Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಗ್ಗುಂಡಿ ಕೆರೆ ರಕ್ಷಣೆಗೆ ಜನಸಾಗರ: ಕೃಷಿಕರ ಭೂಮಿ ವಾಪಸಾತಿಗಾಗಿ ಸ್ಯಾಫ್ರನ್ ಫ್ರಂಟ್ ಬೃಹತ್ ಅಭಿಯಾನ

Spread the love

ಸ್ಯಾಫ್ರನ್ ಫ್ರಂಟ್ ವತಿಯಿಂದ ನಿನ್ನೆ ಬಗ್ಗಂಡಿ ಕೆರೆ ಮತ್ತು ಕೃಷಿ ಭೂಮಿ ಸಂರಕ್ಷಣೆಗಾಗಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಅಭಿಯಾನಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಕೃಷಿಕರ ಹಿತರಕ್ಷಣೆಗಾಗಿ ನಡೆದ ಈ ಸಮಾವೇಶದಲ್ಲಿ ನೂರಾರು ಸ್ಥಳೀಯ ನಿವಾಸಿಗಳು ಒಗ್ಗಟ್ಟಿನಿಂದ ಪಾಲ್ಗೊಂಡಿದ್ದರು.

ಸಭೆಯ ನೇತೃತ್ವ ವಹಿಸಿದ್ದ ಸ್ಯಾಫ್ರನ್ ಮುಖ್ಯಸ್ಥರಾದ ರಾಜೇಶ್ ಪವಿತ್ರನ್ ಅವರು ಮಾತನಾಡಿ, ಕೈಗಾರಿಕೆಗಳ ಹೆಸರಲ್ಲಿ ಭೂಮಿ ಪಡೆದು ದಶಕಗಳಾದರೂ ಕೃಷಿಕರಿಗೆ ನ್ಯಾಯ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಶಪಡಿಸಿಕೊಂಡ ಭೂಮಿಯನ್ನು ಮತ್ತೆ ರೈತರಿಗೆ ನೀಡುವುದು ಮತ್ತು ಇತಿಹಾಸ ಪ್ರಸಿದ್ಧ ಬಗ್ಗಂಡಿ ಕೆರೆಯನ್ನು ಹೂಳೆತ್ತಿ ಸ್ವಚ್ಛಗೊಳಿಸುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದು ಅವರು ಘೋಷಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಹೋರಾಟಗಾರರಾದ ರೋಹಿತಾಕ್ಷ ರೈ, ಶಂಕರ್ ರೈ ಗುತ್ತಿನಾರ್ ಸೇರಿದಂತೆ ಜಿಲ್ಲೆಯ ಹಲವು ಪ್ರಮುಖ ಗಣ್ಯರು ಭಾಗವಹಿಸಿ ಸಾಫ್ರೋನ್ ಫ್ರಂಟ್‌ನ ಈ ಹೋರಾಟಕ್ಕೆ ಕೈಜೋಡಿಸಿದರು. ಮುಂದಿನ ದಿನಗಳಲ್ಲಿ ಕೆರೆಯ ಸ್ವಚ್ಛತೆ ಮತ್ತು ಹಸಿರೀಕರಣಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಸಭೆಯಲ್ಲಿ ತೀರ್ಮಾನಿಸಲಾಯಿತು.


Spread the love
Share:

administrator

Leave a Reply

Your email address will not be published. Required fields are marked *