ನಕಲಿ ಚಿನ್ನ ಮಾರಾಟ: ₹65 ಲಕ್ಷ ವಂಚಿಸಿದ ಕೋಲಾರ ಗ್ಯಾಂಗ್ ಬಂಧನ

ಬೆಂ.ಗ್ರಾಮಾತರ : ನಕಲಿ ಚಿನ್ನವನ್ನು ಅಸಲಿ ಚಿನ್ನವೆಂದು ತೋರಿಸಿ ಮಾರಾಟ ಮಾಡುತ್ತಿದ್ದ ಗ್ಯಾಂಗ್ ನ್ನು ಸೆರೆ ಹಿಡಿಯುವಲ್ಲಿ ಹೊಸಕೋಟೆ (Hosakote) ಪೊಲೀಸರು ಯಶಸ್ವಿಯಾಗಿದ್ದಾರೆ. ಹೊಸಕೋಟೆ ಪೊಲೀಸರ ಬಲೆಗೆ ಬಿದ್ದ ಕೋಲಾರದ ಖತರ್ನಾಕ್ ಗ್ಯಾಂಗ್ ಈ ಹಿಂದೆ ಹೊಸಕೋಟೆ, ನಂದಗುಡಿ, ಶಿಡ್ಲಘಟ್ಟದಲ್ಲಿ ಎಂಟು ಮಂದಿಗೆ 65 ಲಕ್ಷ ವಂಚನೆ ಮಾಡಿತ್ತು ಎಂದು ವಿಚಾರಣೆಯ ವೇಳೆ ಬಯಲಾಗಿದೆ.

ರಾಜೇಶ್ ಹಾಗೂ ಆತನ ಇಬ್ಬರು ಸಂಗಡಿಗರು ಬಂಧಿತ ಆರೋಪಿಗಳಾಗಿದ್ದಾರೆ.
ಬೆಂಗಳೂರು ಹೊರಹೊಲಯವೇ ಇವರ ಟಾರ್ಗೆಟ್ ಏರಿಯಾಗಳಾಗಿದ್ದ, ತಾಲೂಕು ಕಚೇರಿ, ಹೋಟೆಲ್ ಗಳ ಬಳಿ ತೆಲುಗು ಭಾಷೆ ಮಾತನಾಡುವವರನ್ನೇ ಇವರು ಗುರಿಯಾಗಿರಿಸಿಕೊಳ್ಳುತ್ತಿದ್ದರೆಂದು ತಿಳಿದುಬಂದಿದೆ. ಆತ್ಮೀಯ ಪರಿಚಿತರಂತೆ ಬಿಲ್ಡಪ್ ಕೊಟ್ಟು ಬ್ರೈನ್ ವಾಶ್ ಮಾಡುತ್ತಿದ್ದ ಈ ಗ್ಯಾಂಗ್, ಕೇರಳದ ಒಂದು ಜಾಗದಲ್ಲಿ ಭೂಮಿ ಕೆಲಸ ಮಾಡುವಾಗ ಚಿನ್ನದ ಹಾರ ಸಿಕ್ಕಿದೆ. ಅದು ರಾಜಮಹಾರಾಜರ ಕಾಲದ ಚಿನ್ನದ ಹಾರ, ಈಗಿನ ಚಿನ್ನದ ರೇಟಿಗಿಂತ ಹೆಚ್ಚು ಎಂದು ಬೂಸಿ ಬಿಡುತ್ತಿದ್ದರು.
ಹೀಗೆ ವ್ಯಕ್ತಿಗಳನ್ನ ಬ್ರೈನ್ ವಾಶ್ ಮಾಡಿ ಮೊಬೈಲ್ ನಲ್ಲಿ ನಕಲಿ ಚಿನ್ನದ ಹಾರವನ್ನು ತೋರಿಸುತ್ತಿದ್ದರು. ನಂಬಿಕೆ ಬರಲಿ ಅಂತ ಎರಡು ಚಿನ್ನದ ಅಸಲಿ ಗುಂಡುಗಳನ್ನ ತೋರಿಸಿ ಇದು ಸರದ ತುದಿಯ ಗುಂಡುಗಳು ಎಂದು ನಂಬಿಕೆ ಹುಟ್ಟಿಸುತ್ತಿದ್ದರು. ಎಂಟು ಕೆಜಿ ಚಿನ್ನದ ಹಾರವನ್ನು ಕಡಿಮೆ ಬೆಲೆಗೆ ಕೊಡ್ತೇವೆಂದು ಯಾಮಾರಿಸಿ ಹಣ ಪಡೆದು ವಂಚಿಸಿ ಪರಾರಿಯಾಗುತ್ತಿದ್ದರು. ಎಲ್ಲಾ ಮೊಬೈಲ್ ನಲ್ಲೇ ತೋರಿಸಿ ವಿಡಿಯೋ ಕಾಲ್ ಮೂಲಕ ಜಾಗ ಫಿಕ್ಸ್ ಮಾಡುತ್ತಿದ್ದ ಈ ಗ್ಯಾಂಗ್ ನಕಲಿ ಚಿನ್ನದ ಸರವನ್ನು ಅಸಲಿ ಚಿನ್ನದ ಸರ ಅಂತ ಕೊಟ್ಟು ಎಸ್ಕೇಪ್ ಆಗುತ್ತಿದ್ದರೆಂದು ತಿಳಿದುಬಂದಿದೆ.
ಮನೆಗೆ ಹೋಗಿ ಚಿನ್ನವನ್ನು ಪರಿಶೀಲಿಸಿದ್ದ ವ್ಯಕ್ತಿಗಳಿಗೆ ತಾವು ಬೇಸ್ತುಬಿದ್ದಿರುವುದು ಗೊತ್ತಾಗುತ್ತಿತ್ತು. ಮೋಸ ಹೋದ ವಿಷಯ ಗೊತ್ತಾಗಿ ಹೊಸಕೋಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ವಿದ್ಯುತ್ ತಂತಿಗೆ ಸಿಕ್ಕ ಗಾಳಿಪಟ ತೆಗೆಯಲು ಹೋಗಿ ವಿದ್ಯುತ್ ಶಾಕ್- ಇಬ್ಬರು ಬಾಲಕರು ಗಂಭೀರ!
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ವಿದ್ಯುತ್ ಶಾಕ್ ದುರಂತ ಘಟನೆ ಸಂಭವಿಸಿದೆ. ಹೈಟೆನ್ಷನ್ ತಂತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಗಾಳಿಪಟವನ್ನು ತೆಗೆಯಲು ಹೋಗಿ ಇಬ್ಬರು ಬಾಲಕರಿಗೆ ಶಾಕ್ ತಗುಲಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕರನ್ನು ವಿನಾಯಕ ನಗರ ನಿವಾಸಿಗಳಾದ ಸೈಯದ್ ಮೊಹಿದ್ದೀನ್ (10), ಮೊಹಮ್ಮದ್ ತೌಸಿಫ್ (9) ಎಂದು ಗುರುತಿಸಲಾಗಿದೆ. ಬಾಲಕರು ವಿಕ್ಟೋರಿಯಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಸೈಯದ್ ಮೊಹಿದ್ದೀನ್ ಖಾಸಗಿ ಶಾಲೆಯಲ್ಲಿ ಐದನೇ ತರಗತಿ ಓದುತ್ತಿದ್ದರೆ ತೌಸಿಫ್ 4ನೇ ತರಗತಿ ಓದುತ್ತಿದ್ದ. ದಸರಾ ರಜೆ ಹಿನ್ನೆಲೆಯಲ್ಲಿ ಬಾಲಕರು ಮನೆಯ ಬಳಿ ಗೆಳೆಯರೊಂದಿಗೆ ಗಾಳಿಪಟ ಹಾರಿಸುತ್ತಿದ್ದರು.
ವರದಿಗಳ ಪ್ರಕಾರ ಬಾಲಕರು ಸಾರಾಯಿ ಪಾಳ್ಯದಲ್ಲಿ ಗಾಳಿಪಟ ಹಾರಿಸುತ್ತಿದ್ದಾಗ ಅವಘಡ ಸಂಭವಿಸಿದೆ. ಗಾಳಿಪಟ ಹೈಟೆನ್ಷನ್ ತಂತಿಗೆ ಸಿಲುಕಿಹಾಕಿಕೊಂಡಿದೆ. ಅದನ್ನು ತೆಗೆಯಲು ಬಾಲಕರು ಮನೆಗೆ ಹೋಗಿ ಪರದೆ ಹಾಕುವ ಕಬ್ಬಿಣದ ರೋಲ್ ತಂದಿದ್ದಾರೆ. ಮೂರು ಅಂತಸ್ತಿನ ಕಟ್ಟಡದ ಮಹಡಿಗೆ ಹೋಗಿ, ಅಲ್ಲಿಂದ ನಿಂತು ಗಾಳಿಪಟ ತೆಗೆಯಲು ಪ್ರಯತ್ನಿಸಿದ್ದಾರೆ.
ಆದರೆ ಕಬ್ಬಿಣದ ರೋಲ್ ತಾಗಿದ ಕೂಡಲೇ ಹೈಟೆನ್ಸನ್ ತಂತಿಯಿಂದ ವಿದ್ಯುತ್ ಪ್ರವಹಿಸಿದೆ. ಈ ವೇಳೆ ಮಕ್ಕಳ ಚೀರಾಟ ಕೇಳಿ ಸ್ಥಳೀಯರು ಅಲ್ಲಿಗೆ ಧಾವಿಸಿದ್ದಾರೆ. ಇಬ್ಬರನ್ನು ಹೇಗೋ ಅಲಲ್ಲಿಂದ ಬಿಡಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕರ ದೇಹ 30% ರಷ್ಟು ಸುಟ್ಟು ಹೋಗಿದೆ ಎನ್ನಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.