ಗಾಝಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ: ಹಮಾಸ್ ಪೊಲೀಸ್ ಪಡೆಯ ಇಬ್ಬರು ಅಧಿಕಾರಿಗಳು ಸೇರಿ ಮೂವರು ಬಲಿ

ಗಾಝಾ: ಗಾಝಾದಲ್ಲಿ ರವಿವಾರ ಇಸ್ರೇಲ್‌ನ ವೈಮಾನಿಕ ದಾಳಿಯಲ್ಲಿ ಹಮಾಸ್ ನೇತೃತ್ವದ ಪೊಲೀಸ್ ಪಡೆಯ ಇಬ್ಬರು ಸದಸ್ಯರ ಸಹಿತ ಕನಿಷ್ಠ ಮೂವರು ಮೃತಪಟ್ಟಿರುವುದಾಗಿ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಗಾಝಾ ಪಟ್ಟಿಯ ಮಘಾಜಿ ನಿರಾಶ್ರಿತರ ಶಿಬಿರದ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಒಬ್ಬ ಮೃತಪಟ್ಟಿದ್ದಾನೆ. ಖಾನ್ ಯೂನಿಸ್‌ನಲ್ಲಿ ಪೊಲೀಸ್ ಕ್ರಿಮಿನಲ್ ಪಡೆಯ ಮುಖ್ಯಸ್ಥ ಅಬೈಲ್- ಹಾದಿ ಹಾಗೂ ಆತನ ಸಹಾಯಕ ಮೃತಪಟ್ಟಿರುವುದಾಗಿ ಹಮಾಸ್ ನೇತೃತ್ವದ ಆಂತರಿಕ ಸಚಿವಾಲಯ ಹೇಳಿದೆ. ಗಾಝಾದಲ್ಲಿ ತನ್ನ ಹಿಡಿತ ಬಿಗಿಗೊಳಿಸಲು ಪ್ರಯತ್ನಿಸುತ್ತಿರುವ ಹಮಾಸ್ ನಿಯಂತ್ರಿತ ಪೊಲೀಸ್ ಪಡೆಯನ್ನು ಗುರಿಯಾಗಿಸಿ ತೀವ್ರ ದಾಳಿ ನಡೆಸುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ.
