Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದುಬಾರಿ ಪುಸ್ತಕ, ಸಮವಸ್ತ್ರಕ್ಕೆ ಒತ್ತಾಯ: ಖಾಸಗಿ ಶಾಲೆಗಳ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ, ಬೆಂಗಳೂರಿನಲ್ಲೂ ಆಕ್ರೋಶ

Spread the love

ನವದೆಹಲಿ : ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (EWS) ಸೇರಿರುವ ವಿದ್ಯಾರ್ಥಿಗಳು (Students) ದುಬಾರಿ ಬೆಲೆ ತೆತ್ತು ಖಾಸಗಿ ಪ್ರಕಾಶಕರ ಪುಸ್ತಕ, ಸಮವಸ್ತ್ರ ಮತ್ತಿತರ ಕಿಟ್‌ಗಳನ್ನು ಖರೀದಿಸುವಂತೆ ಖಾಸಗಿ ಶಾಲೆಗಳು ಒತ್ತಾಯಿಸದಂತೆ ತಡೆಯಲು ದೆಹಲಿ ಹೈಕೋರ್ಟ್‌ನಲ್ಲಿ (Delhi High Court) ಅರ್ಜಿ ಸಲ್ಲಿಸಲಾಗಿದೆ.

ಸಿಬಿಎಸ್‌ಇ ಮಾನ್ಯತೆ ಪಡೆದ ಶಾಲೆಗಳು ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಮಾತ್ರ ಬಳಸುವಂತೆ ಸೂಚಿಸಬೇಕು. ಕೊರತೆ ಇರುವ ಸಂದರ್ಭಗಳಲ್ಲಷ್ಟೇ ಖಾಸಗಿ ಪ್ರಕಾಶಕರಿಂದ ಪುಸ್ತಕ ಖರೀದಿಸಬೇಕು ಎಂದು ನಿರ್ದೇಶನ ನೀಡಬೇಕು ಎಂದು ಜಗಜೀತ್ ಸಿಂಗ್ ಸಾಹ್ನಿ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಲಾಗಿದೆ.

ದುಬಾರಿ ಪುಸ್ತಕಗಳು, ಸಮವಸ್ತ್ರ ಹಾಗೂ ಶಾಲಾ ಸಾಮಗ್ರಿಗಳನ್ನು ಖರೀದಿಸಬೇಕು ಎಂದು ಶಾಲೆಗಳು ಬಲವಂತ ಮಾಡುವ ಮೂಲಕ ಇಡಬ್ಲ್ಯೂಎಸ್ ವಿದ್ಯಾರ್ಥಿಗಳನ್ನು ಖಾಸಗಿ ಶಾಲೆಗಳಿಂದ ವ್ಯವಸ್ಥಿತವಾಗಿ ಹೊರಗಿಡಲಾಗುತ್ತಿದೆ ಎಂದು ದೂರಲಾಗಿದೆ. ಆಗಸ್ಟ್ 27ರಂದು ಈ ಅರ್ಜಿಯ ವಿಚಾರಣೆಯನ್ನು ನಡೆಸುವ ಸಾಧ್ಯತೆ ಇದೆ.

ಅರ್ಜಿಯಲ್ಲಿ ಏನೇನಿದೆ?

  • ಎನ್‌ಸಿಇಆರ್‌ಟಿ ಪುಸ್ತಕದ ಬೆಲೆ ಸರಾಸರಿ ₹65 ಮಾತ್ರ. ಆದರೆ ಖಾಸಗಿ ಶಾಲೆಗಳು ₹400 ರಿಂದ ₹700 ರೂಪಾಯಿ ಬೆಲೆ ತೆತ್ತು ಖಾಸಗಿ ಪ್ರಕಾಶಕರಿಂದ ಪುಸ್ತಕ ಖರೀದಿಸುವಂತೆ ಬಲವಂತ ಮಾಡುತ್ತಿವೆ.
  • ಏಕಸ್ವಾಮ್ಯ ತಡೆಯುವುದಕ್ಕಾಗಿ ಪುಸ್ತಕ ಅಥವಾ ಕಿಟ್‌ ಪೂರೈಕೆದಾರರಿಗೆ ನಿಯಮ ವಿಧಿಸಬೇಕು.
  • ಸಿಬಿಎಸ್‌ಇ ಮಾನ್ಯತೆ ಪಡೆದ ಖಾಸಗಿ ಶಾಲೆಗಳಲ್ಲಿ ಖಾಸಗಿ ಪ್ರಕಾಶಕರ ಪುಸ್ತಕ ಶಿಫಾರಸು ಮಾಡುವ ಅಭ್ಯಾಸ ರೂಢಿಯಾಗಿದೆ. ಆ ಮೂಲಕ ನಿಯಮಗಳನ್ನು ಗಾಳಿಗೆ ತೂರಲಾಗಿದೆ.
  • ಖಾಸಗಿ ಶಾಲೆಗಳ ಮನಸೋ ಇಚ್ಛೆ ನಡೆಯಿಂದ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಭಾರೀ ಪ್ರಮಾಣದಲ್ಲಿ ಆರ್ಥಿಕವಾಗಿ ಶೋಷಣೆ ಆಗುತ್ತಿದೆ.
  • ಅನಿಯಂತ್ರಿತವಾಗಿ ಖಾಸಗಿಯವರಿಗೆ ಮಣೆ ಹಾಕುತ್ತಿರುವುದು, ಬಡ ಕುಟುಂಬಗಳಿಗೆ ಅನಗತ್ಯ ಹೊರೆ ಮಾತ್ರವಲ್ಲದೆ ಆರ್‌ಟಿಇ ಕಾಯಿದೆ, ಸಿಬಿಎಸ್‌ಇ ಅಂಗಸಂಸ್ಥೆ ಉಪ-ಕಾನೂನುಗಳು ಮತ್ತು ಸಂವಿಧಾನದ 14 ಮತ್ತು 21ಎ ವಿಧಿಗಳ ಮೂಲಕ ಒದಗಿಸಲಾದ ಸಾಂವಿಧಾನಿಕ ಹಕ್ಕುಗಳ ಅಕ್ಷರಶಃ ಉಲ್ಲಂಘನೆಯಾಗಿದೆ.
  • ಶಾಲಾ ಚೀಲದ ತೂಕ ವಿದ್ಯಾರ್ಥಿಯ ತೂಕದ ಶೇಕಡಾ 10ಕ್ಕಿಂತ ಹೆಚ್ಚಿರಬಾರದು ಎಂದು ಆದೇಶಿಸುವ 2020ರ ಶಾಲಾ ಪಾಟಿಚೀಲ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.

ಶಾಲೆಗಳಲ್ಲಿ ದುಬಾರಿ ಬೆಲೆಗೆ ಪುಸ್ತಕ, ಸಮವಸ್ತ್ರ ಮಾರಾಟ: ಬೆಂಗಳೂರು ವ್ಯಾಪ್ತಿಯ ವಿವಿಧ ಖಾಸಗಿ ಶಾಲೆಗಳಲ್ಲಿ ಪುಸ್ತಕ ಮತ್ತು ಸಮವಸ್ತ್ರಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದರ ಬಗ್ಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ ಸಿಬ್ಬಂದಿ ನಮಗೆ ಎಷ್ಟೆಲ್ಲಾ ಪುಸ್ತಕಗಳು ಬೇಕು ಮತ್ತು ಎಂಥ ಸಮವಸ್ತ್ರ ಬೇಕು ಎಂಬ ಮಾಹಿತಿ ಕೊಟ್ಟರೆ ಸಾಕು, ನಾವು ಹೊರಗೆ ಪುಸ್ತಕ ಖರೀದಿಸುತ್ತೇವೆ. ಸಮವಸ್ತ್ರವನ್ನೂ ಹೊಲಿಸುತ್ತೇವೆ. ಆದರೆ ಶಾಲೆಗಳು ತಮ್ಮಿಂದಲೇ ಖರೀದಿಸಬೇಕು ಎಂದು ತಾಕೀತು ಮಾಡುತ್ತಿವೆ. ಮಾರುಕಟ್ಟೆಯಲ್ಲಿ ಎಂಆರ್ಪಿಗಿಂತಲೂ ಕಡಿಮೆ ಬೆಲೆಗೆ ಸಿಗುವ ಪುಸ್ತಕಗಳನ್ನು ದುಬಾರಿ ಬೆಲೆಗೆ ಮಾರಲಾಗುತ್ತಿದೆ ಎಂದು ಹಲವು ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *