ಕಾಸರಗೋಡು: ಬ್ಯಾಂಕ್ ಕಾವಲುಗಾರ ಸುರೇಶ್ ಕೊಲೆ ಪ್ರಕರಣ; 24 ಗಂಟೆಯೊಳಗೆ ಇಬ್ಬರು ಆರೋಪಿಗಳ ಬಂಧನ!

ಕಾಸರಗೋಡು : ಬದಿಯಡ್ಕ ಮಾರ್ಪನಡ್ಕದಲ್ಲಿ ಬ್ಯಾಂಕ್ ಕಾವಲುಗಾರ ಸುರೇಶ್ ( 42) ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕುಂದ್ಲಾಜೆಯ ಕಿರಣ್ (30) ಮತ್ತು ಕರುವತ್ತಡ್ಕದ ಅಖಿಲೇಶ್ (25) ಬಂಧಿತ ಆರೋಪಿಗಳು. ಕ್ರಿಕೆಟ್ ಪಂದ್ಯಾಟಕ್ಕೆ ಸಂಬಂಧಪಟ್ಟಂತೆ ಉಂಟಾದ ಮಾತಿನ ಚಕಮಕಿ ಕೊಲೆಯಲ್ಲಿ ಕೊನೆಗೊಂಡಿತ್ತು ಎನ್ನಲಾಗಿದೆ.
ಕುಂದ್ಲಾಜೆ ಸೇವಾ ಸಹಕಾರಿ ಬ್ಯಾಂಕ್ ಕಾವಲುಗಾರರಾಗಿದ್ದ ಮಾರ್ಪನಡ್ಕ ಬೆದ್ರ ಕೂಡ್ಲುವಿನ ಸುರೇಶ್ ರವರನ್ನು ಬ್ಯಾಂಕ್ ಪರಿಸರದಲ್ಲಿಯೇ ಆರೋಪಿಗಳ ತಂಡವು ಇರಿದು ಕೊಲೆಗೈದಿತ್ತು. ಕೃತ್ಯ ನಡೆದು 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
