ಪಿಯುಸಿ ವಿದ್ಯಾರ್ಥಿನಿಗೆ ಮೆಸೆಜ್ ಮಾಡಿದ ವಿಚಾರ; ನಡುರಸ್ತೆಯಲ್ಲಿ ಹೈಡ್ರಾಮಾ, ನಾಲ್ವರು ರೌಡಿಗಳ ಬಂಧನ

ತುಮಕೂರು : ಅದು ಬೆಳಗಿನ ಜಾವ 5 ಗಂಟೆ.. ತುಮಕೂರಿನ ಕೊರಟಗೆರೆ ತಾಲೂಕಿನ ಹುಲಿಕುಂಟೆ ಗ್ರಾಮದ ಗಂಟಿಗಾನಹಳ್ಳಿಯಲ್ಲಿ ಜನ ನಿದ್ರೆಗೆ ಜಾರಿದ್ದರು.. ಈ ವೇಳೆ ಅಲ್ಲಿಗೆ ಬಂದ ನಾಲ್ವರ ಗುಂಪೊಂದು ಭಾರಿ ಹೈಡ್ರಾಮಾ ಸೃಷ್ಟಿಸಿದ್ದು, ದೊಣ್ಣೆಗಳನ್ನ ಹಿಡಿದು ರೌಡಿಸಂ ತೋರಿಸೊ ಮುಖಾಂತರ ಇಡಿ ಊರನ್ನೇ ಬೆಚ್ಚಿ ಬೀಳಿಸಿದ್ದಾರೆ..

ಇನ್ನು ಊರಿಗೆ ಲಾಂಗ್ ತಂದು ಹೈಡ್ರಾಮಾ ಸೃಷ್ಟಿಸಿದ್ದು ಈತನೇ.. ಹೆಸರು ನವೀನ್.. ಈತ ತನ್ನ ಮೂವರು ಗೆಳೆಯರ ಜೊತೆ ಬಂದು ಗಲಾಟೆ ಮಾಡಿದ್ದಾನೆ.. ಅಸಲಿಗೆ ಈ ಘಟನೆಗೆ ಕಾರಣ ಪಿಯುಸಿ ವಿದ್ಯಾರ್ಥಿನಿಗೆ ಈ ನವೀನ್ ಮಾಡಿದ ಸಂದೇಶ.. ಹೌದು, ಕಳೆದ ಕೆಲ ತಿಂಗಳ ಹಿಂದೆ ವಿದ್ಯಾರ್ಥಿನಿಗೆ ನವೀನ್ ಮೆಸೆಜ್ ಮಾಡಿದ್ದನಂತೆ.. ವಿಚಾರ ತಿಳಿದ ಪೊಷಕರು ಬುದ್ದಿವಾದ ಹೇಳಿದ್ದರಂತೆ.. ದೊಡ್ಡವರು ಹೇಳಿದ ಮಾತು ಅರಿತು ಬದಲಾಗೋದು ಬಿಟ್ಟು ನವೀನ್ ತನ್ನ ಮೂವರು ಸ್ನೇಹಿತರ ಜೊತೆ ಬಂದು ಹೈಡ್ರಾಮಾ ಮಾಡಿದ್ದಾನೆ..
ಹೌದು, ಇದೇ ತಿಂಗಳ 13 ರಂದು ರಾತ್ರಿ ಪಾರ್ಟಿ ಮಾಡಿದ ನವೀನ್ ಎಣ್ಣೆ ಮತ್ತಿನಲ್ಲಿ ತನ್ನ ಮೂವರು ಸ್ನೇಹಿತರ ಜೊತೆ ಗಂಟಗಾನಹಳ್ಳಿಗೆ ಬಂದಿದ್ದಾನೆ.. ಸಂಬಂಧಿಕರೊಬ್ಬರ ಅಂತ್ಯಕ್ರಿಯೆ ಮುಗಿಸಿಕೊಂಡು ಬಂದು ಮನೆಯ ಹೊರಗೆ ಮಲಗಿದ್ದ ವಿದ್ಯಾರ್ಥಿನಿ ಕುಟುಂಬಕ್ಕೆ ಲಾಂಗ್ ತೋರಿಸಿ ಬೆದರಿಸಿದ್ದಾರೆ.. ಈ ವೇಳೆ ತಳ್ಳಾಟ ನೂಕಾಟ ನಡೆದಿದ್ದು, ಮಲಗಿದ್ದ ಇಬ್ಬರು ಮಹಿಳೆಯರಿಗೆ ಹಲ್ಲೆ ಸಹ ಆಗಿದೆ.. ಬಳಿಕ ನವೀನ್ ಟೀಮ್ ಪರಾರಿಯಾಗಿದ್ದು, ಘಟನೆ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ..
ಇನ್ನು ದೂರಿನ ಸಂಬಂಧ ತನಿಖೆ ಕೈಗೊಂಡ ಕೊರಟಗೆರೆ ಪೊಲೀಸರು ನವೀನ್ ಸೇರಿದಂತೆ ನಾಲ್ವರ ಬಂಧಿಸಿದ್ದಾರೆ.. ಪ್ರಾಥಮಿಕವಾಗಿ ಯುವತಿಗೆ ಮೆಸೆಜ್ ಮಾಡಿದ ವಿಚಾರವೇ ಹೈಡ್ರಾಮಾಗೆ ಕಾರಣವೆಂಬಂತೆ ಕಂಡರೂ ಇದರ ಹಿಂದೆ ಬೇರೇನಾದರೂ ಇತ್ತಾ ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.