Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನೆಹರು ದಾಖಲೆಗಳು ಕಾಣೆಯಾಗಿಲ್ಲ, ಅವು ಸೋನಿಯಾ ಗಾಂಧಿ ಬಳಿ ಇವೆ: ಕೇಂದ್ರ ಸರ್ಕಾರದ ಸ್ಪಷ್ಟನೆ ಬೆನ್ನಲ್ಲೇ ಹೊಸ ರಾಜಕೀಯ ಸಮರ!

Spread the love

ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರಿಗೆ ಸಂಬಂಧಿಸಿದ ಐತಿಹಾಸಿಕ ದಾಖಲೆಗಳು ಕಾಣೆಯಾಗಿವೆ ಎಂಬ ವದಂತಿಗಳಿಗೆ ಕೇಂದ್ರ ಸರ್ಕಾರ ತೆರೆ ಎಳೆದಿದ್ದು, ಆ ಎಲ್ಲಾ ದಾಖಲೆಗಳು ಸೋನಿಯಾ ಗಾಂಧಿ ಅವರ ಬಳಿ ಇವೆ ಎಂದು ಸಂಸತ್ತಿನಲ್ಲಿ ಸ್ಪಷ್ಟಪಡಿಸಿದೆ.

ಬಿಜೆಪಿ ಸಂಸದ ಸಂಬಿತ್ ಪಾತ್ರ ಅವರ ಪ್ರಶ್ನೆಗೆ ಉತ್ತರಿಸಿದ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, 2008ರ ಯುಪಿಎ ಸರ್ಕಾರದ ಅವಧಿಯಲ್ಲಿ ಸೋನಿಯಾ ಗಾಂಧಿ ಅವರ ಪ್ರತಿನಿಧಿ ಎಂ.ವಿ. ರಾಜನ್ ಅವರ ಮನವಿಯ ಮೇರೆಗೆ ನೆಹರು ಅವರಿಗೆ ಸಂಬಂಧಿಸಿದ 51 ಪೆಟ್ಟಿಗೆಗಳಷ್ಟು ಖಾಸಗಿ ಪತ್ರಗಳು ಮತ್ತು ದಾಖಲೆಗಳನ್ನು ಹಸ್ತಾಂತರಿಸಲಾಗಿತ್ತು ಎಂಬ ಅಂಶವನ್ನು ಬಹಿರಂಗಪಡಿಸಿದ್ದಾರೆ.

ಈ ದಾಖಲೆಗಳನ್ನು 2025ರ ಜನವರಿ ಮತ್ತು ಜುಲೈ ಅವಧಿಯಲ್ಲಿ ಹಿಂತಿರುಗಿಸುವಂತೆ ಸೋನಿಯಾ ಗಾಂಧಿ ಅವರ ಕಚೇರಿಗೆ ಸೂಚನೆ ನೀಡಲಾಗಿದ್ದರೂ, ಅವುಗಳನ್ನು ಇದುವರೆಗೆ ಮರಳಿ ನೀಡಿಲ್ಲ ಎಂದು ಸರ್ಕಾರ ತಿಳಿಸಿದೆ. “ನೆಹರು ಅವರ ದಾಖಲೆಗಳು ದೇಶದ ಐತಿಹಾಸಿಕ ಪರಂಪರೆಯೇ ಹೊರತು ಯಾರೋ ಒಬ್ಬರ ಖಾಸಗಿ ಆಸ್ತಿಯಲ್ಲ” ಎಂದು ಕಿಡಿಕಾರಿರುವ ಸಚಿವ ಶೇಖಾವತ್, ಸೋನಿಯಾ ಗಾಂಧಿ ಅವರು ದೇಶದಿಂದ ಏನನ್ನು ಮರೆಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಈ ವಿಚಾರವು ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದ್ದು, ಐತಿಹಾಸಿಕ ದಾಖಲೆಗಳು ಸಾರ್ವಜನಿಕ ವಸ್ತುಸಂಗ್ರಹಾಲಯದಲ್ಲಿ ಸಂಶೋಧಕರಿಗೆ ಲಭ್ಯವಿರಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *