Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರಿನಲ್ಲಿ ಇಂಧನ ಅಭಾವದ ಭೀತಿ: ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನ ಸವಾರರ ಕಿಲೋಮೀಟರ್ ಉದ್ದದ ಸಾಲು

Spread the love

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಆಟೋ ಎಲ್‌ಪಿಜಿ (Auto LPG) ಬಿಕ್ಕಟ್ಟಿನ ಬೆನ್ನಲ್ಲೇ ಈಗ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲೂ ಭಾರೀ ವ್ಯತ್ಯಯ ಉಂಟಾಗಿದೆ. ನಗರದಲ್ಲಿ ತೈಲ ಪೂರೈಕೆ ಮಾಡುವ ಪ್ರಮುಖ ಕಂಪನಿಗಳಾದ ಎಚ್‌ಪಿ (HP) ಮತ್ತು ಭಾರತ್ ಪೆಟ್ರೋಲಿಯಂ (BP) ಬಂಕ್‌ಗಳಲ್ಲಿ ಕಳೆದ ಎರಡು ದಿನಗಳಿಂದ ಇಂಧನ ದಾಸ್ತಾನು ಖಾಲಿಯಾಗುತ್ತಿದ್ದು, ವಾಹನ ಸವಾರರಲ್ಲಿ ಆತಂಕ ಮನೆಮಾಡಿದೆ. ಖಾಸಗಿ ಬಂಕ್‌ಗಳಲ್ಲಿ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ಬಂಕ್‌ಗಳ ಮೇಲೆ ಒತ್ತಡ ಹೆಚ್ಚಾಗಿದ್ದು, ಪೂರೈಕೆ ಸರಪಳಿ ಕಡಿತಗೊಂಡಿದೆ.

ಪೆಟ್ರೋಲ್, ಡೀಸೆಲ್ ಅಭಾವದ ಮುಖ್ಯಾಂಶಗಳು

  • ಎಚ್‌ಪಿ ಮತ್ತು ಭಾರತ್ ಪೆಟ್ರೋಲಿಯಂ ಬಂಕ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ಸ್ಟಾಕ್ ಸಮಸ್ಯೆ ತೀವ್ರ.
  • ಶೆಲ್, ಜಿಯೋ ಮತ್ತು ನಯಾರಾದಂಥ ಖಾಸಗಿ ಬಂಕ್‌ಗಳಲ್ಲಿ ಬೆಲೆ ಏರಿಕೆಯಿಂದಾಗಿ ಸಾರ್ವಜನಿಕ ಬಂಕ್‌ಗಳತ್ತ ಮುಖ ಮಾಡಿದ ಜನ.
  • ಲಕ್ಷಾಂತರ ರೂಪಾಯಿ ಮುಂಗಡ ಹಣ ಪಾವತಿಸಿದರೂ ಡಿಪೋಗಳಿಂದ ಪೂರೈಕೆಯಾಗದ ಇಂಧನ.

ಎಲ್‌ಪಿಜಿ ಬಿಕ್ಕಟ್ಟಿನ ನೆನಪು

ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ಆಟೋ ಎಲ್‌ಪಿಜಿ ಮತ್ತು ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾಗಿ ದೊಡ್ಡ ಸಂಚಲನ ಮೂಡಿಸಿತ್ತು. ಸಿಲಿಂಡರ್ ಬೆಲೆ ಏರಿಕೆಯಿಂದಾಗಿ ಹೋಟೆಲ್ ದರ ಏರಿಕೆಯಾಗಿದ್ದರೆ, ಪಿಜಿ ಬಾಡಿಗೆಗಳು ಹೆಚ್ಚಾಗುವ ಭೀತಿಯೂ ಎದುರಾಗಿದೆ. ಅದರ ಬೆನ್ನಲ್ಲೇ ಈಗ ಪೆಟ್ರೋಲ್ ಮತ್ತು ಡೀಸೆಲ್ ಸಿಗದೆ ಜನರು ಬಂಕ್‌ಗಳ ಮುಂದೆ ಕ್ಯೂ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಟೋ ಎಲ್‌ಪಿಜಿಗಾಗಿ ಸವಾರರು ಗಂಟೆಗಟ್ಟಲೆ ಕಾಯುತ್ತಿದ್ದ ದೃಶ್ಯಗಳು ಈಗ ಪೆಟ್ರೋಲ್ ಬಂಕ್‌ಗಳ ಮುಂದೆಯೂ ಮರುಕಳಿಸುವ ಆತಂಕ ಶುರುವಾಗಿದೆ.

ಡಿಪೋಗಳಿಂದ ಪೂರೈಕೆ ಸ್ಥಗಿತ

ತೈಲ ಮಾರಾಟಗಾರರು ಇಂಧನಕ್ಕಾಗಿ ಮುಂಗಡವಾಗಿ ಹಣ ಪಾವತಿಸಿದ್ದರೂ, ಡಿಪೋಗಳಿಂದ ಬಂಕ್‌ಗಳಿಗೆ ಸರಿಯಾದ ಸಮಯಕ್ಕೆ ಸರಬರಾಜು ಆಗುತ್ತಿಲ್ಲ. ಇಂಡಿಯನ್ ಆಯಿಲ್ (Indian Oil) ಬಂಕ್‌ಗಳಲ್ಲಿ ಸದ್ಯಕ್ಕೆ ಪೂರೈಕೆ ಸುಗಮವಾಗಿದ್ದರೂ, ಎಚ್‌ಪಿ ಮತ್ತು ಭಾರತ್ ಬಂಕ್‌ಗಳಲ್ಲಿ ಮಾತ್ರ ಪರಿಸ್ಥಿತಿ ಬಿಗಡಾಯಿಸಿದೆ.

ಕೆಲವು ಬಂಕ್‌ಗಳಲ್ಲಿ ಇಂದು ದಾಸ್ತಾನು ಬಂದಿದೆ ಎಂದು ಮಾಲೀಕರು ಹೇಳುತ್ತಿದ್ದಾರಾದರೂ, ಬೇಡಿಕೆಗೆ ತಕ್ಕಷ್ಟು ಇಂಧನ ಸಿಗುತ್ತಿಲ್ಲ. ಈ ಪೂರೈಕೆ ಕೊರತೆಯ ಬಗ್ಗೆ ತೈಲ ಕಂಪನಿಗಳಿಂದ ಬಂಕ್ ಮಾಲೀಕರಿಗೆ ಇನ್ನು ಯಾವುದೇ ಸ್ಪಷ್ಟ ಮಾಹಿತಿ ದೊರೆತಿಲ್ಲ. ಇದು ವಾಹನ ಸವಾರರ ಆತಂಕವನ್ನು ಇಮ್ಮಡಿಗೊಳಿಸಿದೆ.


Spread the love
Share:

administrator

Leave a Reply

Your email address will not be published. Required fields are marked *