Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಿಎಸ್‌ಎಲ್ ಮೇಲೆ ಉಗ್ರರ ನೆರಳು: ವಿದೇಶಿ ಆಟಗಾರರಿಗೆ ಕೂಡಲೇ ಪಾಕಿಸ್ತಾನ ತೊರೆಯಲು ಸೂಚನೆ

Spread the love

ಕರಾಚಿ: ತೆಹೀಕೆ ತಾಲಿಬಾನ್ ಪಾಕಿಸ್ತಾನ(ಟಿಟಿಪಿ)ಟಿ-20 ಪಂದ್ಯಾವಳಿಯಲ್ಲಿ ವಿದೇಶೀ ಆಟಗಾರರು ಭಾಗವಹಿಸುವುದರ ವಿರುದ್ಧ ಬೆದರಿಕೆ ಒಡ್ಡಿದ ನಂತರ ಮಾರ್ಚ್ 26ರಿಂದ ಆರಂಭವಾಗಬೇಕಾಗಿದ್ದ 11ನೇ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್(ಪಿಎಸ್‌ಎಲ್‌ಮೇಲೆ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ.
ಈ ಉಗ್ರ ಸಂಘಟನೆಯು ಪಂದ್ಯಾವಳಿಯಿಂದ ಹಿಂದೆ ಸರಿಯುವಂತೆ ವಿದೇಶೀ ಆಟಗಾರರಿಗೆ ಎಚ್ಚರಿಕೆ ನೀಡಿದ್ದು, ಹೀಗಾಗಿ ಭದ್ರತೆಯ ಕುರಿತು ಕಳವಳ ವ್ಯಕ್ತವಾಗಿದೆ.
ಪಶ್ಚಿಮ ಏಶ್ಯದ ಯುದ್ಧದ ಸನ್ನಿವೇಶ ಹಾಗೂ ಭದ್ರತೆಗೆ ಸಂಬಂಧಿಸಿದ ವಿಚಾರಗಳಿಗೆ ಕೇವಲ ಎರಡು ತಾಣಗಳಾದ ಕರಾಚಿ ಹಾಗೂ ಲಾಹೋರ್ ಗೆ ಸೀಮಿತಗೊಳಿಸಿ ಪ್ರೇಕ್ಷಕರಿಗೆ ಪ್ರವೇಶವನ್ನು ನೀಡದೆ ಪಿಎಸ್ಎಲ್ ಟೂರ್ನಿ ನಡೆಸಲು ಪಿಸಿಬಿ ನಿರ್ಧರಿಸಿದ ಮರುದಿನವೇ ಈ ಬೆಳವಣಿಗೆ ನಡೆದಿದೆ.

ಈ ವರ್ಷದ ಪಿಎಸ್ಎಲ್ ನಲ್ಲಿ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಮೊಯಿನ್ ಅಲಿ, ಡೆವೊನ್ ಕಾನ್ವೆ ಹಾಗೂ ಆ್ಯಡಮ್ ಝಂಪಾ ಸಹಿತ ಹಲವು ವಿದೇಶಿ ಆಟಗಾರರು ಭಾಗವಹಿಸಲಿದ್ದಾರೆ. ಈ ಎಲ್ಲರ ಭಾಗವಹಿಸುವಿಕೆಯು ಲೀಗ್ ಗೆ ಅಂತರ್ರಾಷ್ಟ್ರೀಯ ಆಟಗಾರರನ್ನು ಒಟ್ಟುಗೂಡಿಸುವ ಪ್ರಯತ್ನವಾಗಿದೆ.
ಸ್ಟೀವ್ ಸ್ಮಿತ್ ಅವರು ಮುಲ್ತಾನ್ ಸುಲ್ತಾನ್ ಫ್ರಾಂಚೈಸಿಗೆ ಸೇರ್ಪಡೆಯಾಗಲು ಸೋಮವಾರ ಪಾಕಿಸ್ತಾನಕ್ಕೆ ಆಗಮಿಸಿದ್ದಾರೆ. ಇತ್ತೀಚೆಗೆ ಬಿಗ್ ಬ್ಯಾಶ್ ಲೀಗ್ ಅಭಿಯಾನದಲ್ಲಿ ಭಾಗವಹಿಸಿದ್ದ ಸ್ಮಿತ್ ಇದೇ ಮೊದಲ ಬಾರಿ ಪಿಎಸ್ಎಲ್ ಟೂರ್ನಿಯಲ್ಲಿ ಭಾಗವಹಿಸಲು ಸಜ್ಜಾಗಿದ್ದರು.
ಇಂದನ ಬಿಕ್ಕಟ್ಟನ್ನು ನಿವಾರಿಯಿಸಲು ಪ್ರೇಕ್ಷಕರಿಲ್ಲದೆ ಕೇವಲ ಎರಡು ತಾಣಗಳಲ್ಲಿ ಲೀಗ್ ಆಡಲು ನಿರ್ಧರಿಸಲಾಗಿದೆ ಎಂದು ಪಿಸಿಬಿ ಮುಖ್ಯಸ್ಥ ಮುಕ್ಸಿನ್ ನಖಿ ರವಿವಾರ ದೃಢಪಡಿಸಿದ್ದಾರೆ. ಪಿಎಸ್ಎಲ್ ಟೂರ್ನಿಯು ಮಾರ್ಚ್ 26ರಿಂದ ಮೇ 3 ರ ತನಕ ನಿಗದಿಯಾಗಿತ್ತು.


Spread the love
Share:

administrator

Leave a Reply

Your email address will not be published. Required fields are marked *