Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಲಡಾಖ್‌ಗೆ ಕ್ಯಾರವಾನ್‌ನಲ್ಲಿ ಕುಟುಂಬ ಸಮೇತ ಪ್ರಯಾಣ: ಕೇರಳದ ಮಹಿಳೆಯ ಪ್ರಯಾಣವು ವೈರಲ್

Spread the love

ತಿರುವನಂತಪುರಂ: ಭಾರತದಲ್ಲಿ ಕ್ಯಾರವಾನ್ಗಳ ಸಂಖ್ಯೆ ತೀರಾ ಕಡಿಮೆ. ಆದರೆ, ಇಲ್ಲೊಬ್ಬ ಮಹಿಳೆ ಕ್ಯಾರವಾನ್ನಲ್ಲಿ ಕೇರಳದಿಂದ ಲಡಾಖ್‌ಗೆ ಕುಟುಂಬ ಸಮೇತರಾಗಿ ತೆರಳುತ್ತಿದ್ದಾರೆ.

ಕೇರಳ ಮೂಲದ ಈ ಮಹಿಳೆ ಕರ್ನಾಟಕದಾದ್ಯಂತ ತಮ್ಮ ಪ್ರಯಾಣವನ್ನು ಮುಗಿಸಿದ್ದು, ನಮ್ಮ ರಾಜ್ಯದ ಬಗ್ಗೆ ಒಂದು ವಿಡಿಯೋ ಹಾಕಿದ್ದಾರೆ.
ಆ ವೀಡಿಯೊ ವೈರಲ್ ಆಗಿದ್ದು, 53 ಮಿಲಿಯನ್ಗೂ ಹೆಚ್ಚು ವ್ಯೂವ್ಸ್ ಪಡೆದಿದೆ.

ವಿಡಿಯೋ ಕೆಳಗೆ ‘ಕರ್ನಾಟಕದಲ್ಲಿ, ಕ್ಯಾರವಾನ್ ಟ್ರಿಪ್’ ಎಂಬ ಸಿಂಪಲ್ ಟ್ಯಾಗ್ ಲೈನ್ ನೀಡಲಾಗಿದ್ದು, ಜನರು ಆ ವಿಡಿಯೋವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅನೇಕರು ಕಾಮೆಂಟ್‌ ಬಾಕ್ಸ್ನಲ್ಲಿ ಶುಭಾಷಯ ಕೋರಿದ್ದರೆ, ಇನ್ನೂ ಕೆಲವರು ಹೃದಯದ ಎಮೋಜಿಗಳನ್ನು ಹಾಕಿದ್ದಾರೆ.

ಹೇಗಿದೆ ಈ ಕ್ಯಾರವಾನ್..?: ಕೇರಳದ ಈ ಮಹಿಳೆ ಕ್ಯಾರವಾನ್ ಬಗ್ಗೆಯೇ ಒಂದು ವಿಡಿಯೋ ಮಾಡಿದ್ದಾರೆ. ಕ್ಯಾರವಾನ್‌ನ ಒಳ ಭಾಗದಲ್ಲಿ ಆರಾಮದಾಯಕ ನಿದ್ರೆಗೆ ಬೇಕಾದ ಬಂಕ್ ಹಾಸಿಗೆಗಳು, ಚೆಂದದ ಅಡುಗೆಮನೆ, ಬಟ್ಟೆಗಳನ್ನು ಇಡಲು ಕಪಾಟುಗಳು, ಕಾಂಪ್ಯಾಕ್ಟ್ ಫ್ರಿಡ್ಜ್‌ ಇದೆ. ಕೆಲ ವೀಕ್ಷಕರು ಕ್ಯಾರವಾನ್‌ನ ಬೆಲೆ ಎಷ್ಟು ಎಂದು ಕೇಳಿದ್ದಾರೆ. ಇನ್‌ಸ್ಟಾಗ್ರಾಮ್ನಲ್ಲಿ 650,000ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಪುಥೆಟ್ಟು ಟ್ರಾವೆಲ್ ಚಾನೆಲ್ನಲ್ಲಿ, ಕ್ಯಾರವಾನ್ ಚಾಲನೆ, ಪ್ರಯಾಣದ ಅನುಭವದ ಕುರಿತಾದ ಹಲವಾರು ವೀಡಿಯೊಗಳನ್ನು ಹಾಕಲಾಗಿದೆ.

ಕೇರಳದಿಂದ ಲಡಾಖ್‌ಗೆ 3,000 ಕಿಲೋಮೀಟರ್‌ಗಳಿಗೂ ಹೆಚ್ಚು ದೂರವಿದೆ. ಪ್ರಯಾಣದುದ್ದಕ್ಕೂ ಹಲವಾರು ವೀಡಿಯೊಗಳನ್ನು ಮಾಡಿದ್ದಾರೆ. 3 ವರ್ಷದ ಮಗು ಸೇರಿದಂತೆ ಏಳು ಜನರ ಕುಟುಂಬವಾಗಿ ಪ್ರಯಾಣಿಸುತ್ತಿರುವ ಅವರು, ತಮ್ಮ ಕ್ಯಾರವಾನ್‌ನಲ್ಲಿ ಭಾರತದಾದ್ಯಂತ 18 ರಾಜ್ಯಗಳನ್ನು ದಾಟಿ ಲಡಾಕ್ ತಲುಪುವ ಇರಾದೆ ಹೊಂದಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *