Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೌದ್ಧ ಬಿಕ್ಕುಗಳಿಗೂ ಮಾಸಿಕ ಗೌರವಧನ: ಪರಿಷತ್ತಿನಲ್ಲಿ ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ!

Spread the love

ಬೆಳಗಾವಿ: ಬೌದ್ಧ ಬಿಕ್ಕುಗಳಿಗೆ (Buddhist Monks) ಸರ್ಕಾರದಿಂದಲೇ ಮಾಸಿಕ ಗೌರವ ಧನ ಕೊಡಲಿದೆ ಅಂತ ಸರ್ಕಾರ ಘೋಷಣೆ ಮಾಡಿದೆ.

ವಿಧಾನ ಪರಿಷತ್ ‌ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಶಿವಕುಮಾರ್ ಪ್ರಶ್ನೆ ಕೇಳಿದರು. ಬುದ್ಧ ವಿಹಾರಗಳು ನಡೆಸೋಕೆ ಸರ್ಕಾರ ಗ್ರ್ಯಾಂಟ್ ಕೊಡಬೇಕು. 80 ಬುದ್ಧ ವಿಹಾರಗಳು ಇವೆ. 200 ಬೌದ್ಧ ಬಿಕ್ಕುಗಳು ಇದರಲ್ಲಿ ಕೆಲಸ ಮಾಡ್ತಿದ್ದಾರೆ. ಇವರಿಗೆ ಮಾಸಿಕ ಸಂಭಾವನೆ ನೀಡಬೇಕು. 6 ಸಾವಿರ ರೂ. ಬೌದ್ಧ ಬಿಕ್ಕುಗಳಿಗೆ ಕೊಡಬೇಕು. ಅವರ ಸೇವಕರಿಗೆ 5 ಸಾವಿರ ಕೊಡಬೇಕು ಅಂತ ಆಗ್ರಹಿಸಿದರು. 

ಇದಕ್ಕೆ ಸಚಿವ ಜಮೀರ್ ಪರವಾಗಿ ರಾಮಲಿಂಗಾರೆಡ್ಡಿ ಉತ್ತರ ನೀಡಿ, ಜೈನ ಬಸದಿ ಅರ್ಚಕರಿಗೆ 6 ಸಾವಿರ, ಸಹಾಯ ಅರ್ಚಕರಿಗೆ 5 ಸಾವಿರ ಕೊಡಲಾಗುತ್ತಿದೆ. ಪೇಶ್ ಇಮಾಮ್‌ಗಳಿಗೆ 6 ಸಾವಿರ ಮತ್ತು ಮುಯೀಜ್ಜನ್‌ಗೆ 5 ಸಾವಿರ ಮಾಸಿಕ ಗೌರವಧನ ಕೊಡಲಾಗ್ತಿದೆ. ಬೌದ್ಧ ಬಿಕ್ಕುಗಳಿಗೆ ಸರ್ಕಾರ ಮಾಸಿಗ ಗೌರವ ಧನ ಕೊಡಲಿದೆ. ಶೀಘ್ರವೇ ಗೌರವ ಧನ ಕೊಡುತ್ತೇವೆ ಎಂದು ಘೋಷಿಸಿದರು.


Spread the love
Share:

administrator

Leave a Reply

Your email address will not be published. Required fields are marked *