Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೆಂಪು ಸಮುದ್ರದಲ್ಲಿ ಭಾರತೀಯ ಹಡಗಿನ ಮೇಲೆ ಮೊದಲ ಬಾರಿ ದಾಳಿ: 13 ಭಾರತೀಯರು ಸೇರಿ ಸಿಬ್ಬಂದಿ ರಕ್ಷಣೆ!

Spread the love

ಯೆಮನ್‌: ಯೆಮನ್‌ನ ಪಶ್ಚಿಮ ಕರಾವಳಿ ಸಮೀಪದ ಕೆಂಪು ಸಮುದ್ರದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಹಡಗಿನ ಮೇಲೆ ದಾಳಿಯಾಗಿದೆ. ಸ್ಫೋಟಕಗಳಿಂದ ತುಂಬಿದ ದೋಣಿಯೊಂದು ಭಾರತೀಯ ಹಡಗಿಗೆ ಡಿಕ್ಕಿ ಹೊಡೆದ ಪರಿಣಾಮ ಹಡಗು ಮುಳುಗಿರುವ ಘಟನೆ ನಡೆದಿದೆ.

ಈ ದಾಳಿಯಲ್ಲಿ ಹಡಗಿನಲ್ಲಿದ್ದ 13 ಭಾರತೀಯರು ಸೇರಿದಂತೆ ಒಟ್ಟು 14 ಸಿಬ್ಬಂದಿಯನ್ನ ಯೆಮನ್ ನೌಕಾಪಡೆ ಹಾಗೂ ಕರಾವಳಿ ರಕ್ಷಣಾ ಪಡೆ ಜಂಟಿ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಿದೆ. ಈ ದಾಳಿಯ ಹೊಣೆಯನ್ನ ಇದುವರೆಗೆ ಯಾವುದೇ ಸಂಘಟನೆ ಹೊತ್ತಿಲ್ಲ. ಕೆಂಪು ಸಮುದ್ರದಲ್ಲಿ ಭಾರತೀಯ ಹಡಗಿನ ಮೇಲೆ ನಡೆದ ಮೊದಲ ದಾಳಿ ಇದಾಗಿದೆ ಎಂದು ವರದಿಯಾಗಿದೆ.ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್ ಈ ಬಗ್ಗೆ ಪ್ರತಿಕ್ರಿಯಿಸಿ, ಭಾರತೀಯ ಹಡಗಿನ ಮೇಲಿನ ದಾಳಿಯನ್ನ ಅಪ್ರಚೋದಿತ ಮತ್ತು ಅಮಾನವೀಯ ದಾಳಿ ಎಂದು ಕರೆದಿದ್ದರೆ.ಭಾರತೀಯ ಮೆಕನೈಸ್ಡ್ ಸೇಲಿಂಗ್ ವೆಸೆಲ್ (MSV) ‘ಫೈಜ್ ನೂರ್ ಓಲಿಯಾ’ ಯೆಮನ್ ಸಮುದ್ರ ಪ್ರದೇಶದ ಬಳಿ ಪ್ರಕ್ಷೇಪಕದ ದಾಳಿಗೆ ಒಳಗಾಗಿ, ಹಡಗು ಮಗುಚಿ ಮುಳುಗಿದೆ. ಶಸ್ತ್ರಾಸ್ತ್ರವಿಲ್ಲದ ಈ ಹಡಗಿನ ಮೇಲಿನ ದಾಳಿಯನ್ನ ಭಾರತ ತೀವ್ರವಾಗಿ ಖಂಡಿಸುತ್ತದೆ ಎಂದು ಎಕ್ಸ್‌ ಪೋಸ್ಟ್‌ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 


Spread the love
Share:

administrator

Leave a Reply

Your email address will not be published. Required fields are marked *