Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಲಿಫ್ಟ್ ಬಳಿ ಕ್ಷಮೆ ಕೇಳಿದರೂ ಬಿಡದ ಯುವತಿಗೆ ಗೂಸಾ; ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ತೀವ್ರ!

Spread the love

ಪುಣೆಯ ಲಿಫ್ಟ್ ಬಳಿ ಆಕಸ್ಮಿಕವಾಗಿ ಡಿಕ್ಕಿ ಹೊಡೆದಿದ್ದಕ್ಕೆ ಯುವಕ ಕ್ಷಮೆ ಕೇಳಿದ್ದಾನೆ. ಆದರೆ, ಯುವತಿ ಆತನ ಕೆನ್ನೆಗೆ ಬಾರಿಸಿದ್ದು, ಇದರಿಂದ ಕೋಪಗೊಂಡ ಯುವಕ ಆಕೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.ಸಣ್ಣ ಜಗಳ
ಕೆಲವೊಮ್ಮೆ ನಮಗೆ ಗೊತ್ತಿಲ್ಲದ ಹಾಗೆ ನಾವು ಬೇರೆಯವರಿಗೆ ತಾಗುವುದು ಅಥವಾ ಡಿಕ್ಕಿ ಹೊಡೆಯುವುದು ಸಹಜ. ಆಕಸ್ಮಿಕವಾಗಿ ಹೀಗಾದಾಗ ‘Sorry’ ಕೇಳುವುದು ಸಾಮಾನ್ಯ ಮನುಷ್ಯನ ಗುಣ. ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಹೊಡೆದರೆ? ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ.ಮೊದಲಿಗೆ ಕ್ಷಮೆ ಕೇಳುವ ಯುವಕ
ಕ್ಷಮೆ ಕೇಳಿದರೂ ತನ್ನ ಕೆನ್ನೆಗೆ ಬಾರಿಸಿದ ಯುವತಿಗೆ ಯುವಕನೊಬ್ಬ ಕೋಪ ಬರುವವರೆಗೂ ಹೊಡೆದಿದ್ದಾನೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ, ನೆಟ್ಟಿಗರು ಎರಡು ಗುಂಪುಗಳಾಗಿ ಚರ್ಚೆ ಶುರು ಮಾಡಿದ್ದಾರೆ.ಆಕಸ್ಮಿಕ ಡಿಕ್ಕಿ, ಆಮೇಲೇನಾಯ್ತು?
ಪುಣೆಯ ಒಂದು ರೆಸಿಡೆನ್ಶಿಯಲ್ ಬಿಲ್ಡಿಂಗ್‌ನ ಲಿಫ್ಟ್ ಮುಂದಿನ ಸಿಸಿಟಿವಿ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಲಿಫ್ಟ್‌ನಿಂದ ಇಳಿಯುತ್ತಿದ್ದ ಯುವಕ ಮತ್ತು ಅದೇ ಸಮಯಕ್ಕೆ ಲಿಫ್ಟ್‌ಗೆ ಹತ್ತಲು ಯತ್ನಿಸುತ್ತಿದ್ದ ಯುವತಿ ಆಕಸ್ಮಿಕವಾಗಿ ಪರಸ್ಪರ ಡಿಕ್ಕಿ ಹೊಡೆದಿದ್ದಾರೆ. 

=ತಕ್ಷಣವೇ ಯುವಕ ಎರಡು ಕೈ ಮುಗಿದು ಯುವತಿಯ ಬಳಿ ಕ್ಷಮೆ ಕೇಳುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ, ಯುವತಿ ಇದನ್ನು ಆಕಸ್ಮಿಕ ಘಟನೆ ಎಂದು ಸುಮ್ಮನಾಗುವ ಬದಲು, ಯುವಕನ ಕೆನ್ನೆಗೆ ಬಾರಿಸಿದ್ದಾಳೆ.ಯುವತಿಗೆ ಹಿಗ್ಗಾಮುಗ್ಗ ಥಳಿಸಿದ ಯುವಕ
ಯುವಕ ಇದನ್ನು ಪ್ರಶ್ನಿಸಿದಾಗ, ಯುವತಿ ಮತ್ತೆ ಹೊಡೆಯಲು ಮುಂದಾಗುತ್ತಾಳೆ. ಇದರಿಂದ ತಾಳ್ಮೆ ಕಳೆದುಕೊಂಡ ಯುವಕ, ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ನಿನ್ನೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಂಚಿಕೆಯಾದ ನಂತರ, ಲಕ್ಷಾಂತರ ಜನರು ಇದನ್ನು ವೀಕ್ಷಿಸಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.ಯಾರದ್ದು ಸರಿ? ಯಾರದ್ದು ತಪ್ಪು? ನೆಟ್ಟಿಗರ ಚರ್ಚೆ
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಯಾರದ್ದು ಸರಿ, ಯಾರದ್ದು ತಪ್ಪು ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯೇ ಶುರುವಾಗಿದೆ. ಹಲವರು ಇಂದಿನ ಪೀಳಿಗೆಯಲ್ಲಿ ಕ್ಷಮೆ ಮತ್ತು ಸಹನೆ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವರು ಯುವಕನ ಪರವಾಗಿ ನಿಂತು, ಆತ ಕ್ಷಮೆ ಕೇಳಿದರೂ ಮತ್ತೆ ಹೊಡೆಯಲು ಬಂದಿದ್ದೇ ಸಮಸ್ಯೆಗೆ ಕಾರಣ ಎಂದು ಬರೆದಿದ್ದಾರೆ. 

ಇನ್ನು ಕೆಲವರು, ಮಹಿಳೆಯ ಮೇಲೆ ಇಷ್ಟೊಂದು ಕ್ರೂರವಾಗಿ ಹಲ್ಲೆ ಮಾಡಿದ ಯುವಕನ ವಿರುದ್ಧ ಕೇಸ್ ದಾಖಲಿಸಿ, ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಸೌಹಾರ್ದಯುತವಾಗಿ ಬಗೆಹರಿಸಬಹುದಾಗಿದ್ದ ವಿಷಯವನ್ನು ಈಗ ಇಡೀ ಜಗತ್ತು ಚರ್ಚೆ ಮಾಡುವಂತಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *