Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಾಶಿಂಗ್ಟನ್: ಮದುವೆಯಾದ ಕೆಲವೇ ಗಂಟೆಗಳಲ್ಲಿ ದುರಂತ; ಅಮೆರಿಕದಲ್ಲಿ ಹೆಲಿಕಾಪ್ಟರ್ ಪತನವಾಗಿ ಭಾರತೀಯ ಮೂಲದ ಪೈಲಟ್ ಸಾ*ವು!

Spread the love

ವಾಶಿಂಗ್ಟನ್: ಅಮೆರಿಕದಲ್ಲಿ ಹೆಲಿಕಾಪ್ಟರ್ ಪತನವಾಗಿ ವಿವಾಹವಾದ ಕೆಲವೇ ಗಂಟೆಗಳಲ್ಲಿ ಕೇರಳ ಮೂಲದ ಪೈಲಟ್ ಮೃತಪಟ್ಟಿದ್ದು, ವಧು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಟ್ಲಾಂಟಾ ನಿವಾಸಿ ಮತ್ತು ಡೆಲ್ವಾ ಏರ್ ಲೈನ್ಸ್ ಪೈಲಟ್ ಆಗಿದ್ದ ಡೇವ್ ಫಿಜಿ (25) ಶುಕ್ರವಾರ ಡಾಸನ್ ಕೌಂಟಿಯ ಡಾಸನ್ವಿಲ್ಲೆ ಬಳಿ ಹೆಲಿಕಾಪ್ಟ‌ರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರ ಪತ್ನಿ ಜೆಸ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಹೆಲಿಕಾಪ್ಟರ್ ಪೈಲಟ್ ಕೂಡ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಡಾಸನ್ವಿಲ್ಲೆ ಬಳಿಯ ದಿ ರೆವೆರೆಯಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನೂರಾರು ಅತಿಥಿಗಳು ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿವಾಹದ ಬಳಿಕ ದಂಪತಿ ಹೋಟೆಲ್‌ಗೆ ತೆರಳಲು ಹೆಲಿಕಾಪ್ಟರ್ ಏರಿದ್ದರು. ಆದರೆ, ಮಳೆ ಮತ್ತು ದಟ್ಟವಾದ ಮಂಜಿನ ಕಾರಣದಿಂದಾಗಿ ಹೆಲಿಕಾಪ್ಟರ್ ಡಾಸನ್ವಿಲ್ಲೆಯ ದಟ್ಟ ಅರಣ್ಯ ಹಾಗೂ ಪರ್ವತ ಪ್ರದೇಶದಲ್ಲಿ ಪತನಗೊಂಡಿದೆ ಎಂದು ವರದಿಯಾಗಿದೆ.
ಡೇವ್ ಅವರ ಪೋಷಕರಾದ ಜಾರ್ಜ್ ಮತ್ತು ಫೆಬಾ ಫಿಜಿ, ಕೇರಳದ ಎರ್ನಾಕುಲಂನ ಮುವಾಟ್ಟುಪುಝದಿಂದ ಹಲವು ವರ್ಷಗಳ ಹಿಂದೆ ಅಮೆರಿಕಕ್ಕೆ ವಲಸೆ ಹೋಗಿದ್ದರು. ಜೆಸ್ಸಿ ಕೇರಳದ ಅಲಪ್ಪುಝ ಮೂಲದವರಾಗಿದ್ದಾರೆ.
WALB ನ್ಯೂಸ್ ಪ್ರಕಾರ, ಡಾಸನ್ ಕೌಂಟಿ ಶೆರಿಫ್ ಕಚೇರಿ ಶುಕ್ರವಾರ ತಡರಾತ್ರಿ ಹೆಲಿಕಾಪ್ಟರ್ ಪತನದ ವರದಿಯನ್ನು ಸ್ವೀಕರಿಸಿದೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ನಂತರ ಡಾಸನ್ವಿಲ್ಲೆ ಬಳಿ ಹೆಲಿಕಾಪಟ್ಟ‌ರ್ ಪತನವಾಗಿದೆ ಎಂದು ದೃಢಪಡಿಸಿದೆ.


Spread the love
Share:

administrator

Leave a Reply

Your email address will not be published. Required fields are marked *