Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಿಶಾಲ್ ಮಾರ್ಟ್ ಲಿಫ್ಟ್‌ನಲ್ಲಿ 1 ಗಂಟೆ ಕಾಲ ಸಿಲುಕಿದ್ದ 9 ಜನರ ಸುರಕ್ಷಿತ ರಕ್ಷಣೆ!

Spread the love

ಶಿವಮೊಗ್ಗ: ನಗರದ ವಿಶಾಲ್ ಮಾರ್ಟ್ ಕಟ್ಟಡದ ಲಿಫ್ಟ್‌ನಲ್ಲಿ  ಒಂದು ಗಂಟೆ ಕಾಲ ಸಿಲುಕಿದ್ದ 9 ಜನರನ್ನು ಅಗ್ನಿಶಾಮಕ ದಳದ ತಂಡ ಸುರಕ್ಷಿತವಾಗಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ.

ತಾಂತ್ರಿಕ ಸಮಸ್ಯೆಯಿಂದ ಲಿಫ್ಟ್‌ ಹಠಾತ್‌ ಆಗಿ ಮೊದಲ ಮಹಡಿಯಲ್ಲಿ ನಿಂತಿತ್ತು. ಅದರಲ್ಲಿ ಭರತ್ (37), ಅನುಷಾ (35), ಅನೀಸ್ ಫಾತಿಮಾ (44), ಮುಸರತ್ (39), ಸೂಬಿಯಾ (31), ಮಿಜ್ಜಾ (09), ಬಿಲಾಲ್ (06), ಪ್ರಶಾಂತ್ (28) ಹಾಗೂ ಪ್ರವೀಣ್ ಕುಮಾರ್ (47) ಎಂಬವರು ಸಿಲುಕಿದ್ದರು. ಸುಮಾರು 1 ಗಂಟೆಗೂ ಹೆಚ್ಚು ಕಾಲ ಒಳಗೆ ಇದ್ದರು.

ಲಿಫ್ಟ್‌ನಲ್ಲಿ ಕೆಲ ನಾಗರಿಕರು ಭಯಭೀತರಾಗಿ ಕಿರುಚಾಡಿದ್ದರು. ಅಲ್ಲದೇ ಮಹಿಳೆಯೋರ್ವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಅಗ್ನಿಶಾಮಕ ದಳದ ಸಕಾಲಿಕ ಕಾರ್ಯಾಚರಣೆಯಿಂದ ಲಿಫ್ಟ್‌ನಲ್ಲಿ ಸಿಲುಕಿದ್ದವರೆಲ್ಲರೂ ಸುರಕ್ಷಿತವಾಗಿ ಹೊರಬಂದಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೈಡ್ರಾಲಿಕ್ ಟೂಲ್ಸ್ ಬಳಸಿ, ಲಿಫ್ಟ್ ಮುರಿದು ಒಳಗಿದ್ದ ಜನರನ್ನು ರಕ್ಷಿಸಿದ್ದಾರೆ.

ಇಂತಹ ಘಟನೆಗಳು ಮರುಕಳಿಸದಿರಲು ವಾಣಿಜ್ಯ ಸಂಕೀರ್ಣಗಳು ಮತ್ತು ಮಾಲ್‌ಗಳಲ್ಲಿ ಲಿಫ್ಟ್‌ಗಳ ನಿಯಮಿತ ನಿರ್ವಹಣೆ  ಮತ್ತು ಪರ್ಯಾಯ ವಿದ್ಯುತ್ ವ್ಯವಸ್ಥೆ  ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ.


Spread the love
Share:

administrator

Leave a Reply

Your email address will not be published. Required fields are marked *