Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕುವೆಂಪು ವಿವಿಯಲ್ಲಿ ವಿದ್ಯಾರ್ಥಿಗಳ ಆಕ್ರೋಶ: ಕುಲಪತಿ ಕಚೇರಿ ಧ್ವಂಸ; ಪರೀಕ್ಷಾ ಫಲಿತಾಂಶ, ಅಂಕಪಟ್ಟಿಗಾಗಿ ಪಟ್ಟು

Spread the love

ಶಿವಮೊಗ್ಗ: ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸದ ಕುವೆಂಪು ವಿವಿ ಕುಲಪತಿಗಳ ವಿರುದ್ದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ, ಶಂಕರಘಟ್ಟದಲ್ಲಿರುವ ಕುಲಪತಿಗಳ ಕಚೇರಿ ಆವರಣದಲ್ಲಿನ ಕುರ್ಚಿ, ಪಾಟ್ ಎಲ್ಲವೂ ಪುಡಿಗಟ್ಟಿದ ಘಟನೆ ನಡೆದಿರುವುದು ವರದಿಯಾಗಿದೆ.
ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸುವಂತೆ ಕುವೆಂಪು ವಿಶ್ವವಿದ್ಯಾಲಯದ ಗಮನಕ್ಕೆ ಸಾಕಷ್ಟು ಬಾರಿ ತಂದರೂ ಸ್ಪಂದಿಸದೇ ವಿದ್ಯಾರ್ಥಿ ವಿರೋಧಿ ನೀತಿ ತೋರುತ್ತಿರುವ ಕುಲಪತಿಗಳ ವಿರುದ್ಧ ಬುಧವಾರ ಎನ್‌ಎಸ್‌ಯುಐ ವತಿಯಿಂದ ಕುವೆಂಪು ವಿವಿ ಆವರಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವಿಸಿ ಕಚೇರಿ ಬೋರ್ಡ್ ಗೆ ಕಪ್ಪು ಮಸಿ ಬಳಿದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸದ ವಿಸಿಗೆ ಧಿಕ್ಕಾರ ಕೂಗಿದರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಿರಂತರವಾಗಿ ವಿದ್ಯಾರ್ಥಿ ವಿರೋಧಿ ನಡೆ ಅನುಸರಿಸುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿರುವ ವಿಶ್ವವಿದ್ಯಾಲಯದ ನಡೆಯನ್ನು ಖಂಡಿಸಿದರು.
ಕುಲಪತಿಗಳು ಅಧಿಕಾರ ಸ್ವೀಕರಿಸಿದಾಗಿನಿಂದಲೂ ವಿಶ್ವವಿದ್ಯಾಲಯದಲ್ಲಿ ಅಧಿಕಾರಿ ವರ್ಗದವರ ಆಂತರಿಕ ಕಚ್ಚಾಟದಲ್ಲೇ ತೊಡಗಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಕಳೆದ 5 ತಿಂಗಳ ಹಿಂದೆ ಪರೀಕ್ಷೆ ಬರೆದಿದ್ದ 1,3 ಮತ್ತು 5ನೇ ಸೆಮಿಸ್ಟರ್‌ಗಳ ಫಲಿತಾಂಶ ಪ್ರಕಟಿಸಿಲ್ಲ.ಅಲ್ಲದೇ 3 ವರ್ಷಗಳಿಂದ ಯಾವುದೇ ಪರೀಕ್ಷೆಗಳ ಅಂಕಪಟ್ಟಿಯನ್ನು ವಿತರಿಸದೇ ಅಂಕಪಟ್ಟಿಗಳನ್ನು ಮುದ್ರಿಸಲು ಟೆಂಡ‌ರ್ ಕರೆಯುವುದಾಗಿ ಹೇಳುತ್ತಲೇ ಬರಲಾಗುತ್ತಿದೆ. ಇದರಿಂದಾಗಿ ಪದವಿ ಪೂರೈಸಿದ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸಕ್ಕೆ ಹೋಗಲು, ಉದ್ಯೋಗ ಕಂಡುಕೊಳ್ಳಲು ಆಗುತ್ತಿಲ್ಲ. ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಪಾಸಿಂಗ್ ಸರ್ಟಿಫಿಕೇಟ್ ಅಥವಾ ಪದವಿ ಪ್ರಮಾಣ ಪತ್ರ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಸಂದರ್ಭದಲ್ಲಿ ಎನ್‌ಎಸ್‌ಯುಐನ ಜಿಲ್ಲಾಧ್ಯಕ್ಷ ವಿಜಯ್, ಕಾರ್ಯಾಧ್ಯಕ್ಷ ರವಿ ಕಟಿಕೆರೆ, ನಗರಾಧ್ಯಕ್ಷರಾದ ರವಿ, ಯುವ ಮುಖಂಡರಾದ ಮುರುಗೇಶ್, ನಗರ ಉಪಾಧ್ಯಕ್ಷ ಆದಿತ್ಯ ಸುಭಾನ್, ಪ್ರಧಾನ ಕಾರ್ಯದರ್ಶಿ ಚಂದ್ರೋಜಿ ರಾವ್, ವರುಣ್, ಅಭಿ, ಫರಾಝ್, ಸೃಜನ್, ಚೇತನ್, ಧನುಷ್, ಸೃಜನ್ ಲೋಹಿತ್, ಆಕಾಶ್, ಹಾಲಸ್ವಾಮಿ ಮೊದಲಾವರಿದ್ದರು.


Spread the love
Share:

administrator

Leave a Reply

Your email address will not be published. Required fields are marked *