ಪೆರುವಿನಲ್ಲಿ ಭೀಕರ ವಿಮಾನ ಅಪಘಾ*ತ: 100ಕ್ಕೂ ಹೆಚ್ಚು ಸೈನಿಕರಿದ್ದ ಕೊಲಂಬಿಯಾ ಮಿಲಿಟರಿ ವಿಮಾನ ಪತನ!

ಪೆರು: 100ಕ್ಕೂ ಅಧಿಕ ಸೈನಿಕರಿದ್ದ ಕೊಲಂಬಿಯಾದ ಮಿಲಿಟರಿ ವಿಮಾನವೊಂದು ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ ದಕ್ಷಿಣ ಅಮೆಜಾನ್ ಪ್ರದೇಶದಲ್ಲಿ ಸೋಮವಾರ ಪತನಗೊಂಡಿದೆ ಎಂದು ವರದಿಯಾಗಿದೆ.
ವಾಯುಪಡೆಯ ಹರ್ಕ್ಯುಲಸ್ ಸಿ -130 ವಿಮಾನದಲ್ಲಿ 100ಕ್ಕೂ ಅಧಿಕ ಸೈನಿಕರು ಪ್ರಯಾಣಿಸುತ್ತಿದ್ದರು.
ಪೆರುವಿನ ಗಡಿಗೆ ಸಮೀಪದ ಪೋರ್ಟೊ ಲೆಗುಜಾಮೊ ಪಟ್ಟಣದ ಬಳಿ ವಿಮಾನ ಪತನಗೊಂಡಿದೆ ಎಂದು ಕೊಲಂಬಿಯಾದ ರಕ್ಷಣಾ ಸಚಿವಾಲಯ ಹೇಳಿದೆ.
ಈ ಅಪಘಾತದಲ್ಲಿ ಹಲವು ಸೈನಿಕರು ಮೃತಪಟ್ಟಿದ್ದಾರೆಂದು ಶಂಕಿಸಲಾಗಿದೆ.
