Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ಆರೋಪ: ಪಂಜಾಬ್ ಯೂಟ್ಯೂಬರ್ ಜಸ್ಬೀರ್ ಸಿಂಗ್ ಚಾರ್ಜ್‌ಶೀಟ್

Spread the love

ಅಮೃತಸರ್: ಬೇಹುಗಾರಿಕೆ ಆರೋಪದ ಮೇಲೆ ಪಂಜಾಬ್‌ನ ರೂಪನಗರ ಜಿಲ್ಲೆಯಿಂದ ಬಂಧಿಸಲ್ಪಟ್ಟ ಯೂಟ್ಯೂಬರ್ ಜಸ್ಬೀರ್ ಸಿಂಗ್ ವಿರುದ್ಧ ಪೊಲೀಸರು 1,700 ಪುಟಗಳ ಚಾರ್ಜ್‌ಶೀಟ್ ಅನ್ನು ನ್ಯಾಯಾಲಯದಲ್ಲಿ ಸಲ್ಲಿಸಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ಇರುವ ಮಾಹಿತಿಯ ಪ್ರಕಾರ, ಜಸ್ಬೀರ್ ಸಿಂಗ್ ಪಾಕಿಸ್ತಾನದೊಂದಿಗೆ ಗುಪ್ತಚರ ಮಾಹಿತಿಯನ್ನು ಹಂಚಿಕೊಂಡ ಆರೋಪ ಹೊತ್ತಿದ್ದಾರೆ. ಬಹಳ ಸೂಕ್ಷ್ಮ ಸ್ಥಳಗಳಾದ ಭಾಕ್ರಾ ನಂಗಲ್ ಅಣೆಕಟ್ಟು, ವಿವಿಧ ಮಿಲಿಟರಿ ನೆಲೆಗಳ ಚಿತ್ರ ಮತ್ತಿತರ ಸೂಕ್ಷ್ಮ ಮಾಹಿತಿಯನ್ನು ಅವರು ಪಾಕಿಸ್ತಾನಕ್ಕೆ ರಹಸ್ಯವಾಗಿ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡ ಕೆಲ ಸಂಗತಿಗಳು ಭದ್ರತಾ ಸಂಸ್ಥೆಗಳನ್ನು ಅಲರ್ಟ್ ಮಾಡಿವೆ.

ಜಸ್ಬೀರ್ ಸಿಂಗ್ ಪಾಕಿಸ್ತಾನದಲ್ಲಿ ಸುಮಾರು 120 ಜನರೊಂದಿಗೆ ಸಂಪರ್ಕ ಹೊಂದಿರುತ್ತಾನೆ. ಅದರಲ್ಲಿ ಹಲವಾರು ಐಎಸ್ಐ ಅಧಿಕಾರಿಗಳು ಸೇರಿದ್ದಾರೆ. ಪಾಕಿಸ್ತಾನದ ಐಎಸ್ಐ ಏಜೆಂಟ್ ಶಕೀರ್ ಜೊತೆ ಜಸ್​ಬೀರ್ ನಿರಂತರವಾಗಿ ಸಂಪರ್ಕದಲ್ಲಿರುತ್ತಾನೆ. ಆತನ ಫೋನ್ ಸಂಖ್ಯೆಯನ್ನು ಜಟ್ ರಾಂಧವ ಎಂಬ ಹೆಸರಿನಲ್ಲಿ ತನ್ನ ಫೋನ್‌ನಲ್ಲಿ ಸೇವ್ ಮಾಡಿಕೊಂಡಿರುತ್ತಾನೆ. ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಅಲ್ಲಿನ ಹಲವಾರು ಹೋಟೆಲ್‌ಗಳಲ್ಲಿ ಐಎಸ್‌ಐ ಅಧಿಕಾರಿಗಳನ್ನು ಭೇಟಿಯಾಗಿರುತ್ತಾನೆ. ಜಸ್ಬೀರ್ ಸಿಂಗ್ ಎರಡು ಪಾಸ್‌ಪೋರ್ಟ್‌ಗಳನ್ನು ಕೂಡ ಹೊಂದಿರುತ್ತಾನೆ ಎನ್ನುವ ವಿಚಾರಗಳು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ. ಜಸ್ಬೀರ್ ಸಿಂಗ್ ಇದುವರೆಗೆ ಮೂರು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ.

ಪಾಕಿಸ್ತಾನದ ರಾಯಭಾರ ಕಚೇರಿ ಮತ್ತು ಸೇನಾ ಅಧಿಕಾರಿಗಳ ಸಂಪರ್ಕ

ಯೂಟ್ಯೂಬರ್ ಜಸ್ಬೀರ್ ಸಿಂಗ್ ಪಾಕಿಸ್ತಾನಿ ಯೂಟ್ಯೂಬರ್ ನಾಸಿರ್ ಧಿಲ್ಲೋನ್ ಮೂಲಕ ಡ್ಯಾನಿಶ್ ಎಂಬ ಅಧಿಕಾರಿಯನ್ನು ಭೇಟಿಯಾಗಿರುತ್ತಾನೆ. ಡ್ಯಾನಿಶ್ ಪಾಕಿಸ್ತಾನಿ ರಾಯಭಾರ ಕಚೇರಿಯೊಂದಿಗೆ ಸಂಬಂಧ ಹೊಂದಿರುತ್ತಾನೆ. ಜಸ್ಬೀರ್ ಸಿಂಗ್ ಮತ್ತು ಡ್ಯಾನಿಶ್ ಹಲವಾರು ಬಾರಿ ಭೇಟಿಯಾಗಿದ್ದಾರೆ. ಬೇಹುಗಾರಿಕೆ ಆರೋಪದ ಮೇಲೆ ಈಗಾಗಲೇ ಬಂಧಿಸಲ್ಪಟ್ಟಿದ್ದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರೊಂದಿಗೆ ಜಸ್ಬೀರ್ ಪಾಕಿಸ್ತಾನ ರಾಯಭಾರ ಕಚೇರಿಗೆ ಹೋಗಿರುತ್ತಾನೆ. ಅಲ್ಲಿ ವಿವಿಧ ಪಾಕಿಸ್ತಾನಿ ಸೇನಾ ಅಧಿಕಾರಿಗಳನ್ನು ಸಹ ಭೇಟಿಯಾಗಿರುತ್ತಾನೆ ಎಂದು ಪೊಲೀಸರು ಚಾರ್ಜ್​ಶೀಟ್​ನಲ್ಲಿ ದಾಖಲೆ ಸಮೇತ ಮಾಹಿತಿ ನೀಡಿದ್ದಾರೆ.

ಲ್ಯಾಪ್‌ಟಾಪ್‌ನಿಂದ ಅಳಿಸಲಾಗಿದ್ದ ಡೇಟಾ

ಡ್ಯಾನಿಶ್ ಜಸ್ಬೀರ್ ಬಳಿ ಭಾರತೀಯ ಸಿಮ್ ಕಾರ್ಡ್​ವೊಂದನ್ನು ಕೇಳಿದ್ದರು. ಆದರೆ ಅದನ್ನು ನೀಡಲು ಜಸ್​ಬೀರ್​ಗೆ ಸಾಧ್ಯವಾಗಿರಲಿಲ್ಲ. ಇದಲ್ಲದೆ, ಜಸ್ಬೀರ್ ತನ್ನ ಲ್ಯಾಪ್‌ಟಾಪ್ ಅನ್ನು ಪಾಕಿಸ್ತಾನದ ಗುಪ್ತಚರ ಅಧಿಕಾರಿಯೊಬ್ಬರಿಗೆ ಹಸ್ತಾಂತರಿಸಿದ್ದರು. ಬಂಧನಕ್ಕೂ ಮುನ್ನ, ಜಸ್ಬೀರ್ ತನ್ನ ಲ್ಯಾಪ್‌ಟಾಪ್ ಮತ್ತು ಮೊಬೈಲ್‌ನಿಂದ ಬಹಳಷ್ಟು ಡೇಟಾವನ್ನು ಅಳಿಸಿಹಾಕಿರುತ್ತಾನೆ. ತಾಂತ್ರಿಕ ತಂಡವು ಈಗ ಅಳಿಸಿದ ಡೇಟಾವನ್ನು ಹಿಂಪಡೆಯಲು ಪ್ರಯತ್ನಿಸುತ್ತಿದೆ.

ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿಸಲ್ಪಟ್ಟ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರೊಂದಿಗೆ ಸಂಪರ್ಕದಲ್ಲಿದ್ದಕ್ಕಾಗಿ ಜಸ್ಬೀರ್ ಅವರನ್ನು ಜೂನ್‌ನಲ್ಲಿ ಬಂಧಿಸಲಾಗಿತ್ತು. ಈಗ ಈತನೂ ಕೂಡ ಪಾಕಿಸ್ತಾನದೊಂದಿಗೆ ನೇರವಾಗಿ ಬೇಹುಗಾರಿಕೆ ಮಾಡುತ್ತಿದ್ದುದು ಬೆಚ್ಚಿಬೀಳಿಸುವ ಸಂಗತಿ ಎನಿಸಿದೆ. ಪಾಕಿಸ್ತಾನದ ಈ ಬೇಹುಗಾರಿಕೆ ಜಾಲ ಇನ್ನೂ ಎಷ್ಟು ಗಾಢವಾಗಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯುತ್ತಾ ಹೋಗಬಹುದು.


Spread the love
Share:

administrator

Leave a Reply

Your email address will not be published. Required fields are marked *