ಕಣ್ಣೂರು: ಮನೆಗೆ ನುಗ್ಗಿ ಮಹಿಳೆಗೆ ಬೆಂಕಿ ಹಚ್ಚಿ ಕೊಂದ ದುಷ್ಕರ್ಮಿ

ಕಣ್ಣೂರು-ದುಷ್ಕರ್ಮಿಯೊಬ್ಬ ಮನೆಗೆ ನುಗ್ಗಿ ಮಹಿಳೆಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ಕೇರಳದ ಕಣ್ಣೂರು ಜೆಲ್ಲೆ ಕುಟ್ಟಿಯತ್ತೂರ್‌ಬಳಿಯ ಉರುವಾಂಚಲ್‌ನಲ್ಲಿ ನಡೆದಿದೆ.

ಪ್ರವೀಣಾ(39) ಕೊಲೆಯಾದ ಮಹಿಳೆ ದುಷ್ಕರ್ಮಿ ನೀರು ಕೇಳುವ ನೆಪದಲ್ಲಿನ ಮನೆಗೆ ನುಗ್ಗಿ ಆಕೆಯನ್ನು ಸುಟ್ಟು ಹಾಕಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ನಡೆದ ಸಮಯದಲ್ಲಿ ಪ್ರವೀಣಾ ಅವರ ಮಾವ,ಅತ್ತೆ ಹಾಗೂ ಅವರ ಅತ್ತಿಗೆಯ ಮಕ್ಕಳು ಮನೆಯಲ್ಲಿದ್ದರು ಎಂದು ನೆರೆಹೊರೆಯವರು ತಿಳಿಸಿದ್ದಾರೆ.ಪ್ರವೀಣಾ ಅವರ ಪತಿ ಅಜೀಜ್ ವಿದೇಶದಲ್ಲಿದ್ದಾರೆ.ಜಿಜೇಶ್ ಎಂಬಾತ ಅತಿಕ್ರಮಣ ಮಾಡಿ ಪ್ರವೀಣಾ ಅವರಿಗೆ ಬೆಂಕಿ ಹಚ್ಚಿದ್ದಾನೆ ಎಂದು ಹೇಳಲಾಗುತ್ತಿದ್ದು ಆತನಿಗೂ ಸುಟ್ಟ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ಜಿಜೇಶ್ ಮೊದಲು ಮನೆ ಬಾಗಿಲಿಗೆ ಬಂದು ನೀರು ಕೇಳಿದ್ದಾನೆ ನಂತರ, ಮನೆಗೆ ಪ್ರವೇಶಿಸಿ ಅಡುಗೆ ಮನೆಗೆ ಪ್ರವೀಣಾ ನಡೆದುಕೊಂಡು ಹೋಗುತ್ತಿದ್ದಾಗ ತಂದಿದ್ದ ಪೆಟ್ರೋಲ್ ಬಾಟಲಿಯನ್ನು ಆಕೆಯ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ.
ಪ್ರವೀಣಾ ಕಿರುಚಾಟ ಕೇಳಿ, ನೆರೆಹೊರೆಯವರು ಬಂದು ಬೆಂಕಿಯನ್ನು ನಂದಿಸಿದರು, ನಂತರ ಶೇ. 70 ಕ್ಕೂ ಹೆಚ್ಚು ಸುಟ್ಟಗಾಯಗಳಿಂದ ಬಳಲುತ್ತಿದ್ದ ಮಹಿಳೆಯನ್ನು ಪರಿಯಾರಂನಲ್ಲಿರುವ ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.ಮಯ್ಯಿಲ್ ಪೊಲೀಸರು ಜಿಜೇಶ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 332(ಎ) (ಮನೆಗೆ ನುಗ್ಗಿ ಅಪರಾಧ ಎಸಗುವುದು) ಮತ್ತು 109(1) (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಆರೋಪಿ ಜಿಜೇಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.ಪ್ರಾಥಮಿಕ ತನಿಖೆಯಲ್ಲಿ ಪ್ರವೀಣಾ ಮತ್ತು ಜಿಜೇಶ್ ಪರಸ್ಪರ ಪರಿಚಿತರು ಎಂದು ತಿಳಿದುಬಂದಿದೆ. ಆದಾಗ್ಯೂ, ಈ ಕೃತ್ಯಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
