14 ವರ್ಷ ಬ್ಯಾಂಕಿಂಗ್ ಅನುಭವವಿದ್ದ ವ್ಯಕ್ತಿ ಫುಟ್‌ಪಾತ್‌ನಲ್ಲಿ ನಿರಾಶ್ರಯ

ಬೆಂಗಳೂರು: ಅದೃಷ್ಟ ಹೇಗೂ ಬದಲಾಗುತ್ತದೆ. ಏನು ಇಲ್ಲದವರೂ ರಾತ್ರಿ ಬೆಳಗಾಗುವಷ್ಟರಲ್ಲಿ ಶ್ರೀಮಂತರಾಗಬಹುದು. ಎಲ್ಲಾ ಇದ್ದವರು ಬೀದಿಗೆ ಬೀಳಲು ಬಹುದು. ಈ ವ್ಯಕ್ತಿಯನ್ನು ನೋಡಿದ ಮೇಲೆ ಈ ಮಾತು ಅಕ್ಷರಶಃ ಸತ್ಯವೆನಿಸುತ್ತದೆ. ಸರಿಸುಮಾರು ಹದಿನಾಲ್ಕು ವರ್ಷಗಳ ಕಾಲ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಬೆಂಗಳೂರಿನ ವ್ಯಕ್ತಿಯಿವರು. ಆದರೆ ಇಂದು ಉದ್ಯೋಗವಿಲ್ಲದ, ಇರಲು ಸೂರು ಇಲ್ಲದೇ ಫುಟ್‌ಪಾಟ್‌ನಲ್ಲಿ ಜೀವನ ನಡೆಸುತ್ತಿದ್ದಾರೆ. ತನಗೆ ಕೆಲಸವಿಲ್ಲ, ಇರಲು ಮನೆಯೂ ಇಲ್ಲ ಎಂದು ಬರೆದಿರುವ ಚೀಟಿ ಹಿಡಿದುಕೊಂಡು ಈ ವ್ಯಕ್ತಿಯೂ ಸಹಾಯಕ್ಕಾಗಿ ಬೇಡುತ್ತಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬದುಕು ಹೇಗೆ ಹೊಡೆತ ಕೊಡುತ್ತದೆ ಎನ್ನುವುದಕ್ಕೆ ಇದುವೇ ಸಾಕ್ಷಿ ಎಂದಿದ್ದಾರೆ.

Being-Brilliant ಎಂದು ರೆಡ್ಡಿಟ್ ಬಳಕೆದಾರರು ಈ ಪೋಸ್ಟ್ ಹಂಚಿಕೊಂಡಿದ್ದು, “ಬೆಂಗಳೂರಿನ ಪ್ರಮುಖ ಸಿಗ್ನಲ್‌ನಲ್ಲಿ ಈ ವ್ಯಕ್ತಿಯನ್ನು ಭೇಟಿಯಾದೆ. ಅವನನ್ನು ನೋಡುವುದು ಎಷ್ಟೇ ಹೃದಯವಿದ್ರಾವಕವಾಗಿದ್ದರೂ, ಇದು ಸಮಾಜದ ವೈಫಲ್ಯದ ಪರಿಣಾಮವೇ ಅಥವಾ ವೈಯಕ್ತಿಕ ಆಯ್ಕೆಗಳ ಪರಿಣಾಮವೇ ಎಂದು ನನಗೆ ಆಶ್ಚರ್ಯವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ವ್ಯಕ್ತಿಯೊಬ್ಬನು ಫುಟ್‌ಪಾತ್‌ನಲ್ಲಿ ಕುಳಿತಿರುವುದನ್ನು ಕಾಣಬಹುದು. ಆದರೆ ಈ ವ್ಯಕ್ತಿಯೂ ಕೈಯಲ್ಲಿ ಹಿಡಿದು ಕೊಂಡಿದ್ದ ಕಾಗದ ಮೇಲೆ ಕೆಲವು ಸಾಲುಗಳನ್ನು ಬರೆಯಲಾಗಿದೆ. ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಬರೆಯಲಾಗಿದ್ದು, “ನನಗೆ ಕೆಲಸವಿಲ್ಲ, ಮನೆ ಇಲ್ಲ, ದಯವಿಟ್ಟು ನನಗೆ ಸಹಾಯ ಮಾಡಿ. ನನಗೆ ಬ್ಯಾಂಕಿಂಗ್‌ನಲ್ಲಿ 14 ವರ್ಷಗಳ ಕೆಲಸದ ಅನುಭವವಿದೆ.ನಾನು ಪದವೀಧರ ಎಂದಿರುವ ಸಾಲುಗಳನ್ನು ನೀವಿಲ್ಲಿ ನೋಡಬಹದು. ಇನ್ನು ಡಿಜಿಟಲ್ ಪಾವತಿಗಾಗಿ ಕ್ಯೂ ಆರ್ ಕೋಡ್ ಹೊಂದಿರುವ ಸಣ್ಣ ಹಾಳೆಯನ್ನು ಕೈಯಲ್ಲಿ ಹಿಡಿದುಕೊಂಡಿರುವುದನ್ನು ಕಾಣಬಹುದು.