Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಾಷ್ಟ್ರ ರಾಜಧಾನಿಯಲ್ಲಿ ಜನರಿಗಿಲ್ಲ ರಕ್ಷಣೆ: ರಸ್ತೆಯಲ್ಲೇ ಮಹಿಳೆಯ ಲೂಟಿ ಮಾಡಿದ ಕಿರಾತಕರು

Spread the love

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಾಡಹಗಲೇ ಆಘಾತಕಾರಿ ಘಟನೆಯೊಂದು ನಡೆದಿದೆ. ತನ್ನ ಮಗಳನ್ನು ಶಾಲಾ ಬಸ್​​ಗೆ ಹತ್ತಿಸಲು ಸ್ಕೂಟಿಯಲ್ಲಿ ಬಂದಿದ್ದ ಮಹಿಳೆ ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಯುವಕರು ಬೈಕ್​ಗಳಲ್ಲಿ ಬಂದು ಆಕೆಯನ್ನು ಅಡ್ಡಹಾಕಿದರು. ಆಕೆಯ ಕುತ್ತಿಗೆಯಲ್ಲಿದ್ದ ಸರ, ಕೈಯಲ್ಲಿದ್ದ ಬ್ಯಾಗ್ ಕಸಿದುಕೊಳ್ಳಲು ಪ್ರಯತ್ನಿಸಿದರು. ಅವರಿಂದ ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆಯುಧಗಳನ್ನು ತೆಗೆದು ಆಕೆಯ ಮೇಲೆ ದಾಳಿ ನಡೆಸಿದರು. ಇಷ್ಟೆಲ್ಲ ನಡೆದಿದ್ದು ಬೆಳಗ್ಗೆ ಜನರೆಲ್ಲ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗಲೇ. ಆದರೂ ಯಾರಿಗೂ ಹೆದರದ ಕಳ್ಳರು ಆಕೆಯನ್ನು ಲೂಟಿ ಮಾಡಿದ್ದಾರೆ. ಅಲ್ಲೇ ಬೈಕ್​ನಲ್ಲಿ ಹೋಗುತ್ತಿದ್ದವರು ಇದನ್ನು ನೋಡಿದರೂ ನೋಡದಂತೆ ತಮ್ಮಷ್ಟಕ್ಕೆ ಮುಂದೆ ಹೋಗಿದ್ದಾರೆ. ಇಡೀ ಘಟನೆ ಅಲ್ಲಿದ್ದ ರಸ್ತೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ದೆಹಲಿಯಲ್ಲಿ ಹಗಲು ಹೊತ್ತಿನಲ್ಲೂ ಜನರಿಗೆ ರಕ್ಷಣೆಯಿಲ್ಲವೇ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.


Spread the love
Share:

administrator

Leave a Reply

Your email address will not be published. Required fields are marked *