Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಏರ್ ಇಂಡಿಯಾ ಪೈಲಟ್ ಬ್ಯಾಗಿನಲ್ಲಿ ಗಾಂಜಾ ಪತ್ತೆ: ಅಮೆರಿಕದಿಂದ ಭಾರತಕ್ಕೆ ವಾಪಸ್ ಕಳುಹಿಸಿದ ಅಧಿಕಾರಿಗಳು

Spread the love

ಹೊಸದಿಲ್ಲಿ: ಬ್ಯಾಗಿನಲ್ಲಿ ಗಾಂಜಾ ಒಯ್ಯುತ್ತಿದ್ದ ಆರೋಪದಲ್ಲಿ ಎರ್ ಇಂಡಿಯಾ ಸಹ ಪೈಲಟ್ ಒಬ್ಬರನ್ನು ಅಮೆರಿಕದಿಂದ ಗಡೀಪಾರು ಮಾಡಲಾಗಿದೆ.
ಈ ಪೈಲಟ್ ದೆಹಲಿ-ಸ್ಯಾನ್ ಫ್ರಾನ್ಸಿಸ್ಕೊ ವಿಮಾನದಲ್ಲಿ ಮಂಗಳವಾರ ಪ್ರಯಾಣಿಕರ ಕ್ಯಾಬಿನ್‌ನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಹೆಸರಿನಲ್ಲಿ ಪ್ರಯಾಣಿಸುತ್ತಿದ್ದ ಈತ ವಿಮಾನ ದೆಹಲಿಗೆ ವಾಪಸ್ಸಾಗುವ ಸಂದರ್ಭದಲ್ಲಿ ವಿಮಾನ ಚಾಲನೆ ಕರ್ತವ್ಯ ನಿರ್ವಹಿಸಬೇಕಿತ್ತು.
ಸ್ಯಾನ್ ಫ್ರಾನ್ಸಿಸ್ಕೋಗೆ ವಿಮಾನ ಆಗಮಿಸಿದ ವೇಳೆ ಈತನ ಬ್ಯಾಗಿನಲ್ಲಿ ಅಮೆರಿಕ ಅಧಿಕಾರಿಗಳು ಗಾಂಜಾ ಪತ್ತೆ ಮಾಡಿದ್ದಾರೆ ಎನ್ನಲಾಗಿದೆ. ಆ ಬಳಿಕ ವಿಮಾನ ನಿಲ್ದಾಣದಿಂದ ಹೊರಹೋಗಲು ಆತನಿಗೆ ಅವಕಾಶ ನೀಡಲಿಲ್ಲ ಹಾಗೂ ತಕ್ಷಣವೇ ಲಭ್ಯವಿರುವ ವಿಮಾನದಲ್ಲಿ ಆತನನ್ನು ವಾಪಸ್ಸು ಭಾರತಕ್ಕೆ ಕಳುಹಿಸಲಾಯಿತು ಎಂದು ತಿಳಿದು ಬಂದಿದೆ.
ಏರ್ ಇಂಡಿಯಾ ಈ ಬಗ್ಗೆ ಡಿಜಿಸಿಎಗೆ ಮಾಹಿತಿ ನೀಡಿದ್ದು ಆರೋಪಿ ಪೈಲಟ್ ಗುರುವಾರ ದೆಹಲಿಗೆ ಆಗಮಿಸುವ ಸಾಧ್ಯತೆ ಇದೆ. ಈ ಪ್ರಕರಣವನ್ನು ಏರ್ ಇಂಡಿಯಾ ವಕ್ತಾರರು ದೃಢಪಡಿಸಿದ್ದಾರೆ. ಆದರೆ ಪೈಲಟ್ ಗಾಂಜಾ ಸೇವಿಸಿರಲಿಲ್ಲ; ಆತನ ಬ್ಯಾಗಿನಲ್ಲಿ ಹೊಂದಿದ್ದ ಎಂದು ಪ್ರಕರಣದ ಬಗ್ಗೆ ತಿಳಿದಿರುವ ಮೂಲಗಳು ಹೇಳಿವೆ. ಕೆಲ ದೇಶಗಳಲ್ಲಿ ಗಾಂಜಾ ಗಿಡಗಳನ್ನು ವೈದ್ಯಕೀಯವಾಗಿ ಬಳಸಲು ಕೂಡಾ ಅವಕಾಶವಿಲ್ಲ.


Spread the love
Share:

administrator

Leave a Reply

Your email address will not be published. Required fields are marked *