Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಿದ್ಯುತ್ ಸ್ಥಾವರಗಳ ಸುತ್ತ ಮಾನವ ಸರಪಳಿ ರಚಿಸುವಂತೆ ನಾಗರಿಕರಿಗೆ ಇರಾನ್ ಸರ್ಕಾರ ಕರೆ

Spread the love

ಟೆಹ್ರಾನ್: ಅಮೆರಿಕದ ಸಂಭವನೀಯ ದಾಳಿಯ ಎಚ್ಚರಿಕೆ ನಡುವೆಯೇ, ದೇಶದ ಮೂಲಸೌಕರ್ಯಗಳನ್ನು ರಕ್ಷಿಸಲು ಇರಾನ್ ಆಡಳಿತವು ದೇಶಾದ್ಯಂತ ಮಹತ್ವದ ಉಪಕ್ರಮಕ್ಕೆ ಚಾಲನೆ ನೀಡಿದೆ. ವಿದ್ಯುತ್ ಸ್ಥಾವರಗಳ ಸುತ್ತ ಮಾನವ ಸರಪಳಿಗಳನ್ನು ರಚಿಸುವಂತೆ ಯುವಕರು, ಕಲಾವಿದರು ಹಾಗೂ ಕ್ರೀಡಾಪಟುಗಳನ್ನು ಒಳಗೊಂಡು ನಾಗರಿಕರಿಗೆ ಕರೆ ನೀಡಲಾಗಿದೆ.

ಹಾರ್ಮುಝ್ ಜಲಸಂಧಿ ಕುರಿತ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ನಿಗದಿತ ಗಡುವಿನೊಳಗೆ ಜಲಸಂಧಿ ಸಂಪೂರ್ಣ ಕಾರ್ಯಾರಂಭವಾಗದಿದ್ದರೆ ವಿದ್ಯುತ್ ಸ್ಥಾವರಗಳು ಹಾಗೂ ಸೇತುವೆಗಳ ಮೇಲೆ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದರಿಂದ ಈ ಬೆಳವಣಿಗೆ ನಡೆದಿದೆ.ಈ ಉಪಕ್ರಮವನ್ನು ಘೋಷಿಸಿದ ಇರಾನ್ ಯುವ ಮತ್ತು ಕ್ರೀಡಾ ಉಪ ಸಚಿವ ಅಲಿರೆಜಾ ರಹೀಮಿ, “ಸಾರ್ವಜನಿಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದು ಯುದ್ಧ ಅಪರಾಧ ಎಂಬ ಸಂದೇಶವನ್ನು ಜಗತ್ತಿಗೆ ತಲುಪಿಸಲು ನಾವು ಕೈಜೋಡಿಸುತ್ತಿದ್ದೇವೆ” ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ.

“ಉಜ್ವಲ ಭವಿಷ್ಯಕ್ಕಾಗಿ ಇರಾನ್ ಯುವ ಮಾನವ ಸರಪಳಿ” ಎಂಬ ಹೆಸರಿನ ಈ ಅಭಿಯಾನವು, ‘ಆಕ್ರಮಣಕಾರರ’ ವಿರುದ್ಧ ಸಶಸ್ತ್ರ ಪಡೆಗಳಿಗೆ ಒಗ್ಗಟ್ಟು ಮತ್ತು ಬೆಂಬಲ ವ್ಯಕ್ತಪಡಿಸುವ ಉದ್ದೇಶ ಹೊಂದಿದೆ ಎಂದು ಇರಾನ್ ಇಂಟರ್‌ನ್ಯಾಷನಲ್ ವರದಿ ತಿಳಿಸಿದೆ.ಎಪ್ರಿಲ್ 6ರಂದು ಟ್ರಂಪ್ ನೀಡಿದ ಹೇಳಿಕೆಗಳು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿವೆ. ಟೆಹ್ರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಪ್ರಮುಖ ಸೇತುವೆಗಳ ಮೇಲೆ ಸಂಘಟಿತ ದಾಳಿಗಳ ಸಾಧ್ಯತೆಯನ್ನು ಅವರು ಬಹಿರಂಗವಾಗಿ ಉಲ್ಲೇಖಿಸಿ, ಹಾರ್ಮುಝ್ ಜಲಸಂಧಿಯನ್ನು ತಕ್ಷಣ ತೆರೆಯುವಂತೆ ಒತ್ತಾಯಿಸಿದ್ದಾರೆ.
ಟ್ರುತ್‌ ಸೋಶಿಯಲ್‌ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ ಟ್ರಂಪ್ ಕಠಿಣ ಪದಗಳನ್ನು ಬಳಸಿದ್ದು “ಜಲಸಂಧಿಯನ್ನು ತೆರೆಯಿರಿ, ಇಲ್ಲದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದ್ದರು.

ಇದರ ಮಧ್ಯೆ ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವೆ ಸಂಭವನೀಯ ಒಪ್ಪಂದದ ಲಕ್ಷಣಗಳು ಗೋಚರಿಸುತ್ತಿರುವ ಹಿನ್ನೆಲೆಯಲ್ಲಿ ಇರಾನ್ ನ ಸಾರ್ವಜನಿಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವ ಯೋಜನೆಯನ್ನು ಟ್ರಂಪ್ ಮುಂದೂಡುವ ಸಾಧ್ಯತೆ ಇದೆ ಎಂದು ಆಕ್ಸಿಯೋಸ್ ವರದಿ ತಿಳಿಸಿದೆ. ಅಮೆರಿಕದ ಹಿರಿಯ ಅಧಿಕಾರಿಯನ್ನು ಉಲ್ಲೇಖಿಸಿದ ವರದಿ, ಇರಾನ್ ಮೇಲೆ ದಾಳಿ ಮಾಡಲು ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಟ್ರಂಪ್ ಅವರಿಗೆ ಸೇರಿದ್ದು, ಪ್ರಸ್ತುತ ಪರಿಸ್ಥಿತಿಯನ್ನು ಅವಲಂಬಿಸಿ ಅವರು ಆ ಕ್ರಮ ಕೈಗೊಳ್ಳಬಹುದು ಅಥವಾ ಕೈಬಿಡಬಹುದು ಎಂದು ತಿಳಿಸಿದೆ.


Spread the love
Share:

administrator

Leave a Reply

Your email address will not be published. Required fields are marked *