ಒಮಾನ್ ಕೊಲ್ಲಿಯಲ್ಲಿ ಅಮೆರಿಕದ ಯುದ್ಧವಿಮಾನ ನಾಪತ್ತೆ: ಹೊಡೆದುರುಳಿಸಿರುವುದಾಗಿ ಇರಾನ್ ಘೋಷಣೆ

ಮಸ್ಕತ್: ಹಾರ್ಮುಝ್ ಜಲಸಂಧಿ ಮತ್ತು ಒಮಾನ್ ಕೊಲ್ಲಿಯ ಮೇಲೆ ಹಾರಾಟ ನಡೆಸುತ್ತಿದ್ದಾಗ ಅಮೆರಿಕದ ಯುದ್ಧವಿಮಾನವು ತುರ್ತು ಸಂದೇಶ ರವಾನಿಸಿದ ಬಳಿಕ ರೇಡಾರ್ ವ್ಯಾಪ್ತಿಯಿಂದ ಹೊರಗುಳಿದಿರುವುದಾಗಿ ವರದಿಯಾಗಿದೆ.
ಯುದ್ಧವಿಮಾನವು ಯುಎಇ ವಾಯುಕ್ಷೇತ್ರದತ್ತ ಸಾಗುತ್ತಿರುವುದನ್ನು ಪತ್ತೆಹಚ್ಚಲಾಗಿದ್ದು ವಿಮಾನವು ಒಮಾನ್ ಕೊಲ್ಲಿಯ ಮೇಲೆ ಹಾರುತ್ತಿದ್ದಾಗ ತುರ್ತು ಸಂದೇಶ ರವಾನಿಸಿದ ಬಳಿಕ ರೇಡಾರ್ ವ್ಯಾಪ್ತಿಯಿಂದ ಹೊರಗುಳಿದಿದೆ. ವಿಮಾನ ಆ ಬಳಿಕ ಯಾವ ಕಡೆ ಚಲಿಸಿದೆ ಎಂಬ ಮಾಹಿತಿಯಿಲ್ಲ. ಈ ಮಧ್ಯೆ ವಿಮಾನವನ್ನು ಐಆಕ್ಟಿಸಿ (ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್) ಪಡೆ ಹೊಡೆದುರುಳಿಸಿದೆ ಎಂದು ಇರಾನ್ನ ಸರಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.
