ಇಸ್ರೇಲ್‌ನ ನಾಲ್ವರು ಐಡಿಎಫ್ ಸೈನಿಕರ ಸಾವು; ‘ಆಪರೇಷನ್ ರೋರಿಂಗ್ ಲಯನ್’ ವೇಳೆ ಭಾರಿ ಹಿನ್ನಡೆ

ಟೆಲ್ ಅವಿವ್: ದಕ್ಷಿಣ ಲೆಬನಾನ್‌ನಲ್ಲಿ ನಾಲ್ವರು ಐಡಿಎಫ್ ಸೈನಿಕರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ ಮಂಗಳವಾರ ದೃಢಪಡಿಸಿದೆ ಎಂದು Jerusalem Post ವರದಿ ಮಾಡಿದೆ.
ಇಸ್ರೇಲ್ ಸೈನಿಕರಾದ ಕ್ಯಾಪ್ಟನ್ ನೋಮ್ ಮಡೋನಿ, ಸ್ವಾಫ್ ಸಾರ್ಜೆಂಟ್ ಬೆನ್ ಕೊಹೆನ್ ಮತ್ತು ಸ್ವಾಫ್ ಸಾರ್ಜೆಂಟ್ ಮ್ಯಾಕ್ಸಿಮ್ ಎಂಟಿಸ್ ಹೋರಾಡುತ್ತಾ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ.
ಇಬ್ಬರು ಸೈನಿಕರು ಗಾಯಗೊಂಡಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯು ಉಲ್ಲೇಖಿಸಿದೆ.
ಫೆಬ್ರವರಿ 28 ರಂದು ಆಪರೇಷನ್ ರೋರಿಂಗ್ ಲಯನ್ ಪ್ರಾರಂಭವಾದಾಗಿನಿಂದ 9 ಐಡಿಎಫ್ ಸೈನಿಕರು ಲೆಬನಾನ್‌ನಲ್ಲಿ ಮೃತಪಟ್ಟಿದ್ದಾರೆ ಎಂದು ಜೆರುಸಲೇಂ ಪೋಸ್ಟ್ ವರದಿ ಮಾಡಿದೆ.
