಸೆಂಟ್ರಲ್ ಕಮಾಂಡ್ ಹೇಳಿದೆ.
