Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೇವಲ 6 ದಿನ ಬ್ಯಾಟ್ ಬೀಸಲಿದ್ದಾರೆ ರೋಹಿತ್: ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸರಣಿಯಲ್ಲಿ ವಿಫಲವಾದರೆ ಟೀಮ್ ಇಂಡಿಯಾದಿಂದ ಗೇಟ್ ಪಾಸ್ ಖಚಿತ

Spread the love

ಟೆಸ್ಟ್ ಹಾಗೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ ರೋಹಿತ್ ಶರ್ಮಾ ಈ ವರ್ಷ ಆಡಲಿರುವುದು ಕೇವಲ 6 ಏಕದಿನ ಪಂದ್ಯಗಳನ್ನು ಮಾತ್ರ. ಅಂದರೆ ಅಭಿಮಾನಿಗಳ ಮುಂದೆ ಹಿಟ್​ಮ್ಯಾನ್ ಕೇವಲ 6 ದಿನಗಳು ಮಾತ್ರ ಬ್ಯಾಟ್ ಬೀಸಲಿದ್ದಾರೆ. ಈ ಆರು ಪಂದ್ಯಗಳು ರೋಹಿತ್ ಶರ್ಮಾ ಪಾಲಿಗೆ ನಿರ್ಣಾಯಕ

ಭಾರತ ಏಕದಿನ ತಂಡದ ನಾಯಕ ಬದಲಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಮುನ್ನ ರೋಹಿತ್ ಶರ್ಮಾ (Rohit Sharma) ಸ್ಥಾನಕ್ಕೆ ಶುಭ್​ಮನ್ ಗಿಲ್ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಭಾರತೀಯ ಕ್ರಿಕೆಟ್​ನಲ್ಲಿ ಹಿಟ್​ಮ್ಯಾನ್ ಯುಗಾಂತ್ಯದ ಮುನ್ಸೂಚನೆ ಸಿಕ್ಕಿದೆ.

ಇದಾಗ್ಯೂ ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್ ಆಡುವ ಇರಾದೆಯಲ್ಲಿದ್ದಾರೆ. ಈ ವಿಶ್ವಕಪ್​​ಗೂ ಮುನ್ನ ಹಿಟ್​ಮ್ಯಾನ್ ಭರ್ಜರಿ ಪ್ರದರ್ಶನ ನೀಡಬೇಕಾದ ಅನಿವಾರ್ಯತೆ ಇದೆ. ಅದರಲ್ಲೂ ಈ ವರ್ಷ ನಡೆಯಲಿರುವ 6 ಏಕದಿನ ಪಂದ್ಯಗಳು ರೋಹಿತ್ ಶರ್ಮಾ ಪಾಲಿಗೆ ನಿರ್ಣಾಯಕ.

ಅಕ್ಟೋಬರ್ 19 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿ ಶುರುವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 3 ಪಂದ್ಯಗಳನ್ನಾಡಲಿದೆ. ಇದಾದ ಬಳಿಕ ಭಾರತ ತಂಡವು ಸೌತ್ ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. 

ಈ ಆರು ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿದರೆ ಮಾತ್ರ ರೋಹಿತ್ ಶರ್ಮಾ ಅವರನ್ನು ಏಕದಿನ ತಂಡದಲ್ಲಿ ಉಳಿಸಲಾಗುತ್ತದೆ. ಒಂದು ವೇಳೆ ಈ ವರ್ಷ ನಡೆಯಲಿರುವ 6 ಏಕದಿನ ಪಂದ್ಯಗಳಲ್ಲಿ ಹಿಟ್​ಮ್ಯಾನ್ ವಿಫಲರಾದರೆ ಟೀಮ್ ಇಂಡಿಯಾದಿಂದ ಗೇಟ್ ಪಾಸ್ ಖಚಿತ

ಏಕೆಂದರೆ 2027ರ ಏಕದಿನ ವಿಶ್ವಕಪ್​ ಅನ್ನು ಮುಂದಿಟ್ಟುಕೊಂಡು ಭಾರತ ತಂಡವನ್ನು ರೂಪಿಸಬೇಕಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಸ್ಪಷ್ಟಪಡಿಸಿದ್ದಾರೆ. ಇದೇ ಕಾರಣದಿಂದಾಗಿ ಏಕದಿನ ತಂಡದ ನಾಯಕತ್ವದಿಂದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಲಾಗಿದೆ.

ಒಂದು ವೇಳೆ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ವಿಫಲರಾದರೆ, ನವೆಂಬರ್-ಡಿಸೆಂಬರ್​ನಲ್ಲಿ ನಡೆಯಲಿರುವ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಮತ್ತೊಂದು ಚಾನ್ಸ್ ನೀಡಲಾಗುತ್ತದೆ. ಈ ಸರಣಿಯಲ್ಲೂ ನಿರೀಕ್ಷಿತ ಪ್ರದರ್ಶನ ನೀಡದಿದ್ದರೆ 2026ರ ಸರಣಿಗಳಿಗೆ ಅವರನ್ನು ಆಯ್ಕೆ ಮಾಡುವುದು ಡೌಟ್. ಹೀಗಾಗಿಯೇ ಈ ವರ್ಷ ನಡೆಯಲಿರುವ 6 ಏಕದಿನ ಪಂದ್ಯಗಳು ರೋಹಿತ್ ಶರ್ಮಾ ಅವರ​  ಭವಿಷ್ಯ ನಿರ್ಧರಿಸಲಿದೆ ಎನ್ನಬಹುದು.


Spread the love
Share:

administrator

Leave a Reply

Your email address will not be published. Required fields are marked *