Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ: ಲಾತೂರ್ ವೈದ್ಯ, ಪುಣೆಯ ಕೋಚಿಂಗ್ ಶಿಕ್ಷಕ ಸಿಬಿಐ ಬಲೆಗೆ!

Spread the love

ಹೊಸದಿಲ್ಲಿ: 2026ರ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಬುಧವಾರ ಲಾತೂ‌ರ್ ಮೂಲದ ವೈದ್ಯ ಮತ್ತು ಪುಣೆಯ ಕೋಚಿಂಗ್‌ ಸಂಸ್ಥೆಯ ಭೌತಶಾಸ್ತ್ರ ವಿಭಾಗದ ಶಿಕ್ಷಕನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ್ದ ಪಿ.ವಿ. ಕುಲಕರ್ಣಿ ಅವರಿಂದ ರಸಾಯನಶಾಸ್ತ್ರ ಪ್ರಶ್ನೆಗಳನ್ನು ಪಡೆಯಲು ಮೂವರು ವಿದ್ಯಾರ್ಥಿಗಳಿಗೆ ನೆರವಾದ ಆರೋಪದಲ್ಲಿ ಮನೋಜ್ ಶಿರೂರೆ ಅವರನ್ನು ತನಿಖಾ ಸಂಸ್ಥೆ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುಣೆ ಮೂಲದ ತರಬೇತಿ ಕೇಂದ್ರವಾದ ಡಾ. ಅಭಂಗ್ ಪ್ರಭು ವೈದ್ಯಕೀಯ ಅಕಾಡೆಮಿ (ಎಪಿಎಂಎ) ಯ ಭೌತಶಾಸ್ತ್ರ ಶಿಕ್ಷಕ ತೇಜಸ್ ಹರ್ಷದ್ ಕುಮಾರ್ ಶಾ ಅವರನ್ನು ಕೂಡ ತನಿಖಾ ಸಂಸ್ಥೆ ಬಂಧಿಸಿದೆ ಎಂದು ವರದಿಯಾಗಿದೆ.
ಇದರಿಂದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *