Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೀವ್: ರಷ್ಯಾದ ತೈಲ ಸಂಸ್ಕರಣಾಗಾರಗಳ ಮೇಲೆ ಉಕ್ರೇನ್ ಭೀಕರ ಡ್ರೋನ್ ದಾಳಿ; ಆರ್ಥಿಕ ಮೂಲಕ್ಕೆ ಬಿಗ್ ಶಾಕ್!

Spread the love

ಕೀವ್: ರಶ್ಯದ ಇಂಧನ ಉತ್ಪಾದನಾ ತಾಣಗಳ ಮೇಲೆ ರವಿವಾರ ನಸುಕಿನಲ್ಲಿ ತೀವ್ರ ದಾಳಿಗಳನ್ನು ಉಕ್ರೇನ್ ನಡೆಸಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ. ಆದರೆ ರಶ್ಯದ ಅಧೀನದಲ್ಲಿರುವ ಅಣುಶಕ್ತಿ ಸ್ಥಾವರವೊಂದರ ಮೇಲೆ ತಾನು ಡೋನ್ ದಾಳಿಯನ್ನು ನಡೆಸಿದೆಯೆಂಬ ವರದಿಯನ್ನು ಉಕ್ರೇನ್ ಸೇನೆ ನಿರಾಕರಿಸಿದೆ.
ನೈಋತ್ಯ ರಶ್ಯದ ರೊಸೊವ್ ಪ್ರಾಂತದಲ್ಲಿರುವ ಇಂಧನ ದಾಸ್ತಾನುಗಾರದ ಮೇಲೆ ನಡೆದ ಡೋನ್ ದಾಳಿಯಿಂದಾಗಿ ಗೋದಾಮಿಗೆ ಬೆಂಕಿ ತಗಲಿರುವುದಾಗಿ ಪ್ರಾಂತದ ಗವರ್ನರ್ ಯೂರಿ ಸಿಲ್ವೆಸ‌ರ್ ತಿಳಿಸಿದ್ದಾರೆ.
ನೈಋತ್ಯ ರಶ್ಯದ ಇನ್ನೊಂದು ಪ್ರಾಂತವಾದ ಸಾರಟೋವ್‌ನಲ್ಲಿರುವ ನಾಗರಿಕ ಮೂಲಸೌಕರ್ಯಗಳನ್ನೂ ಡೋನ್‌ಗಳು ಹಾನಿಗೊಳಿಸಿರುವುದಾಗಿ ಗವರ್ನರ್ ರೋಮನ್ ಬುಸಾರ್ಗಿನ್ ಅವರು ತಿಳಿಸಿದ್ದಾರೆ. ಪ್ರಾದೇಶಿಕ ರಾಜಧಾನಿ ಸಾರಟೊವ್‌ನಲ್ಲಿರುವ ತೈಲ ಸಂಸ್ಕರಣಾಗಾರವೊಂದು ಡೋನ್ ದಾಳಿಯಿಂದಾಗಿ ಬೆಂಕಿಗಾಹುತಿಯಾಗಿದೆ.

ಇತ್ತೀಚಿನ ತಿಂಗಳುಗಳಲ್ಲಿ ಉಕ್ರೇನ್, ರಶ್ಯದ ತೈಲ ಹಾಗೂ ಅನಿಲ ಸೌಕರ್ಯಗಳ ಮೇಲೆ ದಾಳಿಗಳು ತೀವ್ರಗೊಳಿಸಿದೆ. ರಶ್ಯವು ಸತತವಾಗಿ ನಾಲ್ಕು ತಿಂಗಳುಗಳಿಂದ ಉಕ್ರೇನ್ ಮೇಲೆ ನಡೆಸುತ್ತಿರುವ ಆಕ್ರಮಣಕ್ಕೆ ಬೇಕಾದ ಆರ್ಥಿಕ ನೆರವು ಇಂಧನವಲಯದಿಂದಲೇ ದೊರೆಯುತ್ತಿರುವುದರಿಂದ ಅದರ ಮೇಲೆ ದಾಳಿ ನಡೆಸುತ್ತಿರುವುದಗಿ ಉಕ್ರೇನ್ ವಾದಿಸುತ್ತಿದೆ.
ರಶ್ಯಾದ ಅಣುಸ್ಥಾವರದ ಮೇಲಿನ ದಾಳಿಯನ್ನು ನಿರಾಕರಿಸಿದ ಉಕ್ರೇನ್
ಉಕ್ರೇನ್‌ನ ಡೋನ್ ರಶ್ಯವು ಅತಿಕ್ರಮಿಸಿರುವ ಝಫೋರ್‌ಝಿಯಾ ಅಣುಶಕ್ತಿ ಸ್ಥಾವರದ ಮೇಲೆ ದಾಳಿ ನಡೆಸಿದೆ ಎಂಬ ರಶ್ಯದ ಆರೋಪವನ್ನು ಉಕ್ರೇನ್ ಸೇನೆ ನಿರಾಕರಿಸಿದೆ.
ದಾಳಿಯಲ್ಲಿ ಉಕ್ರೇನ್ ಡೋನ್, ಝಫೋರ್‌ಝಿಯಾ ಅಣುಶಕ್ತಿ ಸ್ಥಾವರದ ಟರ್ಬೈನ್ ಘಟಕದ ಗೋಡೆಯಲ್ಲಿ ರಂಧ್ರವೊಂದನ್ನು ಕೊರೆದಿದೆಯೆಂದು ರಶ್ಯದ ಸರಕಾರಿ ಸ್ವಾಮ್ಯದ ಪರಮಾಣು ಇಂಧನ ಸಂಸ್ಥೆ ರೊಸಾಟೊಮ್ ತಿಳಿಸಿದೆ.


Spread the love
Share:

administrator

Leave a Reply

Your email address will not be published. Required fields are marked *