Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರೈಲು ಪ್ರಯಾಣದ ವೇಳೆ ಬರ್ಬರ ಹತ್ಯೆ: ಬಾಗಿಲು ಮುಚ್ಚುವ ತಕರಾರಿನಲ್ಲಿ ಪ್ರಾಣ ಕಳೆದುಕೊಂಡ ಯುವಕ!

Spread the love

ಕ್ಯಾರಕಾಸ್: ವೆನೆಜುವೆಲಾದಲ್ಲಿ ಎರಡು ಅತ್ಯಂತ ಪ್ರಬಲ ಭೂಕಂಪ(Earthquake)ಗಳು ಸಂಭವಿಸಿದ್ದು, ಇಡೀ ದೇಶವೇ ನಡುಗಿದೆ. ರಾಜಧಾನಿ ಕ್ಯಾರಕಾಸ್‌ನಲ್ಲಿ ಹಲವು ಬಹುಮಹಡಿ ಕಟ್ಟಡಗಳು ಮತ್ತು ವಸತಿ ಗೃಹಗಳು ಕುಸಿದು ಬಿದ್ದಿದ್ದು, ಕಣ್ಮುಚ್ಚಿ ಬಿಡುವಷ್ಟರಲ್ಲಿ ಇಡೀ ನಗರವೇ ಧೂಳಿನ ಮಯವಾಗಿದೆ. ಒಂದು ಶತಮಾನಕ್ಕೂ (100 ವರ್ಷ) ಹೆಚ್ಚು ಅವಧಿಯಲ್ಲಿ ವೆನೆಜುವೆಲಾವನ್ನು ಅಪ್ಪಳಿಸಿದ ಅತ್ಯಂತ ಭೀಕರ ಭೂಕಂಪ ಇದಾಗಿದೆ ಎಂದು ತಜ್ಞರು ಹೇಳಿದ್ದಾರೆ.ಸಂಜೆ 6 ಗಂಟೆಯ ಬಳಿಕ 7.1 ತೀವ್ರತೆಯ ಮೊದಲ ಭೂಕಂಪ ಸಂಭವಿಸಿತು. ಇದರ ಕೇಂದ್ರಬಿಂದು ಕ್ಯಾರಕಾಸ್‌ನಿಂದ 168 ಕಿ.ಮೀ ದೂರದ ಮೊರೊನ್ ಕರಾವಳಿಯ 22 ಕಿ.ಮೀ ಆಳದಲ್ಲಿತ್ತು. ಅಂದರೆ ಕೇವಲ ಒಂದು ನಿಮಿಷದ ಅಂತರದಲ್ಲಿ ಮತ್ತೊಂದು ಭೀಕರ 7.5 ತೀವ್ರತೆಯ ಭೂಕಂಪ ಸಂಭವಿಸಿತು. ಇದು ಭೂಮಿಯ ಒಳಗಡೆ ಕೇವಲ 10 ಕಿ.ಮೀ ಆಳದಲ್ಲಿದ್ದ ಕಾರಣ ವಿನಾಶದ ತೀವ್ರತೆ ಹೆಚ್ಚಾಗಿತ್ತುಕಣ್ಣೆದುರೇ ಕುಸಿದು ಬಿದ್ದ ಗೋಡೆಗಳು, ಬೀದಿಯಲ್ಲೇ ರಾತ್ರಿ ಕಳೆದ ಜನ ಕಂಪನ ಆರಂಭವಾಗುತ್ತಿದ್ದಂತೆ ಜನರು ದಿಕ್ಕಾಪಾಲಾಗಿ ಓಡಲಾರಂಭಿಸಿದರು.

ಕ್ಯಾರಕಾಸ್ ನಗರದ ಜನನಿಬಿಡ ಪ್ರದೇಶಗಳಲ್ಲಿ ಕಟ್ಟಡಗಳ ದೊಡ್ಡ ದೊಡ್ಡ ಗೋಡೆಗಳು ಕುಸಿದು ಬಿದ್ದಿವೆ. ಮನೆಗಳ ಗೋಡೆಗಳು ಇಲ್ಲದಂತಾಗಿ ಒಳಗಿದ್ದ ಪೀಠೋಪಕರಣಗಳು ನೇರವಾಗಿ ರಸ್ತೆಗೆ ಕಾಣಿಸುವಷ್ಟು ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ.ರಾತ್ರಿಯಲ್ಲೂ ಜನರು ಮನೆಗಳ ಒಳಗೆ ಹೋಗಲು ಹೆದರಿ ಬೀದಿಗಳಲ್ಲೇ ಕಾಲ ಕಳೆದರು. ಅನೇಕರು ಆಘಾತದಿಂದ ತಮ್ಮ ಸಾಕುಪ್ರಾಣಿಗಳನ್ನು ಬಿಗಿಯಾಗಿ ಅಪ್ಪಿಕೊಂಡು ರಸ್ತೆಯ ಮೇಲೆಯೇ ಕುಳಿತಿದ್ದ ದೃಶ್ಯಗಳು ಕಂಡುಬಂದವು.ಜಾಗತಿಕವಾಗಿ ಸುನಾಮಿ ಎಚ್ಚರಿಕೆ
ವೆನೆಜುವೆಲಾದಲ್ಲಿ ಇಷ್ಟೊಂದು ಪ್ರಬಲ ಭೂಕಂಪಗಳು ಸಂಭವಿಸುವುದು ತೀರಾ ಅಪರೂಪ. ಈ ಭೀಕರ ಭೂಕಂಪದ ಬೆನ್ನಲ್ಲೇ ಅಮೆರಿಕದ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ವರ್ಜಿನ್ ದ್ವೀಪಗಳು ಹಾಗೂ ಡೊಮಿನಿಕನ್ ಗಣರಾಜ್ಯದ ಕರಾವಳಿ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆಯನ್ನು ನೀಡಿದೆ. ಪೋರ್ಟೊ ರಿಕೊಗೆ ನೀಡಲಾಗಿದ್ದ ಎಚ್ಚರಿಕೆಯನ್ನು ಸದ್ಯಕ್ಕೆ ಹಿಂಪಡೆಯಲಾಗಿದೆ. ಯುದ್ಧೋಪಾದಿಯಲ್ಲಿ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯುವ ಕೆಲಸ ನಡೆಯುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *