Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಿಶ್ವಕಪ್ ರೋಚಕ: ಮೆಕ್ಸಿಕೋವನ್ನು 3-2 ಗೋಲುಗಳಿಂದ ಮಣಿಸಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟ ಇಂಗ್ಲೆಂಡ್!

Spread the love

ಮೆಕ್ಸಿಕೊ ಸಿಟಿ : ರೋಮಾಂಚನಕಾರಿಯಾಗಿ ಸಾಗಿದ 16ರ ಘಟ್ಟದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಮೆಕ್ಸಿಕೋ ತಂಡವನ್ನು 3-2 ರ ಅಂತರದಿಂದ ಸೋಲಿಸಿದೆ. ತಮ್ಮ ದೇಶದ ಪ್ರೇಕ್ಷಕರ ಭಾರಿ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಸಹ-ಆತಿಥೇಯ ಮೆಕ್ಸಿಕೋ, ಕಳೆದ 40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ತಲುಪುವ ಉದ್ದೇಶದಿಂದ ಪ್ರಬಲ ಹೋರಾಟ ನಡೆಸಿದರೂ , ಇಂಗ್ಲೆಂಡ್ ಎದುರು ಸೋಲು ಒಪ್ಪಿಕೊಂಡಿತು.
ಪಂದ್ಯದ ಆರಂಭಿಕ ಹಂತಗಳಲ್ಲಿ ಮೆಕ್ಸಿಕೋ ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಿತ್ತು. ಆದರೆ ಬೆಲ್ಲಿಂಗ್ಲಾಮ್ ಸಿಡಿಸಿದ ಸತತ ಎರಡು ಗೋಲುಗಳು ಪಂದ್ಯವನ್ನು ಇಂಗ್ಲೆಂಡ್ ಪರವಾಗಿ ತಿರುಗಿಸಿದವು.

ಮೊದಲಿಗೆ, ಬುಕಾಯೊ ಸಾಕಾ ನೀಡಿದ ಅತ್ಯುತ್ತಮ ಕ್ರಾಸ್ ಅನ್ನು ಬೆಲ್ಲಿಂಗ್ಲಾಮ್ ಹೆಡರ್ ಮೂಲಕ ಗೋಲು ಗಳಿಸಿದರು. ಅದರ ಬೆನ್ನಲ್ಲೇ ಮೆಕ್ಸಿಕೊ ರಕ್ಷಣಾ ಕೋಟೆಯನ್ನು ಬೇಧಿಸಿ ಹ್ಯಾರಿ ಕೇನ್ ನೀಡಿದ ಪಾಸ್ ಅನ್ನು ಬೆಲ್ಲಿಂಗ್ಲಾಮ್ ಸುಲಭವಾಗಿ ಗೋಲಾಗಿ ಪರಿವರ್ತಿಸಿ ಮುನ್ನಡೆಯನ್ನು 2-0 ಕ್ಕೆ ಹಿಗ್ಗಿಸಿದರು.
ಶೀಘ್ರವಾಗಿ ತಿರುಗೇಟು ನೀಡಿದ ಮೆಕ್ಸಿಕೊ, ಜೂಲಿಯನ್ ಕ್ವಿನೋನೆಸ್ ಅವರ ಅತ್ಯಂತ ಹತ್ತಿರದಿಂದ ಹೊಡೆದ ಗೋಲು ಮೂಲಕ ಮೊದಲ ಗೋಲು ಗಳಿಸಿತು. ಇಂಗ್ಲೆಂಡ್ ನ ಗೋಲ್ಮೀಪರ್ ಪಿಕೋರ್ಡ್ ಅದ್ಭುತವಾಗಿ ಗೋಲೊಂದನ್ನು ತಡೆದು ಮೊದಲಾರ್ಧದಲ್ಲಿ ಇಂಗ್ಲೆಂಡ್ ಮುನ್ನಡೆಗೆ ಕಾರಣವಾದರು.

ದ್ವಿತೀಯಾರ್ಧದಲ್ಲಿ ಕೆಂಪು ಕಾರ್ಡ್ ನಿಂದಾಗಿ 10 ಆಟಗಾರರೊಂದಿಗೆ ಆಡಿದ ಇಂಗ್ಲೆಂಡ್, ಹ್ಯಾರಿ ಕೇನ್ ಅವರ ಪೆನಾಲ್ಟಿ ಮೂಲಕ ಮುನ್ನಡೆ ಯನ್ನು 3-1ಕ್ಕೆ ಹೆಚ್ಚಿಸಿದರು ಪ್ರಸಕ್ತ ಟೂರ್ನಿಯಲ್ಲಿ ಹ್ಯಾರಿ ಕೇನ್ ಗೆ ಇದು 6ನೇ ಗೋಲಾಗಿದ್ದು, ಗೋಲ್ಡನ್ ಬೂಟ್ ಗೆ ಪೈಪೋಟಿ ನೀಡುತ್ತಿದ್ದಾರೆ.
ಬಳಿಕ ವಿಎಆ‌ರ್ ಪರಿಶೀಲನೆಯಿಂದ ಪೆನಾಲ್ಟಿ ಪಡೆದ ಮೆಕ್ಸಿಕೋ ಗೋಲು ದಾಖಲಿಸಿ ಅಂತರವನ್ನು ತಗ್ಗಿಸಿ ಪಂದ್ಯದಲ್ಲಿ ಮತ್ತೆ ತಿರುಗೇಟು ನೀಡುವ ಪ್ರಯತ್ನ ನಡೆಸಿತು. ಸಮಬಲದ ಗೋಲು ಗಳಿಸುವ ಪ್ರಯತ್ನದಲ್ಲಿ ವಿಫಲರಾಗಿ ಕೊನೆಗೆ ಸೋಲೊಪ್ಪಿಕೊಳ್ಳಬೇಕಾಯಿತು.8ರ ಹಂತದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ನಾರ್ವೆ ವಿರುದ್ಧ ಆಡಲಿದೆ.


Spread the love
Share:

administrator

Leave a Reply

Your email address will not be published. Required fields are marked *