Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಿಎಸ್‌ಎಲ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ವಿವಾದ: ಶಾಹೀನ್ ಅಫ್ರಿದಿ ವಿರುದ್ಧ ಗಂಭೀರ ಆರೋಪ

Spread the love

ಕರಾಚಿ: ಪಾಕಿಸ್ತಾನದ ಖ್ಯಾತ ವೇಗದ ಬೌಲರ್ ಶಹೀನ್ ಅಫ್ರಿದಿ ಮತ್ತೆ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಪಾಕಿಸ್ತಾನ ಸೂಪ‌ರ್ ಲೀಗ್ ಪಂದ್ಯದ ವೇಳೆ ಚೆಂಡು ವಿರೂಪಗೊಳಿಸುವ ಇವರ ಪ್ರಯತ್ನವನ್ನು ಅಂಪೈರ್ ತಡೆದರು ಎನ್ನಲಾದ ಘಟನೆ ಬಳಿಕ ಮತ್ತೊಂದು ಘಟನೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಢಾಕಾದ ಶೇರ್ ಇ ಬಾಂಗ್ಲಾ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಪ್ರಥಮ ಕ್ರಿಕೆಟ್ ಟೆಸ್ಟ್ ನಲ್ಲಿ ಶಹೀನ್ ಅಫ್ರಿದಿಯವರ ನಡೆ ವಿವಾದಕ್ಕೆ ಕಾರಣವಾಗಿದೆ. ಬಾಂಗ್ಲಾದೇಶ- ಪಾಕಿಸ್ತಾನ ನಡುವಿನ ಪ್ರಥಮ ಟೆಸ್ಟ್ ನ ನಾಲ್ಕನೇ ದಿನ ಚೆಂಡಿನ ರೂಪವನ್ನು ಬದಲಿಸಲು ಶಹೀನ್ ಅಫ್ರಿದಿ ಪ್ರಯತ್ನಿಸುತ್ತಿರುವುದು ಕ್ಯಾಮೆರಾದಲ್ಲಿ ದಾಖಲಾಗಿದೆ.
ಬಾಂಗ್ಲಾದೇಶದ ಎರಡನೇ ಇನ್ನಿಂಗ್ಸ್ ವೇಳೆ ಈ ಎಡಗೈ ವೇಗಿ, ಚೆಂಡನ್ನು ತಮ್ಮಗೂ ಸ್ಟೈಕ್ ಅಡಿಯಲ್ಲಿ ಒತ್ತುತ್ತಿರುವುದು ಕಂಡುಬಂದಿದೆ. ಇದನ್ನು ಮೈದಾನದಲ್ಲಿದ್ದ ಅಂಪೈರ್ ತಕ್ಷಣ ಗಮನಿಸಿ ಶಹೀನ್ ಅಫ್ರಿದಿ ಯವರಿಂದ ಚೆಂಡನ್ನು ತೆಗೆದುಕೊಂಡು ಅದರ ಸ್ಥಿತಿಯನ್ನು ಪರಿಶೀಲಿಸಿದ್ದಾರೆ.
ಆದಾಗ್ಯೂ ಚೆಂಡನ್ನು ಪರಿಶೀಲಿಸಿ, ಅದು ವಿರೂಪಗೊಂಡಿಲ್ಲ ಎಂದು ಖಾತರಿಯಾದ ಬಳಿಕ ಶಹೀನ್ ಅಫ್ರಿದಿ ಗೆ ಚೆಂಡನ್ನು ವಾಪಾಸು ನೀಡಿ ಓವರ್ ಪೂರ್ಣಗೊಳಿಸಲು ಅವಕಾಶ ಮಾಡಿಕೊಟ್ಟರು.


Spread the love
Share:

administrator

Leave a Reply

Your email address will not be published. Required fields are marked *