Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಿಲಿಕಾನ್ ಸಿಟಿಯಲ್ಲಿ ರೌಡಿಗಳ ಹಾವಳಿ: ಶಾಲೆ ಸಮೀಪವೇ ಲಾಂಗ್ ಬೀಸಿ ಸಾರ್ವಜನಿಕರಿಗೆ ಬೆದರಿಕೆ

Spread the love

ಬೆಂಗಳೂರು: ಕಾನೂನು ಸುವ್ಯವಸ್ಥೆಗೆ ಹೆಸರಾಗಿದ್ದ ಸಿಲಿಕಾನ್ ಸಿಟಿ ಬೆಂಗಳೂರು ಇತ್ತೀಚಿನ ದಿನಗಳಲ್ಲಿ ಪುಂಡರ ಅಡ್ಡೆಯಾಗುತ್ತಿದೆಯೇ ಎಂಬ ಅನುಮಾನ ಮೂಡಲಾರಂಭಿಸಿದೆ. ನಗರದ ಡೇನಿಸ್ ರಸ್ತೆಯ (Davis Road) ಸೆಂಟ್ ಅಲ್ಫೋನ್ಸಸ್ ಶಾಲೆಯ (St. Alphonsus School) ಜಂಕ್ಷನ್ ಬಳಿ, ಸಾರ್ವಜನಿಕವಾಗಿ ಯುವಕರ ಗುಂಪೊಂದು ಮಾರಕಾಸ್ತ್ರ ಪ್ರದರ್ಶಿಸಿ ದಾದಾಗಿರಿ ನಡೆಸಿರುವ ಬೆಚ್ಚಿಬೀಳಿಸುವ ಘಟನೆ ಶನಿವಾರ ಮುಂಜಾನೆ ನಡೆದಿದೆ. ಈ ಕುರಿತಾದ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ವಿಡಿಯೋವನ್ನು ನೋಡಿ ನಾಗರಿಕರು ಆತಂಕಗೊಂಡಿದ್ದಾರೆ.
ಲಕ್ಕಿ ಜಂಕ್ಷನ್‌ನ ಗೌಸಿಯಾ ಟೀ ಹೋಟೆಲ್ ಎದುರು ಶನಿವಾರ ಬೆಳಿಗ್ಗೆ ಸುಮಾರು 7:30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಈ ಬಗ್ಗೆ ಸ್ಥಳೀಯ ನಿವಾಸಿಯೊಬ್ಬರು ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಎರಡು ಸ್ಕೂಟರ್‌ಗಳಲ್ಲಿ ಹೆಲ್ಮೆಟ್ ಧರಿಸದೆ, ಟ್ರಾಫಿಕ್ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಿ ಒಂದೊಂದು ದ್ವಿಚಕ್ರ ವಾಹನದಲ್ಲಿ ತಲಾ ನಾಲ್ಕು ಜನರಂತೆ ಒಟ್ಟು ಎಂಟು ಜನ ಯುವಕರು ಬಂದಿದ್ದರು. ಅಲ್ಲಿ ಸಣ್ಣ ವಿಷಯಕ್ಕೆ ಪರಸ್ಪರ ತೀವ್ರ ಜಗಳ ಆರಂಭಿಸಿದ್ದಾರೆ.ಯುವಕರ ನಡುವಿನ ಮಾತಿನ ಚಕಮಕಿ ತೀವ್ರಗೊಳ್ಳುತ್ತಿದ್ದಂತೆ, ಆ ಗುಂಪಿನಲ್ಲಿದ್ದ ಒಬ್ಬ ಪುಂಡ ಸಾರ್ವಜನಿಕ ರಸ್ತೆಯಲ್ಲೇ ದೊಡ್ಡ ಲಾಂಗ್ ಹೊರತೆಗೆದು ಬೀಸುತ್ತಾ ಎದುರಾಳಿಗಳಿಗೆ ಮತ್ತು ಸಾರ್ವಜನಿಕರಿಗೆ ಬೆದರಿಕೆ ಹಾಕಿದ್ದಾನೆ. ಈ ಘಟನೆ ನಡೆದ ಸ್ಥಳದ ಅಕ್ಕಪಕ್ಕದಲ್ಲೇ ಶಾಲೆ, ಟೀ ಸ್ಟಾಲ್ ಹಾಗೂ ಸಿಗರೇಟ್ ಅಂಗಡಿಗಳಿರುವುದರಿಂದ, ಮುಂಜಾನೆ ಶಾಲೆಗೆ ತೆರಳುತ್ತಿದ್ದ ಸಣ್ಣ ಸಣ್ಣ ಮಕ್ಕಳು, ಪೋಷಕರು ಹಾಗೂ ಸವಾರರು ಈ ರೌಡಿಸಂ ನೋಡಿ ತೀವ್ರ ಭಯಭೀತರಾಗಿದ್ದಾರೆ. ಇತ್ತೀಚೆಗೆ ಈ ಭಾಗದಲ್ಲಿ ಇಂತಹ ಗಾಂಜಾ ಪುಂಡರ ಮತ್ತು ರೌಡಿಗಳ ಹಾವಳಿ ಹೆಚ್ಚಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಘಟನೆ ನಡೆದ ಜಂಕ್ಷನ್‌ನಲ್ಲಿ ಬೆಂಗಳೂರು ನಗರ ಪೊಲೀಸರ ಅಧಿಕೃತ ಸಿಸಿಟಿವಿ (CCTV) ಕ್ಯಾಮೆರಾಗಳು ಹಾಗೂ ಖಾಸಗಿ ಅಂಗಡಿಗಳ ಕಣ್ಗಾವಲು ಕ್ಯಾಮೆರಾಗಳಿದ್ದು, ಇಡೀ ಕೃತ್ಯದ ದೃಶ್ಯಾವಳಿಗಳು ಅದರಲ್ಲಿ ಸೆರೆಯಾಗಿವೆ. “ಇಂತಹ ರೌಡಿಸಂ ಮತ್ತು ಮಾರಕಾಸ್ತ್ರ ಪ್ರದರ್ಶನವನ್ನು ಸಣ್ಣ ಗಲಾಟೆ ಎಂದು ನಿರ್ಲಕ್ಷಿಸದೆ, ಪೊಲೀಸರು ತಕ್ಷಣವೇ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಬೇಕು” ಎಂದು ಸಾರ್ವಜನಿಕರು ಸಿಟಿ ಪೊಲೀಸ್ ಕಮಿಷನರ್‌ಗೆ ಜಾಲತಾಣಗಳ ಮೂಲಕ ಒತ್ತಾಯಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *