ಪೇಷಾವರ: ಪಾಕಿಸ್ತಾನದಲ್ಲಿ ಉಗ್ರರ ಅಟ್ಟಹಾಸ; 6 ಅರೆಸೇನಾ ಸಿಬ್ಬಂದಿ ಹ*ತ್ಯೆ, 8 ಮಂದಿ ಅಪಹರಣ!

ಪೇಷಾವರ: ವಾಯವ್ಯ ಪಾಕಿಸ್ತಾನದ ಚೆಕ್ಷಾರಯಿಂಟ್ನಸಲ್ಲಿ ತೆಹೀಕೆ ತಾಲಿಬಾನ್ ಪಾಕಿಸ್ತಾನ್(TTP) ಗುಂಪಿನ ಸದಸ್ಯರು ಅರೆಸೇನಾ ಪಡೆಯ 6 ಸಿಬ್ಬಂದಿಗಳನ್ನು ಹತ್ಯೆಮಾಡಿ 8 ಸಿಬ್ಬಂದಿಗಳನ್ನು ಅಪಹರಿಸಿರುವುದಾಗಿ ಭದ್ರತಾ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
ಟಿಟಿಪಿಯ ಹತ್ತಕ್ಕೂ ಹೆಚ್ಚು ಸದಸ್ಯರು ಪೇಷಾವರ ನಗರದ ಚೆಕ್ಷಾರಯಿಂಟ್ ಗೆ ಬಂದೂಕು, ಹ್ಯಾಂಡ್ ಗ್ರೆನೇಡ್ಗಗಳು ಹಾಗೂ ಮಾರ್ಟರ್ ಶೆಲ್ಲಾಳೊಂದಿಗೆ ದಾಳಿ ನಡೆಸಿದರು. ದಾಳಿಯಲ್ಲಿ 6 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು ಇತರ 4 ಸಿಬ್ಬಂದಿ ಗಾಯಗೊಂಡಿದ್ದಾರೆ. ಬಳಿಕ 8 ಸಿಬ್ಬಂದಿಗಳನ್ನು ಅಜ್ಞಾತ ಪ್ರದೇಶಕ್ಕೆ ಕರೆದೊಯ್ದಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಪ್ಪಿಬ ಸುದ್ದಿಸಂಸ್ಥೆ ವರದಿ ಮಾಡಿದೆ.
