Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಂಚಲನ ಸೃಷ್ಥಿಸಿದ ಹೊಸ ಕೇಸರಿ ಪಕ್ಷದ ಸಭೆ

Spread the love

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ‘ನೂತನ ಕೇಸರಿ ಪಕ್ಷ’ ಎಂದೇ ಕರೆಯಲ್ಪಡುವ ‘ ದಿ ಸ್ಯಾಫ್ರನ್ ಫ್ರಂಟ್’ (The Saffron Front) ಪಕ್ಷದ ವತಿಯಿಂದ ಮಹತ್ವದ ಸಭೆ ನಡೆಸಲಾಯಿತು . ವಿಶೇಷವೆಂದರೆ, ದೇಶದ ಪ್ರಥಮ ಹಿಂದೂ ರಾಷ್ಟ್ರೀಯ ರಾಜಕೀಯ ಪಕ್ಷವಾದ ಹಿಂದೂ ಮಹಾಸಭಾದ ರಾಷ್ಟ್ರೀಯ ನಾಯಕರಾದ ಶ್ರೀ ರಾಜೇಶ್ ಪವಿತ್ರನ್ ಅವರ ನೇತೃತ್ವದಲ್ಲಿ ಈ ಸಭೆ ನಡೆದಿದ್ದು, ಇತರ ಪ್ರಮುಖ ಹಿಂದೂ ಸಂಘಟನೆಗಳ ನಾಯಕರು ಉಪಸ್ಥಿತರಿದ್ದರು.

ದೇಶದ ಬಹುತೇಕ ರಾಜಕೀಯ ಪಕ್ಷಗಳು ಓಲೈಕೆ ರಾಜಕಾರಣ ಹಾಗೂ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ. ಇದರಿಂದಾಗಿ ಸನಾತನ ಹಿಂದೂ ಧರ್ಮ, ಸಮಾಜ ಮತ್ತು ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗುತ್ತಿದೆ. ವಿಶೇಷವಾಗಿ ಹೆಣ್ಣುಮಕ್ಕಳು, ತಾಯಂದಿರು, ಗೋರಕ್ಷಣೆ, ದೇವಸ್ಥಾನಗಳ ಸಂರಕ್ಷಣೆ ಹಾಗೂ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಿಂದೂಗಳಿಗಾಗುತ್ತಿರುವ ತಾರತಮ್ಯವನ್ನು ತಡೆಯಲು ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ.

ಈ ಹಿನ್ನೆಲೆಯಲ್ಲಿ, ರಾಜಕೀಯದಲ್ಲಿ ಧರ್ಮವನ್ನು ಮರುಸ್ಥಾಪಿಸುವ ಅನಿವಾರ್ಯತೆ ಇರುವುದರಿಂದ ಮತ್ತು ರಾಷ್ಟ್ರೀಯ ಚಿಂತನೆಯುಳ್ಳ ಹೊಸ ರಾಜಕೀಯ ವ್ಯವಸ್ಥೆಯನ್ನು ಸಮಾಜಕ್ಕೆ ಸಮರ್ಪಿಸುವ ಉದ್ದೇಶದಿಂದ ಈ ಸಭೆಯನ್ನು ಆಯೋಜಿಸಲಾಗಿತ್ತು. ಹೊಸ ಪಕ್ಷದ ಕಾರ್ಯವೈಖರಿ ಮತ್ತು ಮುಂದಿನ ಹೋರಾಟದ ಹಾದಿಯ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.


Spread the love
Share:

administrator

Leave a Reply

Your email address will not be published. Required fields are marked *