ಇಂಡಿಗೋ ಹೈಡ್ರಾಮಾ: 25 ನಿಮಿಷಗಳ ಕಾಲ ಆಫ್ ಆದ ಎಸಿ; ಗಾಬರಿಯಿಂದ ವಿಮಾನದೊಳಗೆ ಪ್ರಯಾಣಿಕರ ತೀವ್ರ ಆಕ್ರೋಶ, ಗದ್ದಲ!

ನವದೆಹಲಿ: ಇಂಡಿಗೋ ವಿಮಾನದಲ್ಲಿ (IndiGo Flight) ಎಸಿ ಮತ್ತು ಕ್ಯಾಬಿನ್ ಲೈಟ್ ಸುಮಾರು 25 ನಿಮಿಷಗಳ ಕಾಲ ಆಫ್ ಆಗಿದ್ದರಿಂದ ವಿಮಾನದ ಪ್ರಯಾಣಿಕರು ಪರದಾಡುವಂತಾಯಿತು. ಇದರಿಂದ ವಿಮಾನದೊಳಗೆ ಪ್ರಯಾಣಿಕರಲ್ಲಿ ಭಾರಿ ಗದ್ದಲ ಉಂಟಾಯಿತು. ಸುಮಾರು 25 ನಿಮಿಷಗಳ ಕಾಲ ಕ್ಯಾಬಿನ್ ದೀಪಗಳು ಸ್ಥಗಿತಗೊಂಡಿದ್ದರಿಂದ, ವಿಮಾನವು ಸಂಪೂರ್ಣ ಕತ್ತಲೆಯಲ್ಲಿತ್ತು. ವಿಮಾನದೊಳಗಿನ ಬಿಸಿಗೆ ಪ್ರಯಾಣಿಕರಿಗೆ ಉಸಿರುಗಟ್ಟಿಸುವಂತಹ ಪರಿಸ್ಥಿತಿ ಉಂಟಾಯಿತು. ವಿಮಾನದೊಳಗಿದ್ದ ಪ್ರಯಾಣಿಕರೊಬ್ಬರು ಈ ದೃಶ್ಯವನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದಾರೆ.
