ಹೈದರಾಬಾದ್ ಹೊಟೆಲ್ನಲ್ಲಿ ಬಾಲಿವುಡ್ ನಟಿ ಮೇಲೆ ಭೀಕರ ದಾಳಿ – ಹಣ, ಆಭರಣ ದೋಚಿ ದಾಳಿಕಾರರು ಪರಾರಿ

ಹೈದರಾಬಾದ್ ಹೊಟೆಲ್ನಲ್ಲಿ ಅಘಾತಕಾರಿ ಘಟನೆ ನಡೆದಿದೆ. ಬಾಲಿವುಡ್ ನಟಿ ಮೇಲೆ ದಾಳಿ ನಡೆದಿದೆ. ನಟಿ ಮಲಗಿದ್ದ ವೇಳೆ ದಾಳಿ ನಡೆದಿದ್ದು, ನಟಿಯ ಕೈ ಕಾಲು ಕಟ್ಟಿ ಹಲ್ಲೆ ನಡೆಸಿದ್ದಾರೆ. ಬಳಿಕ ಹಣ ಒಡೆವೆ ಸೇರಿದಂತೆ ಹಲವು ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಹೈದರಾಬಾದ್(ಮಾ.25) ಖ್ಯಾತ ಬಾಲಿವುಡ್ ನಟಿ ಮೇಲೆ ಭೀಕರ ದಾಳಿ ನಡೆದಿದೆ. ಹೈದರಾಬಾದ್ ಹೊಟೆಲ್ ರೂಂನಲ್ಲಿ ನಟಿ ಮಲಗಿದ್ದ ವೇಳೆ ಏಕಾಏಕಿ ಈ ದಾಳಿ ನಡೆದಿದೆ. ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಮಹಿಳೆ ಹೊಟೆಲ್ ರೂಂಗೆ ನುಗ್ಗಿದ್ದಾರೆ. ಬಳಿಕ ನಟಿ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ನಟಿ ಕೈ ಕಾಲು ಕಟ್ಟಿ ಅಮಾನುಷ ಕೃತ್ಯಕ್ಕೆ ಮುಂದಾಗಿದ್ದಾರೆ. ನಟಿ ಕಿರುಚಾಡುತ್ತಿದ್ದಂತೆ ದಾಳಿಕೋರರು ನಟಿಯ ನಗದು, ಟ್ರೋಲಿ ಬ್ಯಾಗ್, ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಡೆದಿದೆ.
