Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಶಿಕ್ಷಕಿಗೆ ವಿದ್ಯಾರ್ಥಿಯಿಂದ ಹಲ್ಲೆ: 20ಕ್ಕೆ 18 ಅಂಕ ಸಿಕ್ಕಿದ್ದಕ್ಕೆ ಥಾಯ್ಲೆಂಡ್‌ನಲ್ಲಿ ಘಟನೆ

Spread the love

“ಗುರು ಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ” ಎಂದು ಗುರುವನ್ನು ಪರಬ್ರಹ್ಮ ಎಂಬ ಸ್ಥಾನದಲ್ಲಿ ಪೂಜಿಸಲಾಗುತ್ತದೆ, ಆದರೆ ಈಗಿನ ಕಾಲದಲ್ಲಿ ಅದೆಲ್ಲವೂ ಕೇವಲ ಪುಸ್ತಕದಲ್ಲಿ ಓದಲು ಮಾತ್ರ ಇದ್ದಂತೆ ಭಾಸವಾಗುತ್ತದೆ.

ಕೆಲ ವಿದ್ಯಾರ್ಥಿಗಳಿಗೆ ಗುರುಗಳ ಬಗ್ಗೆ ಸ್ವಲ್ಪವೂ ಭಯ ಭಕ್ತಿ ಇಲ್ಲದಂತಾಗಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಇಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದು.

ಇಲ್ಲೊಬ್ಬ ವಿದ್ಯಾರ್ಥಿ 20 ಅಂಕದ ಟೆಸ್ಟ್ ಪರೀಕ್ಷೆಯಲ್ಲಿ 18 ಅಂಕ ಸಿಕ್ಕಿದ್ದಕ್ಕೆ ಸಿಟ್ಟಿಗೆದ್ದು ತರಗತಿಯಲ್ಲೇ ವಿದ್ಯಾರ್ಥಿಗಳ ಸಮ್ಮುಖದಲ್ಲೇ ಗಣಿತ ಶಿಕ್ಷಕಿಯ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದಾನೆ ಅಷ್ಟು ಮಾತ್ರವಲ್ಲದೆ ಗುರುಗಳು ಎಂಬ ಜ್ಞಾನವಿಲ್ಲದೆ ಶಿಕ್ಷಕಿ ಕಪಾಳಕ್ಕೆ ಹೊಡೆದು ಕಾಲಿನಿಂದ ಒದ್ದು ತನ್ನ ಆಕ್ರೋಶ ಹೊರ ಹಾಕಿದ್ದಾನೆ. ವಿದ್ಯಾರ್ಥಿ ಶಿಕ್ಷಕಿಯ ಮೇಲೆ ನಡೆಸಿರುವ ಹಲ್ಲೆ ತರಗತಿಯಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಂದಹಾಗೆ ಈ ಘಟನೆ ನಡೆದಿರುವುದು ಥೈಲ್ಯಾಂಡ್‌ನಲ್ಲಿ ಆಗಸ್ಟ್ 5 ರಂದು,

ಘಟನೆಯಲ್ಲಿ ಶಿಕ್ಷಕಿಯ ಎಡ ಕಣ್ಣಿಗೆ ಗಾಯವಾಗಿದ್ದು ಜೊತೆಗೆ ಕೈಯಿಂದ ಬಲವಾಗಿ ಗುದ್ದಿದ ಪೆಟ್ಟಿಗೆ ತಲೆಯ ಒಂದು ಭಾಗ ಊದಿಕೊಂಡಿದ್ದು ಸದ್ಯ ಆಸ್ಪತ್ರೆಯಲ್ಲಿ ಶಿಕ್ಷಕಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

ವಿದ್ಯಾರ್ಥಿ ಅಮಾನತು:
ಶಿಕ್ಷಕಿ ಮೇಲೆ ಹಲ್ಲೆ ನಡೆಸಿರುವ ಆರೋಪದ ಮೇಲೆ ವಿದ್ಯಾರ್ಥಿಯನ್ನು ಅಮಾನತುಗೊಳಿಸಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ಮಾಹಿತಿ ನೀಡಿದೆ.


Spread the love
Share:

administrator

Leave a Reply

Your email address will not be published. Required fields are marked *