ವಿದ್ಯುತ್ ಸ್ಪರ್ಶದಿಂದ ವ್ಯಕ್ತಿ ಸಾವು: ಅಲ್ಯೂಮಿನಿಯಂ ಗಳೆ ಹಿಡಿದು ತೆಂಗಿನ ಕಾಯಿ ಕೀಳುವಾಗ ದುರಂತ

ಸುಳ್ಯ : ಅಲ್ಯೂಮಿನಿಯಂ ನಿಂದ ಮಾಡಿರುವ ಗಳೆ ಹಿಡಿದು ತೆಂಗಿನ ಕಾಯಿ ಕಿಳುತ್ತಿರುವ ವೇಳೆ ವಿದ್ಯುತ್ ಲೈನ್ ಗೆ ತಾಗಿದ ಪರಿಣಾಮ ಕರೆಂಟ್ ಶಾಕ್ ಗೆ ವ್ಯಕ್ತಿಯೊಬ್ಬರು ಸಾವನಪ್ಪಿದ ಘಟನೆ ಬೆಳ್ಳಾರೆ ಬಳಿಯ ಅಯ್ಯನಕಟ್ಟೆಯಿಂದ ವರದಿಯಾಗಿದೆ.

ಮೃತರಾದ ವ್ಯಕ್ತಿ ತಂಬಿನಮಕ್ಕಿಯ ರಾಮ ಎಂದು ತಿಳಿದು ಬಂದಿದೆ. ಅಯ್ಯನಕಟ್ಟೆಯ ಗೋಕುಲಂ ಎದುರುಗಡೆ ಇರುವ ಸಿದ್ದಿಕ್ ಎಂಬರಿಗೆ ಸೇರಿದ ತೆಂಗಿನ ಮರದಿಂದ ಕಾಯಿ ಕೀಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.