Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಲೈವ್‌ನಲ್ಲೇ ಕೆಟ್ಟ ಪದ ಬಳಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಲಕ್ನೋ ನಾಯಕ!

Spread the love

ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 64ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ 14 ಅಂಕ ಸಂಪಾದಿಸಿದ ರಾಜಸ್ಥಾನ್ ತನ್ನ ಉಳಿದ ಪಂದ್ಯ ಗೆದ್ದರೆ ಪ್ಲೇಆಫ್ ಪ್ರವೇಶ ಪಡೆದುಕೊಳ್ಳುವುದು ಪಕ್ಕಾ ಆಗಿದೆ.ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಮಿಚೆಲ್ ಮಾರ್ಷ್ ಹಾಗೂ ಜೋಶ್ ಇಂಗ್ಲಿಸ್ ಅಬ್ಬರದ ಆಟದ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 220 ರನ್ ಕಲೆಹಾಕಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 221 ರನ್‌ಗಳ ಸವಾಲಿನ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ವೈಭವ್ ಸೂರ್ಯವಂಶಿ ಅಬ್ಬರದ ಬ್ಯಾಟಿಂಗ್, ಯಶಸ್ವಿ ಜೈಸ್ವಾಲ್ ಹಾಗೂ ಧ್ರುವ್ ಜುರೆಲ್ ಜವಾಬ್ದಾರಿಯುತ ಆಟದ ನೆರವಿನಿಂದ 19.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 225 ರನ್ ಬಾರಿಸಿತು.
ಈಗಾಗಲೇ ಸಾಲು ಸಾಲು ಸೋಲುಂಡು ಟೂರ್ನಿಯಿಂದ ಹೊರಬಿದ್ದಿದ್ದ ಲಕ್ನೋ ಸೂಪರ್ ಜೈಂಟ್ಸ್‌ಗೆ ಈ ಪಂದ್ಯದ ಫಲಿತಾಂಶ ಪರಿಣಾಮ ಬೀರದಿದ್ದರೂ ಪ್ಲೇಆಫ್ ಪ್ರವೇಶಿಸಲು ಇರುವ ಏಕೈಕ ಸ್ಥಾನಕ್ಕಾಗಿ ಇತರೆ ತಂಡಗಳ ನಡುವೆ ನಡೆಯುತ್ತಿರುವ ಕಾಳಗಕ್ಕೆ ಲಕ್ನೋ ಈ ಪಂದ್ಯ ಗೆಲ್ಲುವ ಮೂಲಕ ತಿರುವು ನೀಡಬಹುದಿತ್ತು.

ಆದರೆ ರಾಜಸ್ಥಾನ್ ರಾಯಲ್ಸ್‌ನ ಬ್ಯಾಟಿಂಗ್ ಅಬ್ಬರದ ಮುಂದೆ ಮಂಕಾದ ಲಕ್ನೋ ಮಕಾಡೆ ಮಲಗಿತು. ಒಂದೆಡೆ ಲಕ್ನೋ ಮತ್ತೊಂದು ಹೀನಾಯ ಸೋಲು ಕಂಡರೆ ರಿಷಭ್ ಪಂತ್ ಅಸಮರ್ಥ ನಾಯಕ ಎಂಬುದು ಮತ್ತೊಮ್ಮೆ ಸಾಬೀತಾಯಿತು.
ಜವಾಬ್ದಾರಿಯುತ ನಾಯಕತ್ವ ನಿಭಾಯಿಸುವಲ್ಲಿ ಎಡವಿದ ಪಂತ್ ಪಂದ್ಯ ಮುಗಿದ ಬಳಿಕ ಸೋಲಿನ ಕುರಿತು ಮಾತನಾಡುವಾಗ ಆಂಗ್ಲ ಭಾಷೆಯ ಕೆಟ್ಟ ಪದವನ್ನು ಉಲ್ಲೇಖಿಸಿ ತಮ್ಮ ತಂಡ ಒಳ್ಳೆಯ ತಂಡ ಎಂದು ಹೇಳಿಕೊಂಡಿದ್ದಾರೆ.
ಸದ್ಯ ಪಂತ್ ಬಳಸಿದ ಈ ಪದದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದ್ದು, ಇಂತಹ ಕೀಳು ಮನಸ್ಥಿತಿ ಇರುವ ವ್ಯಕ್ತಿಗೆ ನಾಯಕತ್ವ ಬೇರೆ ಕೇಡು ಎಂದು ಹಲವು ನೆಟ್ಟಿಗರು ಕಿಡಿಕಾರಿದ್ದಾರೆ. ಕ್ರಿಕೆಟ್ ಒಂದು ಜಂಟಲ್‌ಮನ್ ಗೇಮ್ ಎನ್ನುತ್ತಾರೆ, ಇಂತಹ ಮಂದಿಗೆ ನಾಯಕತ್ವ ಸಿಕ್ಕಿ ಅದೊಂದು ಮೆಂಟಲ್‌ಮನ್‌ ಗೇಮ್ ಆಗಿ ಮಾರ್ಪಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *