ವಿಶ್ವದ ಎರಡನೇ ಅತಿದೊಡ್ಡ ವಜ್ರ ಆಫ್ರಿಕಾದಲ್ಲಿ ಪತ್ತೆ; ಭಾರತದಲ್ಲಿ ಚಿನ್ನದ ನಿಕ್ಷೇಪ ಪತ್ತೆ

ಆಫ್ರಿಕಾ: ಪ್ರಪಂಚದಾದ್ಯಂತ ಅನೇಕ ರೀತಿಯ ವಜ್ರಗಳು (Diamond) ಇರುತ್ತದೆ. ಅದರಲ್ಲೂ ಅವುಗಳ ಬೆಲೆ ಕೇಳಿದರೆ ನಮಗೆ ಶಾಕ್ ಆಗುತ್ತದೆ. ಒಂದೊಂದು ವಜ್ರಗಳು ಕೋಟಿ ಕೋಟಿ ಬೆಲೆ ಬಾಳುತ್ತದೆ. ಹಾಗೆಯೇ, ವಿಶ್ವದ ಎರಡನೇ ಅತಿದೊಡ್ಡ ವಜ್ರ (Worlds Second Biggest Diamond) ಪತ್ತೆಯಾಗಿದೆ.

ಆಫ್ರಿಕಾದಲ್ಲಿ ಪತ್ತೆಯಾದ ವಜ್ರ
ಈ ವಜ್ರ ಅಪರೂಪದಲ್ಲಿ ಅಪರೂಪವಾಗಿದ್ದು, ಇದು ಆಫ್ರಿಕಾದಲ್ಲಿ ಅತ್ಯಂತ ಸಮೃದ್ಧವಾಗಿ ವಜ್ರಗಳು ಸಿಗುವ ಪ್ರದೇಶಗಳಲ್ಲಿ ಒಂದಾದ ಬೋಟ್ಸ್ವಾನಾದ ಕರೋವ್ ವಜ್ರದ ಗಣಿಯಲ್ಲಿ ಸಿಕ್ಕಿದೆ. ಕೆನಡಾದ ಗಣಿಗಾರಿಕೆ ಕಂಪನಿಯಾದ ಲುಕಾರಾ ಈ ವಜ್ರವನ್ನ ಪತ್ತೆ ಮಾಡಿದ್ದು, ಇದು ರತ್ನ ಗುಣಮಟ್ಟಕ್ಕೆ ಸೇರಿದ ವಜ್ರವಾಗಿದ್ದು, ಸದ್ಯದ ಮಾಹಿತಿ ಪ್ರಕಾರ, ಕುಲ್ಲಿನಾನ್ ವಜ್ರದ ನಂತರ ಇದು ವಿಶ್ವದ ಎರಡನೇ ಅತಿದೊಡ್ಡ ವಜ್ರ ಎನಿಸಿಕೊಂಡಿದೆ.
2,492 ಕ್ಯಾರೆಟ್ ತೂಕದ ವಜ್ರ
ಈ ವಜ್ರದ ಬಗ್ಗೆ ಸದ್ಯಕ್ಕೆ ಕಂಪನಿ ಕೊಟ್ಟಿರುವ ಮಾಹಿತಿ ಪ್ರಕಾರ, ಈ ಡೈಮಂಡ್ ಸುಮಾರು 2,492 ಕ್ಯಾರೆಟ್ ತೂಕದ್ದಾಗಿದೆ. ಹಾಗಾಗಿಯೇ ಇದನ್ನ ವಿಶ್ವದ ಎರಡನೇ ಅತಿದೊಡ್ಡ ವಜ್ರ ಎಂದು ಪರಿಗಣಿಸಲಾಗಿದೆ. ಆಗಸ್ಟ್ 2024 ರಲ್ಲಿ ಕೆನಡಾದ ಗಣಿಗಾರಿಕೆ ಕಂಪನಿ ಲುಕಾರಾ ಡೈಮಂಡ್ ಕಾರ್ಪ್ ಈ ಡೈಮಂಡ್ ಪತ್ತೆ ಹಚ್ಚಿದೆ. ಇನ್ನು ವಿಶ್ವದ ಅತಿ ದೊಡ್ಡ ಮೊದಲ ಡೈಮಂಡ್ ಯಾವುದು ಎಂದು ನೋಡುವುದಾದರೆ ಅದು ಕುಲ್ಲಿನಾನ್ ವಜ್ರ. ಈ ವಜ್ರವು ಸುಮಾರು 3,106 ಕ್ಯಾರೆಟ್ ತೂಕದ್ದಾಗಿದೆ. ಇದನ್ನ ಸಹ 1905ರಲ್ಲಿ ದಕ್ಷಿಣ ಆಫ್ರಿಕಾದಲ್ಲಿಯೇ ಪತ್ತೆ ಮಾಡಲಾಗಿತ್ತು.
ಇನ್ನು ಮುಂದಿನ ವರ್ಷಗಳಲ್ಲಿ ಈ ಡೈಮಂಡ್ ಬಹಳ ದೊಡ್ಡ ಮೊತ್ತಕ್ಕೆ ಮಾರಾಟ ಆಗುವ ಸಾಧ್ಯತೆ ಇದ್ದು, ಈ ವಜ್ರದ ಕಾರಣದಿಂದ ಬೋಟ್ಸ್ವಾನಾದ ಆರ್ಥಿಕತೆ ಬಲಪಡಿಸಲು ಸಹಾಯ ಮಾಡುತ್ತದೆ. ಅದರಲ್ಲೂ ಶೇಕಡಾ 80 ಕ್ಕಿಂತ ಹೆಚ್ಚು ಪಟ್ಟು ಕೊಡುಗೆ ನೀಡುತ್ತದೆ ಎನ್ನಲಾಗುತ್ತದೆ.
ಭಾರತದಲ್ಲಿ ಪತ್ತೆಯಾದ ಚಿನ್ನದ ನಿಕ್ಷೇಪ
ಕಳೆದ ಕೆಲ ಸಮಯದ ಹಿಂದೆ ದೇವಗಢ, ಸುಂದರಗಢ, ನಬರಂಗಪುರ, ಕಿಯೊಂಝಾರ, ಅಂಗುಲ್, ಕೊರಾಪುಟ ಹಾಗೂ ಮಯೂರಭಂಜ, ಮಲ್ಕಾನಗಿರಿ, ಸಂಬಲ್ಪುರ ಮತ್ತು ಬೌದ್ ಜಿಲ್ಲೆಗಳಲ್ಲಿ ಚಿನ್ನ ನಿಕ್ಷೇಪ ಇರುವುದು ದೃಢವಾಗಿತ್ತು, ಈ ಪ್ರದೇಶಗಳಲ್ಲಿ ಶೋಧನೆ ಸಹ ಮಾಡಲಾಗಿದೆ. ಈ ವಿಚಾರವನ್ನ ಮಾರ್ಚ್ 2025 ರಲ್ಲಿ ಗಣಿ ಸಚಿವ ಬಿಭೂತಿ ಭೂಷಣ್ ಜೇನಾ ಒಡಿಶಾ ಶಾಸಕಾಂಗ ಸಭೆಯಲ್ಲಿ ಹೇಳಿದಾಗ ಸುದ್ದಿ ಹರಡಿದ್ದು, ಇದುವರೆಗೂ ಅನೇಕ ಪ್ರಮಾಣದ ಚಿನ್ನ ಲಭಿಸಿದೆ ಎನ್ನಲಾಗುತ್ತಿದೆ.
ಇದುವರೆಗೂ ಎಷ್ಟು ಚಿನ್ನ ಲಭಿಸಿರಬಹುದು ಎನ್ನುವುದರ ಬಗ್ಗೆ ಯಾವುದೇ ಅಧಿಕೃತ ಅಂಕಿಅಂಶಗಳು ಇನ್ನೂ ಬಿಡುಗಡೆಯಾಗಿಲ್ಲ. ಆದರೆ, ಭೌಗೋಳಿಕ ಸೂಚಕಗಳ ಆಧಾರದ ಮೇಲೆ, ವಿಶ್ಲೇಷಕರು ಅಂದಾಜು ಮಾಡಿರುವ ಪ್ರಕಾರ, ಈ ನಿಕ್ಷೇಪ ಸುಮಾರು 10 ರಿಂದ 20 ಮೆಟ್ರಿಕ್ ಟನ್ಗಳ ನಡುವೆ ಇರಬಹುದು ಎಂದು ಅಂದಾಜು ಮಾಡಲಾಗಿದೆ. ಇದು ಒಂದು ರೀತಿಯಲ್ಲಿ ಭಾರತಕ್ಕೆ ಜಾಕ್ಪಾಟ್ ಎನ್ನಬಹುದು.