Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮತದಾನದ ನಡುವೆ ಆನೆಯ ವಾಕಿಂಗ್ ವಿಡಿಯೋ ವೈರಲ್: ಮುನ್ನೆಚ್ಚರಿಕೆಯಿಂದ ತಪ್ಪಿದ ಭಾರಿ ಅನಾಹುತ

Spread the love

ಕೊಲ್ಕತ್ತಾ: ಇಂದು ಪಶ್ಚಿಮ ಬಂಗಾಳ (West Bengal) ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದಿದೆ. ಜಾರ್ಗ್ರಾಮ್‌ನ ಮತಗಟ್ಟೆಯ ಬಳಿ ಇದ್ದಕ್ಕಿದ್ದಂತೆ ಆನೆಯೊಂದು ಮತಗಟ್ಟೆಗೆ ಬಂದಿತು. ಇದನ್ನು ನೋಡಿದ ಮತದಾರರು ಸ್ವಲ್ಪ ಆಘಾತಕ್ಕೊಳಗಾದರು. ಜಾರ್ಗ್ರಾಮ್‌ನ ಜಿಡುಸೋಲ್ ಪ್ರಾಥಮಿಕ ಶಾಲೆಯ ಬಳಿ ಈ ಘಟನೆ ನಡೆದಿದೆ. ಅಧಿಕಾರಿಗಳು ಈ ಪ್ರದೇಶದಲ್ಲಿ ಆನೆಗಳು ಇರುತ್ತವೆ ಎಂದು ಮೊದಲೇ ಎಚ್ಚರಿಸಿದ್ದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಮತ ಚಲಾಯಿಸಲು ಬಂದಿದ್ದ ಮತದಾರರಲ್ಲಿ ಒಬ್ಬರು ತಮ್ಮ ಮೊಬೈಲ್‌ನಲ್ಲಿ ಆನೆ ಮತಗಟ್ಟೆಯ ಬಳಿ ಚಲಿಸುತ್ತಿರುವುದನ್ನು ವೀಡಿಯೊ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಆಗಿದ್ದು, ವೈರಲ್ ಆಗುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *